Daily Horoscope: ದಿನಭವಿಷ್ಯ 17-05-2021 Today astrology
Daily Horoscope (ದಿನಭವಿಷ್ಯ 17-05-2021) : ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿಯಿರಿ…
ಮೇಷ ರಾಶಿ :
ನಿಮ್ಮ ಸುತ್ತಲು ಇರುವವರಿಂದ ಸಹಾಯ , ಬದ್ಧತೆಯನ್ನು ನೀವು ನಿರೀಕ್ಷಿಸುವಿರಿ, ಈ ದಿನ ನೀವು ಆತ್ಮವಿಶ್ವಾಸದಿಂದ ಕೂಡಿರುವಿರಿ. ನಿಮಗೆ ಕೆಲಸದ ಜಾಗದಲ್ಲಿ ಹೊಸ ಯೋಜನೆಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗುವುದು, ನೀವು ಇದಕ್ಕಾಗಿ ನಿಮ್ಮ ಪೋಷಕರ ಮನವೊಲಿಸಬೇಕಾಗುವುದು. ನಿಮ್ಮಲ್ಲಿ ಕೆಲವರಿಗೆ ಬಡ್ತಿಯೂ ಸಿಗಬಹುದು. ಸಂಗಾತಿಯೊಂದಿಗೆ ಇಂದು ಸಾಮರಸ್ಯದ ದಿನವಾಗಿರುತ್ತದೆ.
ವೃಷಭ ರಾಶಿ:
ನಿಮ್ಮ ಕೋಪವನ್ನು ನಿಯಂತ್ರಿಸದಿದ್ದರೆ ಇಂದು ಕುಟುಂಬದಲ್ಲಿ ಸಮಸ್ಯೆ ಉಂಟಾಗುವುದು. ಕೋಪದಿಂದ ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಧನಾತ್ಮಕವಾಗಿ ಚಿಂತಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ನಿಮ್ಮ ಖರ್ಚಿನ ಮೇಲೆ ನಿಗಾ ಇರಲಿ. ನಿಮಗೆ ಹಾಗೆ ನಿಮ್ಮ ಕುಟುಂಬಕ್ಕೆ ಸಂಬಂಧಿಕರ ಬೆಂಬಲ ಸಿಗುವುದು. ಸಂಗಾತಿಗೆ ಸಮಯ ನೀಡಿ. ಕೆಲಸದ ಜಾಗದಲ್ಲಿ ಬರುವ ಸಮಸ್ಯೆಯನ್ನು ಬುದ್ದಿವಂತಿಕೆಯಿಂದ ನಿರ್ವಹಿಸಿ. ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.
ಮಿಥುನ ರಾಶಿ:
ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸಿ. ನೀವು ಇಂದು ಹೊಸ ವ್ಯಕ್ತಿಯನ್ನು ಭೇಟಿಯಾಗಬಹುದು, ಅವರೊಂದಿಗೆ ಉತ್ತಮವಾಗಿ ವರ್ತಿಸಿ. ನಿಮ್ಮ ದೈಹಿಕ ಆರೋಗ್ಯದ ಕಡೆ ಗಮನ ನೀಡಿ. ಸಮಯಕ್ಕೆ ಕೆಲಸವನ್ನು ಮಾಡಿ ಮುಗಿಸಿ ಮನೆಗೆ ಹೋಗಿ, ಕುಟುಂಬದ ಜೊತೆ ಸಮಯ ಕಳೆಯಿರಿ.
ಕಟಕ ರಾಶಿ:
ನಿಮ್ಮ ಸಂಬಂಧದ ಕಡೆ ಗಮನ ನೀಡಿ. ಮನೆಯಲ್ಲಿರುವ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ಹೊರಗಡೆ ಹೋಗುವಾಗ ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮುನ್ನಚ್ಚರಿಕೆವಹಿಸಬೇಕು. ಹಣದ ಉಳಿತಾಯದತ್ತ ಗಮನ ಹರಿಸಿ.
ಸಿಂಹ ರಾಶಿ:
ಇಂದು ಕೆಲಸದ ಒತ್ತಡ ಅಧಿಕವಿರುವುದರಿಂದ ಮಾನಸಿಕವಾಗಿಯೂ ಒತ್ತಡಕ್ಕೆ ಒಳಗಾಗುತ್ತೀರಿ. ಬೇರೆಯವರ ಜೊತೆ ಸಂವಹನ ಮಾಡಲು ಕಷ್ಟವಾಗಬಹುದು, ಆದರೆ ಒತ್ತಡಕ್ಕೆ ಒಳಗಾಗುವುದಕ್ಕಿಂತ ತಾಳ್ಮೆಯಿಂದ ಕೆಲಸ ಮಾಡಲು ನಿಮಗೆ ಸೂಚಿಸಲಾಗಿದೆ. ಪ್ರೇಮಿಗಳಿಗೆ ಒಳ್ಳೆಯ ದಿನವಾಗಿದೆ. ನೀವು ಇಂದು ಅವಶ್ಯಕವಿರುವವರಿಗೆ ಸಹಾಯ ಮಾಡುತ್ತೀರಿ.
ಕನ್ಯಾ ರಾಶಿ:
ಇಂದು ಹೊರಗಡೆ ಸುತ್ತಾಡಲು ಒಳ್ಳೆಯ ದಿನವಾಗಿದ್ದರೂ ಈ ಸಮಯದಲ್ಲಿ ಮನೆಯಲ್ಲಿಯೇ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಹೊಸ ವ್ಯಕ್ತಿಗಳೊಂದಿಗೆ ಸಂವಹನ ಉಂಟಾಗಬಹುದು. ಊಹಿಸದೇ ಇರುವ ಕಡೆಯಿಂದ ಹಣ ಬರಬಹುದು. ಉತ್ತಮ ಫಲಿತಾಂಶಕ್ಕಾಗಿ ಕಠಿಣ ಪರಿಶ್ರಮ ಹಾಕಿ. ನೀವು ಇಂದು ಆರಾಮವಾಗಿ ಇರುವಿರಿ.
ತುಲಾ ರಾಶಿ:
ನಿಮ್ಮ ಪ್ರೀತಿ ಪಾತ್ರರರಿಗೆ ಉಡುಗೊರೆ ನೀಡಿ. ನೀವು ಇಂದು ತುಂಬಾ ಉತ್ಸಾಹದಿಂದ ಇರುವಿರಿ. ನಿಮ್ಮ ಕುಟುಂಬದವರೊಂದಿಗೆ ಯಾವುದೋ ವಿಷಯಕ್ಕೆ ತರ್ಕ ಉಂಟಾಗಬಹುದು. ಆದರೆ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿ. ನಿಮ್ಮ ಹೊಸ ಯೋಜನೆ ಕಾರ್ಯ ರೂಪಕ್ಕೆ ತರಲು ಇದು ಉತ್ತಮ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಇರುವ ಫಲ ಅತಿ ಶೀಘ್ರವೇ ಸಿಗಲಿದೆ.
ವೃಶ್ಚಿಕ ರಾಶಿ:
ನಿಮ್ಮ ಗುರಿಯನ್ನು ತಲುಪಲು ನಿಮಗೆ ವಾಸ್ತವದ ಅರಿವು ಇರಬೇಕು. ನೀವು ಹೂಡಿಕೆ ಮಾಡುವಾಗ ಅನುಭವಿ ವ್ಯಕ್ತಿಗಳಿಂದ ಸರಿಯಾದ ಸಲಹೆ ಪಡೆದ ಬಳಿಕ ಹೂಡಿಕೆ ಮಾಡುವುದು ಒಳ್ಳೆಯದು. ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದತ್ತ ಗಮನ ನೀಡಿ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನವಾಗಬಹುದು, ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಬೇಕು.
ಧನು ರಾಶಿ :
ನಿಮಗೆ ಇಂದು ಸಿಗುವ ಅವಕಾಶವನ್ನು ಬಿಡಬೇಡಿ. ನಿಮ್ಮ ಉತ್ತಮ ನಡವಳಿಕೆ ನಿಮ್ಮ ಸುತ್ತ ಇರುವವರಿಗೆ ಕೂಡ ಖುಷಿ ನೀಡುತ್ತದೆ, ಇಂದು ಆರ್ಥಿಕ ಸ್ಥಿತಿಯೂ ಉತ್ತಮವಾಗಿ ಇರಲಿದ್ದು ಲಾಭದ ಹೆಚ್ಚಿನ ಪಾಲನ್ನು ಉಳಿದಾಯ ಮಾಡುವತ್ತ ಗಮನ ಹರಿಸಿ. ನಿಮ್ಮ ಆರೋಗ್ಯದ ಬಗ್ಗೆ ತುಂಬಾನೇ ಎಚ್ಚರವಾಗಿರಬೇಕು. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ.
ಮಕರ ರಾಶಿ:
ಆಫೀಸ್‌ನ ಕೆಲಸದಲ್ಲಿ ಸಮಸ್ಯೆಯಿದ್ದರೆ ತಾಳ್ಮೆಯಿಂದ ನಿರ್ವಹಿಸಿ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ದೈಹಿಕ ಆರೋಗ್ಯದ ಕಡೆ ಗಮನ ನೀಡಬೇಕು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿಯೂ ಸುಧಾರಣೆಯಾಗುವುದು. ಮಾತನಾಡುವ ಮೊದಲು ಯೋಚಿಸಿ ಪದಗಳನ್ನು ಬಳಸಿದರೆ ಈ ದಿನ ಎದುರಾದ ಸಮಸ್ಯೆಗಳನ್ನು ನಿವಾರಿಸಬಹುದು. ಸಂಗಾತಿಯೊಂದಿಗೆ ಖುಷಿಯಾಗಿ ಇರುತ್ತೀರಿ.
ಕುಂಭ ರಾಶಿ :
ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಹಾಗೂ ಶಾಂತ ಮನಸ್ಥಿತಿಯಿಂದ ಬಗೆ ಹರಿಸಿ. ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಆರ್ಥಿಕ ಸಮಸ್ಯೆ ಇರಲ್ಲ. ನಿಮ್ಮ ಮನೆಯ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲುವುದರಿಂದ ಹಣದ ವಿಷಯದಲ್ಲಿ ತೊಂದರೆ ಎದುರಾಗಲ್ಲ. ಸಂಗಾತಿಯೊಂದಿಗೆ ಈ ದಿನ ಉತ್ತಮವಾಗಿರುತ್ತದೆ.
ಮೀನ ರಾಶಿ:
ನಿಮಗೆ ಇಂದು ಆರ್ಥಿಕ ಲಾಭವುಂಟಾಗುವುದು. ಈ ದಿನ ಉಲ್ಲಾಸದಿಂದ ಇರುವಿರಿ, ನಿಮಗೆ ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತೀರಿ. ನಿಗದಿತ ಸಮಯಕ್ಕೆ ಮೊದಲೇ ಕೆಲಸವನ್ನು ಪೂರ್ಣಿಗೊಳಿಸುವಿರಿ. ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷ್ಯ ಮಾಡಬೇಡಿ, ಅವರೊಂದಿಗೆ ಸಮಯ ಕಳೆಯಿರಿ.