ಫೇಸ್‌ಬುಕ್‌, ಟ್ವಿಟ್ಟರ್‌ ಪ್ರೊಫೈಲ್‌ ಚಿತ್ರ ಬದಲಾಯಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಹೀಗೊಂದು ಪ್ರತಿಭಟನೆ

ಹೈಲೈಟ್ಸ್‌:

  • ಲಸಿಕೆಯನ್ನು ವಿದೇಶಕ್ಕೆ ರಫ್ತು ಮಾಡಿರುವ ವಿರುದ್ಧ ಭಿತ್ತಿಪತ್ರ ಪ್ರತಿಭಟನೆ
  • ಫೇಸ್‌ಬುಕ್‌, ಟ್ವಿಟ್ಟರ್‌ ಪ್ರೊಫೈಲ್‌ ಚಿತ್ರ ಬದಲಾಯಿಸಿದ ಸಿದ್ದರಾಮಯ್ಯ
  • ರಾಹುಲ್ ಗಾಂಧಿಯಿಂದಲೂ ಟ್ವಿಟ್ಟರ್‌ ಪ್ರೊಫೈಲ್ ಚಿತ್ರ ಬದಲಾವಣೆ

ಬೆಂಗಳೂರು: ದೇಶದ್ಯಾದ್ಯಂತ ಕೋವಿಡ್ ಲಸಿಕೆ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪೋಸ್ಟರ್‌ ಅಭಿಯಾನವನ್ನು ಹಮ್ಮಿಕೊಂಡಿದೆ. ವಿರೋಧ ಪಕ್ಷದ ನಾಯಕ

ಸಿದ್ದರಾಮಯ್ಯ ಕೂಡಾ ತಮ್ಮ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ ಪ್ರೊಫೈಲ್‌ ಚಿತ್ರವನ್ನು ಬದಲಾಯಿಸಿದ್ದು ಮೋದಿಜೀ ನಮ್ಮ ಮಕ್ಕಳ ವ್ಯಾಕ್ಸಿನ್ ವಿದೇಶಕ್ಕೆ ಏಕೆ ಕಳಿಸಿದಿರಿ? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲೂ ಹಲವು ಕಾಂಗ್ರೆಸ್ ಮುಖಂಡರು ತಮ್ಮ ಮನೆಯ ಮುಂದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟರ್ ಅಭಿಯಾನವನ್ನು ನಡೆಸುತ್ತಿದ್ದಾರೆ. ಲಸಿಕೆ ರಫ್ತು ಖಂಡಿಸಿ ದೆಹಲಿಯಲ್ಲಿ ಭಿತ್ತಿ ಪತ್ರ ಹಾಕಿದ್ದಕ್ಕಾಗಿ 25 ಮಂದಿಯನ್ನು ಬಂಧಿಸಿದ ಪೊಲೀಸರ ನಡೆಗೂ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಸ್ವತಃ ರಾಹುಲ್ ಗಾಂಧಿಯವರೂ ತಮ್ಮ ಟ್ವಿಟ್ಟರ್‌ನಲ್ಲಿ ವಿದೇಶಕ್ಕೆ ಲಸಿಕೆ ಏಕೆ ಕಳಿಸಿದಿರಿ ಎಂದು ಪ್ರಶ್ನಿಸಿದ್ದಾರೆ.

ಲಸಿಕೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 18- 44 ವರ್ಷದ ಒಳಗಿನವರಿಗೆ ಲಸಿಕೆ ನೀಡುವ ಅಭಿಯಾನವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ಮೊದಲನೇ ಡೋಸ್ ಪಡೆದುಕೊಂಡು ಎರಡನೇ ಡೋಸ್ ಪಡೆಯಲು ಸಿದ್ದರಾಗಿರುವರಿಗೂ ಲಸಿಕೆ ಸಿಗುತ್ತಿಲ್ಲ. ಸಾಕಷ್ಟು ಮಂದಿ ಲಸಿಕಾ ಕೇಂದ್ರಕ್ಕೆ ಬಂದು ವಾಪಸ್‌ ಹೋಗುವ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ.

ಒಂದು ವಾರದಲ್ಲೇ ಲಸಿಕೆ ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಸದ್ಯಕ್ಕೆ ಈ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಮತ್ತೊಂದು ಕಡೆಯಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿದೆ. ಇದನ್ನು ನಿಯಂತ್ರಣ ಮಾಡಲು ಲಾಕ್‌ಡೌನ್ ವಿಸ್ತರಣೆ ಮಾಡುವ ಚಿಂತನೆಯನ್ನು ಸರ್ಕಾರ ಇದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಲಸಿಕೆಗೆ ಕೊರತೆ ಎದುರಾಗಿರುವುದು ಹಾಗೂ ಆರಂಭದಲ್ಲಿ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿರುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಖಂಡಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *