ಅಫಜಲಪೂರ : ಕೊರೊನಾ ಸೋಂಕಿತರಿಗೆ ಗ್ರಾಮ ಪಂಚಾಯಿತಿಯಿಂದ ಉಚಿತ ವಾಹನ ಸೇವೆ
ಕೊರೊನಾ ಸೋಂಕಿತರನ್ನು ಘತ್ತರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಘತ್ತರಗಾ. ಹವಳಗಾ. ಕೊಳನೂರ ಗ್ರಾಮಗಳಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸುವುದು, ಮತ್ತು ಗುಣಮುಖರಾದವರನ್ನು ಅವರ ಊರುಗಳಿಗೆ ಕರೆದೊಯ್ಯುವ ಕಾರ್ಯವನ್ನು ಗ್ರಾಮ ಪಂಚಾಯತಿ ಘತ್ತರಗಾದಲ್ಲಿ ಉಚಿತವಾಗಿ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಮುದಾಯಕ್ಕೂ ಹರಡುತ್ತಿದೆ. ಗ್ರಾಮ ಪಂಚಾಯತಿ ವಾಹನವನ್ನು ಕೊರೋನ ಸೊಂಕಿತರಿಗೆ ಅನುಕೂಲವಾಗಲು ಮೀಸಲಿಡಲಾಗಿದೆ, ಇದರಿಂದ ಗ್ರಾಮದ ಜನರಿಗೆ ಕೊರೋನಾ ಪೀಡಿತರಿಗೆ ನೆರವಾಗಲಿದೆ.
ಕೊರೊನಾ ಶೋಂಕಿತರನ್ನು ವಿವಿಧ ಗ್ರಾಮಗಳಿಂದ ಕರೆತಂದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೊಳಪಡಿಸಲಾಗುತ್ತಿದೆ. ಅದೇ ರೀತಿ ಗುಣಮುಖರಾದವರನ್ನು ಅವರ ಮನೆಗಳಿಗೆ ಕಳುಹಿಸಿಕೊಡಲಾಗಿದೆ.
ಸಂಪೂರ್ಣ ಲಾಕ್ಡೌನ್ ಇರುವುದರಿಂದ ಹಳ್ಳಿಯಿಂದ ಯಾವುದೇ ವಾಹನವು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಅಥವಾ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲು ಒಪ್ಪದಿರುವ ಈ ಸಂದರ್ಭ ಗ್ರಾಮ ಪಂಚಾಯತಿ ವಾಹನವು ಅನೇಕರಿಗೆ ಅನುಕೂಲವಾಗಿದೆ.
ಉಚಿತ ವಾಹನದ ಸೌಲಭ್ಯವಿದ್ದು, ಕೊರೋನಾ ಸೋಂಕಿತರು ಮತ್ತು ಗುಣಮುಖರಾದರು 9880131359 ದೂರವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದು ಎಂದು ಗ್ರಾಮ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ.
*ವರದಿಗಾರರು ಶಿವಲಿಂಗೇಶ್ವರ.ಎಸ್.ಜೆ ಅಫಜಲಪೂರ*