Cyclone Tauktae: ‘ತೌಕ್ತೆ’ ಎಂದರೆ ‘ಗದ್ದಲ ಸೃಷ್ಟಿಸುವ ಹಲ್ಲಿ’ ಎಂದರ್ಥ, ಇಲ್ಲಿದೆ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ
ನವದೆಹಲಿ: Cyclone Tauktae – ದೇಶದ ನೈಋತ್ಯ ರಾಜ್ಯಗಳಲ್ಲಿ ತೌಕ್ತೆ (Cyclone Tauktae) ಚಂಡಮಾರುತಕ್ಕೆ ಸಂಬಂಧಿಸಿದಂತೆ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ (Indian Ocean) ನಿರ್ಮಾಣಗೊಂಡ ಈ ಚಂಡಮಾರುತದ ಹಿನ್ನೆಲೆ NDRF ನ 53 ತುಕಡಿಗಳನ್ನು ಪ್ರಭಾವಕ್ಕೆ ಒಳಗಾಗುವ ರಾಜ್ಯಗಳಲ್ಲಿ ನಿಯೋಜಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತೌಕ್ತೆ ಅಪಾರ ಹಾನಿ ಸೃಷ್ಟಿಸಲಿದೆ ಎಂದು ಅಂದಾಜಿಸಿದೆ. ಇಲಾಖೆಯ ಪ್ರಕಾರ ಮೇ 17 ರಂದು ಅಪಾಯಕಾರಿ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಚಂಡಮಾರುತದ ಹಿನ್ನೆಲೆ ಕೇರಳ ಹಾಗೂ ತಮಿಳುನಾಡಿನಲ್ಲಿ ನೆರೆಹಾವಳಿ ಸೃಷ್ಟಿಯಾಗಲಿದೆ ಎನ್ನಲಾಗಿದೆ.
ಚಂಡಮಾರುತಗಳು ಹೇಗೆ ಸೃಷ್ಟಿಯಾಗುತ್ತವೆ
ಬಿಸಿಯಾದ ಪ್ರದೇಶಗಳ ಸಾಗರದಲ್ಲಿ ಗಾಳಿಯು ಬಿಸಿಯಾದಾಗ ಮತ್ತು ಕಡಿಮೆ ವಾಯು ಒತ್ತಡದ ಪ್ರದೇಶವನ್ನು ಸೃಷ್ಟಿಸಿದಾಗ, ಘನೀಕರಣವು ಮೋಡಗಳನ್ನು ಸೃಷ್ಟಿಸುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಹೇಳುತ್ತಾರೆ. ಇದರ ನಂತರ, ಖಾಲಿ ಜಾಗವನ್ನು ತುಂಬಲು ತೇವಾಂಶವುಳ್ಳ ಗಾಳಿಯು ಬೇಗನೆ ಇಳಿಯುತ್ತದೆ. ಇದು ಬಲವಾದ ಗಾಳಿಯೊಂದಿಗೆ ಚಂಡಮಾರುತಕ್ಕೆ ಕಾರಣವಾಗುತ್ತದೆ.
ಈ ಚಂಡಮಾರುತಗಳು ಕೂಡ ಅಪಾರ ಹಾನಿ ಸೃಷ್ಟಿಸಿವೆ
ತೌಕ್ತೆ ಚಂಡಮಾರುತಕ್ಕೂ ಮೊದಲು, ಸೂಪರ್ ಸೈಕ್ಲೋನ್ ಆಂಫನ್ ಅಪಾರ ಹಾನಿಯನ್ನುಂಟು ಮಾಡಿತ್ತು. ಆಂಫನ್ (Cyclone Amphan) ಮೊದಲು, ಕತ್ರಿನಾ, ನಿವಾರ್, ನಿಸರ್ಗ್, ಹುಡ್ ಹುಡ್, ಫಾನಿ, ಬುಲ್ಬುಲ್, ಹಿಕಾಕಾ, ಲ್ಯಾರಿ, ಲಿಸಾ ಮತ್ತು ಕತ್ರಿನಾ ಸಹ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ದೇಶಗಳಲ್ಲಿ ಅಪಾರ ಹಾನಿ ಸೃಷ್ಟಿಸಿವೆ. ಈ ಚಂಡಮಾರುತಗಳು ಅಪಾರ ಪ್ರಾಣ ಮತ್ತು ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿವೆ.
ಇವುಗಳಿಗೆ ಹೆಸರಿಡುವ ಪದ್ಧತಿ ಭಾರತ ಆರಂಭಿಸಿದೆ
ಚಂಡಮಾರುತದ ವಿಲಕ್ಷಣ ಹೆಸರುಗಳಿಂದ ಅನೇಕ ಜನರು ಆಶ್ಚರ್ಯಚಕಿತರಾಗುತ್ತಾರೆ. ಇದರ ಹಿಂದೆ ಒಂದು ಇತಿಹಾಸವಿದೆ. ಅಟ್ಲಾಂಟಿಕ್ ಪ್ರದೇಶದಲ್ಲಿ 1953 ರ ಒಪ್ಪಂದದೊಂದಿಗೆ ಚಂಡಮಾರುತಗಳ ಹೆಸರನ್ನು ಪ್ರಾರಂಭಿಸಲಾಯಿತು. ಆದರೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈ ವ್ಯವಸ್ಥೆಯು 2004 ರಲ್ಲಿ ಪ್ರಾರಂಭವಾಯಿತು. ಭಾರತದ ಉಪಕ್ರಮದಲ್ಲಿ ಈ ಪ್ರದೇಶದ 8 ದೇಶಗಳು ಬಿರುಗಾಳಿಗಳನ್ನು ಹೆಸರಿಸಲು ಪ್ರಾರಂಭಿಸಿದವು. ಭಾರತವನ್ನು ಹೊರತುಪಡಿಸಿ, ಇದರಲ್ಲಿ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್ ಮತ್ತು ಥೈಲ್ಯಾಂಡ್ ಸೇರಿವೆ. 2018 ರಲ್ಲಿ ಯುಎಇ, ಇರಾನ್, ಕತಾರ್ ಮತ್ತು ಯೆಮೆನ್ ಸೇರಿದಂತೆ ಹಲವು ದೇಶಗಳು ಈ ಕ್ಲಬ್‌ಗೆ ಸೇರಿಕೊಂಡವು.
‘ತೌಕ್ತೆ’ ಹೆಸರನ್ನು ಮ್ಯಾನ್ಮಾರ್ ಇಟ್ಟಿದೆ
ಹಿಂದೂ ಮಹಾಸಾಗರದಲ್ಲಿ ಉದ್ಭವಿಸುವ ಚಂಡಮಾರುತಗಳಿವೆ ಹೆಸರನ್ನಿಡುವ ವಿಶೇಷ ಪ್ರಕ್ರಿಯೆ ಇದೆ. ಇದರ ಅಡಿಯಲ್ಲಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತದ ಸಾಧ್ಯತೆಯಿದ್ದರೆ, ಭಾರತ (India) ಸೇರಿದಂತೆ 13 ಸದಸ್ಯರು ವರ್ಣಮಾಲೆಯಂತೆ ಇದಕ್ಕೆ ವಿಶೇಷ ಹೆಸರನ್ನು ನೀಡುತ್ತಾರೆ. ಈ ಬಾರಿ ಚಂಡಮಾರುತದ ಹೆಸರನ್ನು ಸೂಚಿಸುವ ಸರದಿ ಮ್ಯಾನ್ಮಾರ್ ನದ್ದಾಗಿತ್ತು. ಅವರು ಈ ಚಂಡಮಾರುತಕ್ಕೆ ‘ಸೈಕ್ಲೋನ್ ಟೌಕ್ಟೇ’ ಎಂದು ಹೆಸರಿಟ್ಟಿದ್ದಾರೆ. ಮ್ಯಾನ್ಮಾರ್ ಪ್ರಕಾರ ಇದರ ಅರ್ಥ ‘ತುಂಬಾ ಗದ್ದಲ ಸೃಷ್ಟಿಸುವ ಹಲ್ಲಿ’ಯಾಗಿದೆ.