ಉದ್ಯೋಗ ಖಾತ್ರಿ ಯೋಜನೆ ಸ್ಥಗಿತ ವಿರೋಧಿಸಿ ರೈತ ಸಂಘದ ಪ್ರತಿಭಟನೆ

ಕಲಬುರಗಿ : ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾದ್ಯಂತ ಎಲ್ಲ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಅವರ ಮನೆ ಮುಂದೆ, ಮನೆಯ ಮಾಳಿಗೆ ಮುಂದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ, ತಡೆಹಿಡಿದ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ ಇಲವಾದಲ್ಲಿ ಕೃಷಿ ಕೂಲಿಕಾರರಿಗೆ ಪರಿಹಾರಧನ ಕೊಡಬೇಕು ಎಂದು ಒತ್ತಾಯಿಸಿದರು.
ಕೊರೋನಾ ಸೋಂಕು ತಡೆಯಲು ಲಾಕ್‍ಡೌನ್ ವಿಧಿಸಿ ಬಿಜೆಪಿ ಸರ್ಕಾರ ಉದ್ಯೋಗ ಖಾತ್ರಿ ಕಡಿತಗೊಳಿಸಲಾಗಿದೆ ಎಂದು ಖಂಡಿಸಿದ ಅವರು, ರೈತರ ಹೊಲಗಳಲ್ಲಿ ಕೆಲಸವಿಲ್ಲ. ಗ್ರಾಪಂಗೆ ಫಾರಂ ನಂ6 ಭರ್ತಿ ಮಾಡಿದರು ಕೊರೊನಾ ಹೆಸರಿನಲ್ಲಿ ಕೂಲಿ ಕಾರರನ್ನು ಕೆಲಸ ನೀಡದೆ ಇರುವುದು ಸರಿಯಲ್ಲ. ಕೆಲಸ ಕೇಳಿದವರಿಗೆ ಕೆಲಸ ಒದಗಿಸಬೇಕು. ರೋಗ ತಡೆಗಟ್ಟುವ ಬದಲು ಪೊಲೀಸರನ್ನು ಮುಂದೆ ಮಾಡಿ ಜನರಿಗೆ ಲಾಠಿ ಮೂಲಕ ಹೆದರಿಕೆ ಹಾಕುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರಿಗೆ, ಕಾರ್ಮಿಕರಿಗೆ, ದೀನ ದಲಿತರಿಗೆ ದಿವಾಳಿ ಎಬ್ಬಿಸಿದ್ದಾರೆ. ಮತ ಪಡೆಯುವಾಗ ಸಾಮಾನ್ಯ ಜನರ ಬಳಿ ಕೈಮುಗಿದು ಈಗ ಅವರ ಬದಕು ದಿವಾಳಿಯನ್ನಾಗಿ ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಕಷ್ಟದಲ್ಲಿರುವ ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ 10 ಸಾವಿರ ರೂ.ಗಳು ಅವರ ಬ್ಯಾಂಕ್ ಖಾತೆಗೆ ಪರಿಹಾರ ಜಮಾಕೈಗೊಳ್ಳಬೇಕು. ನಗರದ ಪ್ರದೇಶದಿಂದ ಮರಳಿ ಗ್ರಾಮೀಣಕ್ಕೆ ಬಂದವರಿಗೂ ಉದ್ಯೋಗ ಖಾತ್ರಿ ಕಾಮಗಾರಿ ನೀಡಬೇಕು. 100 ದಿನಗಳ ಬದಲು 200 ದಿನಕ್ಕೆ ಹೆಚ್ಚಿಸಿ ಕೂಲಿ 285 ರೂ.ಗಳ ಬದಲು 600 ರೂ.ಗಳ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಈಗಾಗಲೇ ಮಾಡಿದ ಕಾಮಗಾರಿಯ ಕೂಲಿಯ ಹಣವನ್ನು ತಕ್ಷಣವೇ ಪಾವತಿಸಬೇಕು. ಪ್ರತಿ ಕುಟುಂಬಕ್ಕೆ 15 ಕೆ.ಜಿ. ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *