ಹವ್ಯಾಸಿ ರಂಗಕರ್ಮಿ ಶ್ರೀಮತಿ ಶೋಭಾ ರಂಜೋಳಕರ್ ನಿಧನ
ಹಲವು ಕಿರುತೆರೆ ಧಾರಾವಾಹಿಗಳು ಸೇರಿದಂತೆ ನಾಡಿನ ಶ್ರೇಷ್ಠ ಸಾಹಿತಿ, ಕವಿ ಚಂದ್ರಶೇಖರ್ ಕಂಬಾರ ಅವರೊಂದಿಗೆ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಹಲವು ನಾಟಕಗಳನ್ನು ಸಹ ರಂಜೋಳಕರ್ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ನ ಚಟುವಟಿಕೆಗಳಲ್ಲಿಯೂ ಅವರು ಭಾಗಿಯಾಗುತ್ತಿದ್ದರು..
ಕಲಬುರಗಿ : ಹಿರಿಯ ಹವ್ಯಾಸಿ ರಂಗ ಕಲಾವಿದೆ ಶ್ರೀಮತಿ ಶೋಭಾ ರಂಜೋಳಕರ್ (70) ಅವರು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದ ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ರಂಗ ಪ್ರವೇಶ ಮಾಡಿದ್ದ ಅವರು, ನಾಲ್ಕು ದಶಕಗಳಿಂದ ರಂಗ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.
ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸುವುದರ ಜೊತೆ ಜೊತೆಗೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಹಲವು ಕಿರುತೆರೆ ಧಾರಾವಾಹಿಗಳು ಸೇರಿದಂತೆ ನಾಡಿನ ಶ್ರೇಷ್ಠ ಸಾಹಿತಿ, ಕವಿ ಚಂದ್ರಶೇಖರ್ ಕಂಬಾರ ಅವರೊಂದಿಗೆ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಹಲವು ನಾಟಕಗಳನ್ನು ಸಹ ರಂಜೋಳಕರ್ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ನ ಚಟುವಟಿಕೆಗಳಲ್ಲಿಯೂ ಅವರು ಭಾಗಿಯಾಗುತ್ತಿದ್ದರು.
ಮಹಿಳೆಯರ ಜಾಗೃತಿಗೆ ಶ್ರಮಿಸಿದ ರಂಜೋಳಕರ್ : ಮಹಿಳೆಯ ಜಾಗೃತಿಯ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು, ನಗರದ ಸಂಗಮೇಶ್ವರ ಕಾಲೋನಿಯಲ್ಲಿ ಶ್ರೀ ಸಂಗಮೇಶ್ವರ ಮಹಿಳಾ ಮಂಡಲದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ.
ಮಹಿಳಾ ಸಂಘದಲ್ಲಿ ಎಲ್ಲರೊಳಗೊಬ್ಬರಾಗಿ ಬೆರೆತು, ಮಹಿಳೆಯರಿಗಾಗಿ ಅನೇಕ ಮಹಿಳಾಪರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.