ಚಿಕ್ಕಮಗಳೂರು: ಆಸ್ಪತ್ರೆಯಿಂದ ಮನೆಗೆ ಬಂದ ಕೊರೊನಾ ಸೋಂಕಿತ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಂದ ತಮ್ಮ

ಹೈಲೈಟ್ಸ್‌:

  • ಕೊರೊನಾ ಸೋಂಕಿತ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಲೆ
  • ಆಸ್ಪತ್ರೆಯಿಂದ ಬಂದು ಜಗಲಿಯಲ್ಲಿ ಮಲಗಿದ ವೇಳೆ ಕೃತ್ಯ
  • ಸ್ವಂತ ತಮ್ಮನಿಂದ ಮನೆಯವರ ಮುಂದೆ ಪೈಶಾಚಿಕ ಕೃತ್ಯ

ಕಳಸ: ಕೊರೊನಾ ಸೋಂಕಿತ ಅಣ್ಣನನ್ನು ಒಡಹುಟ್ಟಿದ ತಮ್ಮನೇ ಮಚ್ಚು, ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ ಅಮಾನವೀಯ ಘಟನೆ ಕಳಸ ತಾಲೂಕು ಮರಸಣಿಗೆ ಗ್ರಾಮದ ಕಂಬಳಗದ್ದೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮಹಾವೀರ (45) ಕೊಲೆಯಾದ ವ್ಯಕ್ತಿ. ಪಾಶ್ರ್ವನಾಥ ಕೊಲೆ ಮಾಡಿದ ಆರೋಪಿ. ಕತ್ತಿಯನ್ನು ಕಸಿದುಕೊಂಡರೂ ಬಿಡದ ಪಾಶ್ವನಾಥ ಸೌದೆ ಕೊಟ್ಟಿಗೆಯಲ್ಲಿದ್ದ ಕೊಡಲಿಯನ್ನು ತಂದು ಕೊಚ್ಚಿ ಕೊಲೆ ಮಾಡುವ ಮೂಲಕ ಕ್ರೌರ‍್ಯ ಮೆರೆದಿದ್ದಾನೆ.

ಕಳೆದ 3 ದಿನಗಳ ಹಿಂದೆ ಮಹಾವೀರ್‌ಗೆ ಕೊರೊನಾ ಪಾಸಿಟಿವ್‌ ಬಂದಿದ್ದು, ಮೂಡಿಗೆರೆಯ ಸರಕಾರಿ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ 7ಕ್ಕೆ ಮಹಾವೀರ್‌ನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದಿದ್ದ ಪಾಶ್ವನಾಥ, ಮನೆಯ ಜಗುಲಿಯಲ್ಲಿ ಮಲಗಿಸಿದ್ದ.

ಮರಸಣಿಗೆ ಕಡೆಗೆ ಹೋಗಿ ರಾತ್ರಿ 8.30ಕ್ಕೆ ವಾಪಸು ಬಂದವನೇ ಕೈಯಲ್ಲಿ ಕತ್ತಿ ಹಿಡಿದು ಜಗುಲಿಯಲ್ಲಿ ಮಲಗಿದ್ದ ಅಣ್ಣ ಮಹಾವೀರನ ಕುತ್ತಿಗೆಯನ್ನು ಕಾಲಿನಿಂದ ಒತ್ತಿ ತುಳಿದು ತಲೆ ಮತ್ತು ಮುಖವನ್ನು ಕೊಚ್ಚಿದ್ದಾನೆ. ಸ್ಥಳದಲ್ಲಿದ್ದವರು ಕತ್ತಿಯನ್ನು ಕಸಿದುಕೊಂಡಿದ್ದು, ಸೌದೆ ಕೊಟ್ಟಿಗೆಗೆ ಓಡಿ ಹೋಗಿ ಕೊಡಲಿ ತಂದು ಪುನಃ ಮಹಾವೀರನ ಎಡಕಿವಿಯ ಬಳಿ ಹೊಡೆದಿದ್ದಾನೆ.

ತೀವ್ರವಾಗಿ ಗಾಯಗೊಂಡ ಮಹಾವೀರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಸ್ತಿ ವಿಚಾರದಲ್ಲಿಸೋದರರು ಈ ಹಿಂದೆ ಹಲವು ಬಾರಿ ಜಗಳವಾಡಿಕೊಂಡಿದ್ದರು ಎನ್ನಲಾಗಿದೆ. ಹಳೇ ದ್ವೇಷದಿಂದಲೇ ಹಲ್ಲೆನಡೆಸಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *