Petrol and Diesel Price: ಕೊರೋನಾ ಕಷ್ಟಕಾಲದಲ್ಲೂ ದಿನ ಬಿಟ್ಟು ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ
ನವದೆಹಲಿ(ಮೇ 16): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ಕೊರೊನಾ ಮೊದಲ ಅಲೆ ಇದ್ದಾಗಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿತ್ತು. ಈಗ ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂದರ್ಭದಲ್ಲೂ ಮೇ 4ರಿಂದ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಮೇ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 29 ಪೈಸೆ ಏರಿಕೆ ಮಾಡಿದೆ.
ಮೇ ತಿಂಗಳಲ್ಲಿ ಒಟ್ಟು ಒಂಭತ್ತು ಭಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಪ್ರತಿ ಪೆಟ್ರೋಲ್ ಮೇಲೆ 2.18 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 2.49 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೇ 5ರಂದು ಪ್ರತಿ ಪೆಟ್ರೋಲ್ ಮೇಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ, ಮೇ 6ರಂದು ಪ್ರತಿ ಪೆಟ್ರೋಲ್ ಮೇಲೆ 18 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 31 ಪೈಸೆ ಹಾಗೂ ಮೇ 7ರಂದು ಪ್ರತಿ ಪೆಟ್ರೋಲ್ ಮೇಲೆ 25 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 33 ಪೈಸೆ ಬೆಲೆ ಹೆಚ್ಚಿಸಿತ್ತು.
ಎರಡು ದಿನ ಮಾತ್ರ ವಿರಮಿಸಿದ್ದ ಕೇಂದ್ರ ಸರ್ಕಾರ ಬಳಿಕ ಮೇ 10ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 23 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 35 ಪೈಸೆ, ಮೇ 11ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 32 ಪೈಸೆ, ಮೇ 12ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 20 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ ಏರಿಕೆ ಮಾಡಿತ್ತು. ಮೇ 14ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 22 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 37 ಪೈಸೆ ಹೆಚ್ಚಳ ಮಾಡಿತ್ತು. ಮೇ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 29 ಪೈಸೆ ಏರಿಕೆ ಮಾಡಿದೆ.
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ
ಬೆಂಗಳೂರು- ಪೆಟ್ರೋಲ್ 95.66 ರೂ., ಡೀಸೆಲ್ 88.22 ರೂ.ಭೂಪಾಲ್- ಪೆಟ್ರೋಲ್ 100.63 ರೂ., ಡೀಸೆಲ್ 91.59 ರೂ.
ಜೈಪುರ – ಪೆಟ್ರೋಲ್ 99.02 ರೂ., ಡೀಸೆಲ್ 91.86 ರೂ.
ಮುಂಬೈ- ಪೆಟ್ರೋಲ್ 98.88 ರೂ., ಡೀಸೆಲ್ 90.40 ರೂ.
ಪಾಟ್ನಾ- ಪೆಟ್ರೋಲ್ 94.79 ರೂ., ಡೀಸೆಲ್ 88.46 ರೂ.
ಚೆನ್ನೈ- ಪೆಟ್ರೋಲ್ 94.31 ರೂ., ಡೀಸೆಲ್ 88.07 ರೂ.
ಕೋಲ್ಕತ್ತಾ- ಪೆಟ್ರೋಲ್ 92.67 ರೂ., ಡೀಸೆಲ್ 86.06 ರೂ.
ದೆಹಲಿ- ಪೆಟ್ರೋಲ್ 92.58 ರೂ., ಡೀಸೆಲ್ 83.22 ರೂ.
ಲಕ್ನೋ- ಪೆಟ್ರೋಲ್ 90.37 ರೂ., ಡೀಸೆಲ್ 83.60 ರೂ.
ರಾಂಚಿ- ಪೆಟ್ರೋಲ್ 89.57 ರೂ., ಡೀಸೆಲ್ 87.90 ರೂ.