ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್ಡೌನ್ ವಿಸ್ತರಣೆ; ಯಾವುದಕ್ಕೆ ಅನುಮತಿ, ಯಾವುದಕ್ಕೆ ನಿರ್ಬಂಧ?
ಮುಂಬೈ: ರಾಜ್ಯದಲ್ಲಿ ಕೋವಿಡ್ -19 ಸೋಂಕುಗಳ ಸರಪಳಿ ಮುರಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಜೂನ್ 1 ರವರೆಗೆ ಲಾಕ್ಡೌನ್ ವಿಸ್ತರಿಸಿದೆ. ಜೂನ್ 1 ರಂದು ಬೆಳಿಗ್ಗೆ 7 ಗಂಟೆಯವರೆಗೆ ಲಾಕ್ಡೌನ್ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಆದೇಶದಲ್ಲಿ ತಿಳಿಸಿದ್ದಾರೆ. ಕೊರೋನಾ ಎರಡನೇ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕಾರಣ ಏಪ್ರಿಲ್ 15 ರಿಂದ ಮಹಾರಾಷ್ಟ್ರದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ರಾಜ್ಯದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಮೇ 14 ಕ್ಕೆ ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಸೋಂಕು ಕಡಿಮೆಯಾಗದ ಕಾರಣ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.
- ಆಹಾರ ಪದಾರ್ಥಗಳ ಎಲ್ಲಾ ಅಗತ್ಯ ಖರೀದಿಗೆ ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ಮಾತ್ರ ಅವಕಾಶವಿರುತ್ತದೆ.
- ಹಾಲು ಸಂಗ್ರಹಣೆ, ಸಾರಿಗೆ ಮತ್ತು ಸಂಸ್ಕರಣೆಯನ್ನು ಯಾವುದೇ ನಿರ್ಬಂಧಗಳಿಲ್ಲದೆ ಓಡಾಟಕ್ಕೆ ಅನುಮತಿ ನೀಡಲಾಗಿದೆ.
- ಕೆಲವು ಷರತ್ತುಗಳೊಂದಿಗೆ ಸಾರ್ವಜನಿಕ ಸಾರಿಗೆ ಓಡಾಟಕ್ಕೆ ಅನುಮತಿ ನೀಡಲಾಗಿದೆ.
- ವಿಮಾನ ನಿಲ್ದಾಣ, ಬಂದರು ಸೇವೆಗಳು ಮತ್ತು COVID-19 ನಿರ್ವಹಣೆಗೆ ಔಷಧ ಅಥವಾ ಸಲಕರಣೆಗಳಿಗೆ ಸಂಬಂಧಿಸಿದ ಸರಕುಗಳ ಸಾಗಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಸ್ಥಳೀಯ, ಮೊನೊ ಮತ್ತು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.
- ಹೊರ ರಾಜ್ಯದಿಂದ ಬರುವ ವ್ಯಕ್ತಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಪರೀಕ್ಷಾ ವರದಿ ರಾಜ್ಯಕ್ಕೆ ಪ್ರವೇಶಿಸುವ ಸಮಯಕ್ಕಿಂತ 48 ಗಂಟೆಗಳ ಒಳಗೆ ಇರತಕ್ಕದ್ದು.
- ಸೂಕ್ಷ್ಮ ಸ್ಥಳಗಳಿಂದ ಬರುವ ಜನರಿಗೆ ಹಿಂದಿನ ಆದೇಶದಂತೆ ಜಾರಿಗೊಳಿಸಲಾದ ಎಲ್ಲಾ ನಿರ್ಬಂಧಗಳು ದೇಶದ ಯಾವುದೇ ಭಾಗದಿಂದ ರಾಜ್ಯಕ್ಕೆ ಬರುವ ಯಾರಿಗಾದರೂ ಅನ್ವಯವಾಗುತ್ತವೆ.
- ಸರಕು ಸಾಗಣೆದಾರರ ಸಂದರ್ಭದಲ್ಲಿ, ಆ ವಾಹನಗಳಲ್ಲಿ ಎರಡು ಜನರಿಗಿಂತ ಹೆಚ್ಚು ಜನರಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ.ಯಾವುದಕ್ಕೆ ನಿರ್ಬಂಧ?
- ಅಗತ್ಯ ಸೇವೆಗಳನ್ನು ಹೊರತುಪಡಿಸಿದ ಎಲ್ಲಾ ಅಂಗಡಿಗಳು, ಮಾಲ್ಗಳು, ಖರೀದಿ ಕೇಂದ್ರಗಳನ್ನು ಮುಚ್ಚಲಾಗುವುದು. ಕ್ಷೌರಿಕ ಅಂಗಡಿಗಳು, ಸ್ಪಾಗಳು, ಸಲೂನ್ಸ್ ಮತ್ತು ಬ್ಯೂಟಿ ಪಾರ್ಲರ್ಗಳು ಮುಚ್ಚಲಿವೆ.
- ಸಿನೆಮಾ ಹಾಲ್ಗಳು, ನಾಟಕ ಚಿತ್ರಮಂದಿರಗಳು ಮತ್ತು ಸಭಾಂಗಣಗಳು ತೆರೆಯಲು ಅವಕಾಶವಿಲ್ಲ.
- ಅಮ್ಯೂಸ್ಮೆಂಟ್ ಪಾರ್ಕ್ಗಳು / ಆರ್ಕೇಡ್ಗಳು / ವಿಡಿಯೋ ಗೇಮ್ ಪಾರ್ಲರ್ಗಳು / ವಾಟರ್ ಪಾರ್ಕ್ಗಳು ಹಾಗೂ ಕ್ಲಬ್ಗಳು, ಈಜುಕೊಳಗಳು, ಜಿಮ್ಗಳು ಮತ್ತು ಕ್ರೀಡಾ ಸಂಕೀರ್ಣಗಳು ಸಹ ಮುಚ್ಚಲಿವೆ.
- ಧಾರ್ಮಿಕ ಪೂಜಾ ಸ್ಥಳಗಳು
- ಚಲನಚಿತ್ರಗಳು, ಧಾರಾವಾಹಿಗಳು, ಜಾಹೀರಾತು ಚಿತ್ರೀಕರಣ ರದ್ದು.
- ಶಾಲೆಗಳು ಮತ್ತು ಕಾಲೇಜುಗಳು ಹಾಗೂ ಎಲ್ಲಾ ರೀತಿಯ ಖಾಸಗಿ ಕೋಚಿಂಗ್ ತರಗತಿಗಳಿಗೆ ನಿರ್ಬಂಧ.
- ಕಡಲತೀರಗಳು, ಉದ್ಯಾನಗಳು, ತೆರೆದ ಸ್ಥಳಗಳು ಮುಂತಾದ ಸಾರ್ವಜನಿಕ ಸ್ಥಳಗಳು ಮುಚ್ಚಲ್ಪಡುತ್ತವೆ. ಇಲ್ಲಿ ಉಲ್ಲೇಖಿಸಲಾದ ಯಾವುದೇ ಬಳಕೆಗಳಿಗೆ ಸೇರಿದ ಯಾವುದೇ ಸಾರ್ವಜನಿಕ ರಂಗದ ಸಂದರ್ಭದಲ್ಲಿ, ಈ ಆದೇಶದ ಕಾರ್ಯಾಚರಣೆಯ ಸಮಯದಲ್ಲಿ ಸ್ಥಳೀಯ ಪ್ರಾಧಿಕಾರವು ಅದರ ಬಳಕೆಯನ್ನು ಮುಂದುವರಿಸುವುದು ಅಥವಾ ನಿಲ್ಲಿಸುವ ಬಗ್ಗೆ ನಿರ್ಧರಿಸಬಹುದು.
- ಸಿಆರ್ಪಿಸಿಯ ಸೆಕ್ಷನ್ 144 ಜಾರಿಯಲ್ಲಿದ್ದು, ಒಂದೇ ಸ್ಥಳದಲ್ಲಿ ಐದು ಅಥವಾ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ.
- ಸ್ಥಳೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಎಂಎ) ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮೀಣ ಮಾರುಕಟ್ಟೆಗಳು ಮತ್ತು ಎಪಿಎಂಸಿಗಳು (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು) ಬಗ್ಗೆ ವಿಶೇಷ ಜಾಗರೂಕತೆ ವಹಿಸಲಿವೆ.
-
ಸ್ಥಳೀಯ ಡಿಎಂಎಗಳಿಗೆ ಸಾಮಾನ್ಯ ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ವಿಧಿಸುವ ಅಧಿಕಾರ ನೀಡಲಾಗಿದೆ. ಸ್ಥಳೀಯ ಡಿಎಂಎಗಳು ರಾಜ್ಯ ಡಿಎಂಎಗೆ ಮಾಹಿತಿ ನೀಡಿ, ಈ ಸ್ಥಳಗಳಲ್ಲಿ ನಿರ್ಬಂಧಗಳನ್ನು ವಿಧಿಸಬಹುದು. ಮತ್ತು ಸಾರ್ವಜನಿಕರಿಗೆ ಕನಿಷ್ಠ 48 ಗಂಟೆಗಳ ನೋಟಿಸ್ ನೀಡಬೇಕು.