ದೇಶದಲ್ಲಿ 6 ಸಾವಿರ ರೈಲು ನಿಲ್ದಾಣದಲ್ಲಿ ವೈ.ಫೈ ಸೌಲಭ್ಯ
ದೇಶದಲ್ಲಿ ಈವರೆಗೆ 6,000 ರೈಲ್ವೆ ನಿಲ್ದಾಣದಲ್ಲಿ ಭಾರತೀಯ ರೈಲ್ವೆ. ವೈ-ಫೈ ಸೌಲಭ್ಯ ಕಲ್ಪಿಸಿದೆ ಈ ಮೂಲಕ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಸಂಪರ್ಕಿಸಲು ದೂರದ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ವಿಸ್ತರಿಸುತ್ತಿದೆ.
ಜಾರ್ಖಂಡ್ ನ ಹಝಾರಿಬಾದ್ ನ ಪೂರ್ವ ಕೇಂದ್ರೀಯ ರೈಲ್ವೆಯ ಧನ್ ಬಾದ್ ವಿಭಾಗದ ಹಝಾರಿಬಾದ್ ಪಟ್ಟಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ 6000 ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ವನ್ನು ಅನುಷ್ಠಾನಗೊಳಿಸಿದೆ.
2016 ರ ಜನವರಿಯಲ್ಲಿ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮೊದಲನೇ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ ತನ್ನ ಯಾನ ಆರಂಭಿಸಿತ್ತು. ಇದಾದ ನಂತರ ಪೂರ್ವ ಬಂಗಾಳದ ಮಿಡ್ನಾಫುರದಲ್ಲಿ 5000 ನೇ ರೈಲ್ವೆ ನಿಲ್ದಾಣ ಮತ್ತು ಹಝಾರಿಬಾಗ್ ನಲ್ಲಿ 6000 ನೇ ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.
ಒಡಿಶಾದ ಅಂಗುಲ್ ಜಿಲ್ಲೆಯ ಜಾರಪದ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ.
ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ದೊರಕಿಸುವ ಮೂಲಕ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾದ ದ್ಯೇಯ ಮತ್ತು ನಿರೀಕ್ಷೆಗಳನ್ನು ಪೂರೈಸುತ್ತಿದೆ.
ಗ್ರಾಮೀಣ ಮತ್ತು ನಗರದ ನಾಗರಿಕರ ನಡುವೆ ಇರುವ ಡಿಜಿಟಲ್ ಅಂತರವನ್ನು ತಗ್ಗಿಸುವ, ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಹೆಜ್ಜೆ ಗುರುತುಗಳನ್ನು ಹೆಚ್ಚಿಸುವ ಮತ್ತು ಬಳಕೆದಾರರ ಅನುಭವವನ್ನು ವೃದ್ಧಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ಇದೀಗ ಭಾರತೀಯ ರೈಲ್ವೆ 6000 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ‍್ಯ ಕಲ್ಪಸಿದೆ.
ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದಿಂದ ರೈಲ್ವೆಗೆ ಯಾವುದೇ ವೆಚ್ಚವಾಗುವುದಿಲ್ಲ, ಸ್ವಯಂ ಸುಸ್ಥಿರತೆ ಆಧಾರದ ಮೇಲೆ ಈ ಸೌಕರ್ಯ ಒದಗಿಸಲಾಗುತ್ತಿದೆ. ರೈಲ್ವೆ ಸಚಿವಾಲಯದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ರೈಲ್ ಟೆಲ್ ನ ನೆರವಿನೊಂದಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗೂಗಲ್, ಡಿಒಟಿ ಪಿ.ಜಿ.ಸಿ.ಐ.ಎಲ್ ಮತ್ತು ಟಾಟಾ ಟ್ರಸ್ಟ್ ನ ಸಹಭಾಗಿತ್ವದಡಿ ಈ ಸೇವೆ ದೊರೆಯುತ್ತಿದೆ