ತೌಕ್ತೆ ಚಂಡಮಾರುತ ಎಫೆಕ್ಟ್: ಕರಾವಳಿ ಭಾಗದ ಪರಿಸ್ಥಿತಿ ಕುರಿತಾಗಿ ಮಾಹಿತಿ ಪಡೆದ ಬಿಎಸ್‌ವೈ

ಹೈಲೈಟ್ಸ್‌:

  • ತೌಕ್ತೆ ಚಂಡಮಾರುತದ ಎಫೆಕ್ಟ್
  • ಕರಾವಳಿಯಲ್ಲಿ ರೆಡ್ ಅಲರ್ಟ್
  • ಫೋನ್ ಮಾಡಿ ಮಾಹಿತಿ ಪಡೆದ ಬಿಎಸ್‌ವೈ

ಬೆಂಗಳೂರು: ತೌಕ್ತೆ ಚಂಡಮಾರುತದ ಪರಿಣಾಮ ತೀವ್ರ ಸ್ವರೂಪದಲ್ಲಿ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕರಾವಾಳಿ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಸಚಿವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು.

ಭಾನುವಾರ ಕರಾವಳಿ ಭಾಗದಲ್ಲಿ ಉಂಟಾಗಿರುವ ಚಂಡಮಾರುತದ ಹಿನ್ನೆಲೆಯಲ್ಲಿ ‌ ಮುಖ್ಯಮಂತ್ರಿಗಳು ಕರಾವಳಿ ಭಾಗದ ಜಿಲ್ಲಾಧಿಕಾರಿಗಳು ಹಾಗು ಸಚಿವರುಗಳಿಗ ಕರೆ ಮಾಡಿ ಪರಿಸ್ಥಿತಿ ಯ ಮಾಹಿತಿ ಪಡೆದುಕೊಂಡಿದ್ದು ಕೋವಿಡ್ ನಡುವೆಯು ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಹಾರ ಹಾಗು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಸರ್ಕಾರದಿಂದ ಏನೇ ತುರ್ತು ನೆರವು ಬೇಕಿದ್ರು ಸಂಬಂಧಪಟ್ಟ ಸಚಿವರುಗಳಿಗೆ ಅಥವಾ ನನಗೆ ನೇರವಾಗಿ ಕರೆ ಮಾಡುವಂತೆಯು ಸಹ ಜಿಲ್ಲಾಧಿಕಾರಿಗಳಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತ ತೌಕ್ತೆ ಚಂಡಮಾರುತವಾಗಿ ಪರಿವರ್ತನೆ ಆಗಿದೆ. ಮಂಗಳವಾರದಂದು ಪೋರ್ ಬಂದರ್ ಮತ್ತು ನಲಿಯಾ ನಡುವೆ ಗುಜರಾತ್ ಕರಾವಳಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಿಯು- ದಮನ್ ಹಾದು ಹೋಗಲಿದೆ.

ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ಕರಾವಳಿಯಲ್ಲಿ ಮೇ 20ರ ವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಸಮುದ್ರ ಕೂಡಾ ಪ್ರಕ್ಷುಬ್ಧಗೊಂಡಿದ್ದು ತೀರ ಪ್ರದೇಶಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾನವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *