ಶ್ರೀ ಸಿಮೆಂಟ್ ಕಂಪನಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು
ಸೇಡಂ: ತಾಲೂಕಿನ ಶ್ರೀ ಸಿಮೆಂಟ್ ಕಂಪನಿಗೆ ಜಿಲ್ಲಾಧಿಕಾರಿಗಳಾದ ವಿ.ವಿ.ಜ್ಯೋತ್ಸ್ನಾ ಭೇಟಿ ನೀಡಿದರು.
ಇಲ್ಲಿಯವರೆಗೆ ಸುಮಾರು 5200 ಆಕ್ಸಿಜನ್ ಸಿಲಿಂಡರಗಳನ್ನು ಕಲ್ಬುರ್ಗಿಯ ESIC ಆಸ್ಪತ್ರೆಗೆ ಶ್ರೀ ಸಿಮೆಂಟ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಪೂರೈಕೆ ಮಾಡಲಾಗಿದೆ.
ಈ ಮೂಲಕ ಶ್ರೀ ಸಿಮೆಂಟ್ ಕಂಪನಿಯು ಕೋರೋನ ಮಹಾಮಾರಿಯ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವುದರಿಂದ ಕಂಪನಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಸಹಾಯಕ ಉಪ ವಿಭಾಗ ಆಯುಕ್ತರಾದ ರಮೇಶ್ ಎಸ್ ಕೋಲಾರ್, ತಹಸೀಲ್ದಾರರಾದ ಬಸವರಾಜ್ ಬೆಣ್ಣಿ ಶಿರೂರು, ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಹಳ್ಳಿಗೋದಿ, ಶ್ರೀ ಸಿಮೆಂಟ್ ಕಂಪನಿಯ ಯೂನಿಟ್ ಅರವಿಂದ್ ಕುಮಾರ್ ಪಾಟೀಲ್, ರವಿ ದೇಶಮುಖ್, ಜಗದೀಶ್ ಆರ್, ಅಜಯ್ ಬಿಹಾರಿ ಲಾಲ್, ರಾಕೇಶ್ ಹಾಗೂ ಕಂಪನಿಯ ಸಿಬ್ಬಂದಿ ವರ್ಗದವರು ಇದ್ದರು.