ಅಫಜಲಪೂರ: ಕೊವಿಡ್ 19 ಮಹಾಮಾರಿ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಸೆಮಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡನೇಯ ದಿನವೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಫಜಲಪೂರ: ಕೊವಿಡ್ 19 ಮಹಾಮಾರಿ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಸೆಮಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡನೇಯ ದಿನವೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾರ್ವಜನಿಕರು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ದಿನ ಬಳಕೆಯ ಹಾಲಿನ ಅಂಗಡಿ ತರಕಾರಿ ಕಿರಾಣಿ ಅಂಗಡಿ ಮುಂಗಟ್ಟುಗಳು ತೆಗೆದಿದ್ದು10 ಗಂಟೆ ನಂತರ ಗ್ರಾಮ ಪಂಚಾಯತ ವತಿಯಿಂದ ಪೋಲಿಸ್ ಇಲಾಖೆ ವತಿಯಿಂದ ಗ್ರಾಮದ ಎಲ್ಲಾ ಅಂಗಡಿ ಮುಂಗಟ್ಟುಗಳು ಹೊಟೆಲ್ ಗಳು ಬಂದ್ ಮಾಡಿಸಲಾಯಿತು.
ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಲಾಕ್ ಡೌನ್ ಗೆ ಬೆಂಬಲ ನೀಡಿದರು.
ಅನಾವಶ್ಯಕವಾಗಿ ದ್ವಿಚಕ್ರ ವಾಹನದ ಮೇಲೆ ತಿರುಗಾಡಬಾರದು ಹೊಟೆಲ್ ಅಂಗಡಿಗಳು ಪಾನ ಶ್ಯಾಪ ಬೇಕರಿ ಬಂದಮಾಡಿ ಕೊರೊನ ಎಂಬ ಮಹಾಮಾರಿ ಮನೆಗೆ ವಯ್ಯಬೇಡಿ ನಮ್ಮಿಂದ ನಾವೆ ಜಾಗೃತರಿರಬೇಕೆಂದು ಪೋಲಿಸ ಪ್ರಕಟಣೆ ಮೂಲಕ ಸುರೇಶ ಬಾಬು ಕ್ರೈಮ್ ಪಿಎಸ್ಐ ಮಣ್ಣೂರದಲ್ಲಿ ಸಾರ್ವಜನಿಕರಿಗೆ ತಿಳಿಸಿದರು.