ವರ್ಗಾವಣೆ ದಂಧೆ ಹಾಗೂ ದ್ವೇಷ ರಾಜಕೀಯದಲ್ಲೆ ಕಾಲ ಕಳೆದ ಬಿಜೆಪಿ ಸರ್ಕಾರ : ರೇವಣ್ಣ ಕಿಡಿ
ಹಾಸನ; ಕಳೆದ 12 ತಿಂಗಳಿಂದ ವರ್ಗಾವಣೆ ದಂಧೆಯಲ್ಲಿ ಹಣ ಲೂಟಿ ಮಾಡಿರುವುದೇ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಮಹಾ ಸಾಧನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಮುಂದಿನ ದಿನ ದಾಖಲೆ ಸಹಿತ ಆರೋಪ ಮಾಡುತ್ತೇನೆ. ಹಾಸನಕ್ಕೆ ನಿಯೋಜನೆ ಗೊಂಡಿರುವ ಇಂಜಿನಿಯರ್ ಗಳು ಲಕ್ಷಾಂತರ ರು ನೀಡಿ ಬಂದಿದ್ದಾರೆ ಈ ಬಗ್ಗೆ ಅವರೇ ಹೇಳಿದ್ದಾರೆ..
ಮಾನ ಮರ್ಯಾದೆ ಇಲ್ಲದ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ ಈಶ್ವರಪ್ಪ ಅವರು ನಾಲಿಗೆ ಹರಿಬಿಡೋದು ಬೇಡ.. ಹಣ ಎಣಿಕೆಯ ಮಿಷನ್ ಯಾರ ಮನೆಯಲ್ಲಿ ಇತ್ತು…!! ಚುನಾವಣಾ ಸಂದರ್ಭ ದಲ್ಲಿ ಅವರ ಮನೆಯಲ್ಲಿಯೇ ದೊರೆತದ್ದು ಜನರಿಗೆ ತಿಳಿದಿದೆ ಅಂತಹವರು ನನ್ನ ಮೇಲೇ ಆರೋಪ ಮಾಡೋದು ಎಷ್ಟು ಸರಿ..!! ಎಂದರು.
ಬಿಜೆಪಿ ಪಕ್ಷದ ಮುಖಂಡರಾದ ಹಾಗೂ ಸಚಿವರಾದ ಈಶ್ವರಪ್ಪ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಅಳಿಯನನ್ನು ಶಿವಮೊಗ್ಗ ಲೋಕೋಪಯೋಗಿ ಇಲಾಖೆಗೆ ನಿಯೋಜನೆ ಮಾಡಿದೆ ಅಲ್ಲದೆ ಈಶ್ವರಪ್ಪ ಅವರು ಕೆಲವರನ್ನು ವರ್ಗಾವಣೆ ಮಾಡಿಸಿದರು. ಸಹಾಯ ಪಡೆದ ಈಶ್ವರಪ್ಪ ಅವರು ಇಂದು ನನ್ನ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ..? ಅವರ ನಾಲಿಗೆಯನ್ನು ಹರಿಬಿಡುತ್ತಿರುವುದು ಅವರ ಗೌರವಕ್ಕೆ ತರವಲ್ಲ ಎಂದು ಹೇಳಿದರು.