ಕರೋನಾ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡ ಅಮಿತಾಬ್ ಬಚ್ಚನ್
ನವದೆಹಲಿ : ಕರೋನ ವೈರಸ್ (Corona virus) ಎರಡನೇ ಅಲೆಯು ಇಡೀ ದೇಶವನ್ನೇ ತತ್ತರಿಸಿದೆ. ಹೀಗಿರುವಾಗ ಕರೋನಾ ವೈಸರ್ ನಿಂದ ಕಾಪಾಡಿಕೊಳ್ಳಬೇಕಾದರೆ ಲಸಿಕೆ (Vaccine) ಹಾಕಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ವಿಚಾರದಲ್ಲಿ ಬಾಲಿವುಡ್ ತಾರೆಯರು ಬಹಳ ಎಚ್ಚರಿಕೆಯಿಂದಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ (Salman Khan) ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳುವ ಮೂಲಕ ಈದ್ ಆಚರಿಸಿಕೊಂಡಿದ್ದರು. ಇದೀಗ, ಅಮಿತಾನ್ ಬಚ್ಚನ್ (Amitabh Bachchan) ಕೂಡಾ ಕರೋನಾ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ.
ಫೋಟೋ ಶೇರ್ ಮಾಡಿರುವ ಅಮಿತಾಬ್ :
ಲಸಿಕೆ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿರುವ ಅಮಿತಾಬ್ (Amitabh Bachchan) ತಾನು ಲಸಿಕೆಯ ಎರಡನೇಯ ಡೋಸ್ ಹಾಕಿಸಿರುವುದನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ : Real star Upendra : ಲಾಕ್ಡೌನ್ ನಿಂದ ಕಂಗೆಟ್ಟ ರೈತರಿಗೆ ಗುಡ್ ನ್ಯೂಸ್ ನೀಡಿದ ನಟ ಉಪೇಂದ್ರ..!
ಏಪ್ರಿಲ್ ನಲ್ಲಿ ಮೊದಲ ಡೋಸ್ ಹಾಕಿಸಿಕೊಂಡಿದ್ದ ಬಿಗ್ ಬಿ :
ಅಮಿತಾಬ್ ಬಚ್ಚನ್, ಕರೋನಾ ಲಸಿಕೆಯ (COVID Vaccine) ಮೊದಲ ಡೋಸ್ ಅನ್ನು ಏಪ್ರಿಲ್ ನಲ್ಲಿಯೇ ಹಾಕಿಸಿಕೊಂಡಿದ್ದರು. ಈ ಬಗ್ಗೆ ಬ್ಲಾಗ್ ನಲ್ಲಿ ಮತ್ತು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದರು. ಅಭಿಷೇಕ್ ಬಚ್ಚನ್ ಒಬ್ಬರನ್ನು ಬಿಟ್ಟು ಪರಿವಾರದ ಎಲ್ಲಾ ಸದಸ್ಯರು ಮೊದಲ ಡೋಸ್ ಲಸಿಕೆ (Vaccine) ಹಾಕಿಸಿಕೊಂಡಿರುವುದಾಗಿ ಹೇಳಿದ್ದರು. ಅಭಿಷೇಕ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಕಾರಣ, ಮೊದಲ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದರು.
ಕಳೆದ ವರ್ಷ ಅಮಿತಾಬ್ ಕೂಡಾ ಸೋಂಕಿಗೆ ಗುರಿಯಾಗಿದ್ದರು :
ಕಳೆದ ವರ್ಷ ಮೊದಲ ಅಲೆಯಲ್ಲಿ ಅಮಿತಾಬ್ ಬಚ್ಚನ್ ಕೂಡಾ ಕೋವಿಡ್ 19 ಗೆ ತುತ್ತಾಗಿದ್ದರು. ದೀರ್ಘಕಾಲದವರೆಗೆ ಆಸ್ಪತ್ರೆಗೆ ದಾಖಲಾದ ನಂತರ, ಗುಣಮುಖರಾಗಿದ್ದರು. ಅವರೊಂದಿಗೆ, ಅಭಿಷೇಕ್ (Abhishek Bachchan), ಅಳಿಯ ಐಶ್ವರ್ಯಾ (Aishwarya Rai) ಮತ್ತು ಮೊಮ್ಮಗಳು ಆರಾಧ್ಯ ಕೂಡಾ ಕರೋನಾ ಪಾಸಿಟಿವ್ ಆಗಿದ್ದರು.