ರಾಮ ಮಂದಿರ ಭೂಮಿ ಪೂಜೆ: ಪ್ರಧಾನಿ ಭೇಟಿಗೆ ಸಕಲ ಸಿದ್ಧತೆ, ಇಲ್ಲಿದೆ ಪೂರ್ಣ ವಿವರ

ಅಯೋಧ್ಯೆಯನ್ನು ತಲುಪಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲು ಹನುಮಂಗಾರ್ಹಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಯೋಧ್ಯೆಯಲ್ಲಿ ರಾಮ್‌ಲಾಲಾ ಅವರ ಕೆಲಸಕ್ಕೆ ಮೊದಲು ಹನುಮಾನ್ ಜಿ ಅನುಮತಿ ಅಗತ್ಯ ಎಂದು ನಂಬಲಾಗಿದೆ.

ಅಯೋಧ್ಯೆ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದು ಅಯೋಧ್ಯೆ (Ayodya) ಭೇಟಿ ಸಂಪೂರ್ಣ ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಲಾಗಿದೆ.

ಮಾಹಿತಿಯ ಪ್ರಕಾರ ಅಯೋಧ್ಯೆ ತಲುಪಿದ ನಂತರ ಪ್ರಧಾನಿ ನರೇಂದ್ರ ಮೋದಿ (Narendra MOdi) ಮೊದಲಿಗೆ ಹನುಮಂಗಾರ್ಹಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಯೋಧ್ಯೆಯಲ್ಲಿ ರಾಮ್‌ಲಾಲಾ ಕೆಲಸಕ್ಕೆ ಮೊದಲು ಹನುಮಾನ್ ಜಿ ದರ್ಶನ ಅಗತ್ಯ ಎಂದು ನಂಬಲಾಗಿದೆ.

ಅಯೋಧ್ಯೆಯಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರಿಂದ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಎಚ್ಚರಿಕೆ

ಹನುಮಂಗಾರ್ಹಿ ದರ್ಶನದ ಬಳಿಕ ಪ್ರಧಾನಿ ನೇರವಾಗಿ ರಾಮ ಜನ್ಮ ಭೂಮಿ ಸಂಕೀರ್ಣಕ್ಕೆ ಹೋಗಿ ಅಲ್ಲಿ ರಾಮ್‌ಲಾಲಾರನ್ನು ನೋಡುತ್ತಾರೆ. ರಾಮ್‌ಲಾಲಾ ನೋಡಿದ ನಂತರ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಭೂಮಿ ಪೂಜೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ (Ram Mandir) ನಿರ್ಮಾಣದ ಬಗ್ಗೆ ಐತಿಹಾಸಿಕ ಭಾಷಣ ಮಾಡಲಿದ್ದಾರೆ. ಇದರೊಂದಿಗೆ ರಾಮ್ ಜನ್ಮ ಭೂಮಿ  ಕ್ಯಾಂಪಸ್‌ನಿಂದ ಅಯೋಧ್ಯೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ  ಎಂದು ಹೇಳಲಾಗುತ್ತಿದೆ.

ಬಳಿಕ ಪ್ರಧಾನಿ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಸ್ವಲ್ಪ ಸಮಯ ಕಳೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವರು ಕೆಲವು ಪ್ರಮುಖ ಸಾಧು ಸಂತರನ್ನು ಸಹ ಭೇಟಿಯಾಗುವ ನಿರೀಕ್ಷೆಯಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *