”ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ”: ರಾಜಕೀಯ ಬೆಂಬಲಿಗರಿಗೆ ಉಪೇಂದ್ರ ಬಹಿರಂಗ ಪತ್ರ

ಹೈಲೈಟ್ಸ್‌:

  • ರಾಜಕೀಯ ಬೆಂಬಲಿಗರಿಗೆ ಬಹಿರಂಗ ಪತ್ರ ಬರೆದ ಉಪೇಂದ್ರ
  • ”ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ” ಎಂದ ಉಪ್ಪಿ
  • ”ನಾನೆಂದೂ ನಾಯಕನಾಗುವುದಿಲ್ಲ” ಎಂದ ಪ್ರಜಾಕಾರಣಿ ಉಪ್ಪಿ

ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹಲವರಿಗೆ ರಿಯಲ್ ಸ್ಟಾರ್ ಉಪೇಂದ್ರ ಸಹಾಯ ಮಾಡುತ್ತಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವ ಅನೇಕ ಕುಟುಂಬಗಳಿಗೆ ನಟ ಉಪೇಂದ್ರ ದಿನಸಿ ಕಿಟ್ ನೀಡುತ್ತಿದ್ದಾರೆ. ಈ ಕಾರ್ಯದಲ್ಲಿ ಉಪೇಂದ್ರ ಜೊತೆಗೆ ಹಲವರು ಕೈಜೋಡಿಸಿದ್ದಾರೆ.

ದೇಣಿಗೆ ರೂಪದಲ್ಲಿ ಬಂದ ಹಣದಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತರ ಬಳಿ ನೇರವಾಗಿ ಬೆಳೆಯನ್ನು ಖರೀದಿ ಮಾಡಿ, ಅವುಗಳನ್ನು ದಿನಸಿ ಕಿಟ್ ಜೊತೆಗೆ ನಟ ಉಪೇಂದ್ರ ವಿತರಿಸುತ್ತಿದ್ದಾರೆ. ಈಗಾಗಲೇ ಮಂಡ್ಯ ಮತ್ತು ಮೈಸೂರಿನಲ್ಲಿ ಚಿತ್ರರಂಗದ ಎಲ್ಲಾ ಕಾರ್ಮಿಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ. ಈ ನಡುವೆ ನಟ ಹಾಗೂ ಪ್ರಜಾಕಾರಣಿ ಉಪೇಂದ್ರ ಎಲ್ಲಾ ರಾಜಕೀಯ ಬೆಂಬಲಿಗರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ.

”ನನ್ನನ್ನು ಬೇರೆಯವರ ಜೊತೆಗೆ ಹೋಲಿಸಬೇಡಿ. ಇನ್ನೊಬ್ಬ ನಾಯಕ ಹುಟ್ಟಿಕೊಳ್ತಾನೆ ಎಂದು ಆತಂಕ ಪಡಬೇಡಿ. ನಾನೆಂದೂ ನಾಯಕನಾಗುವುದಿಲ್ಲ” ಎಂದು ತಮ್ಮ ಬಹಿರಂಗ ಪತ್ರದಲ್ಲಿ ನಟ ಹಾಗೂ ಪ್ರಜಾಕಾರಣಿ ಉಪೇಂದ್ರ ಉಲ್ಲೇಖಿಸಿದ್ದಾರೆ.

ಉಪೇಂದ್ರ ಬರೆದಿರುವ ಪತ್ರದಲ್ಲಿ ಏನಿದೆ?
ಎಲ್ಲಾ ರಾಜಕೀಯ (ವಿವಿಧ ಪಕ್ಷ, ವಿವಿಧ ನಾಯಕರು, ವಿವಿಧ ಜಾತಿ, ಧರ್ಮ) ಬೆಂಬಲಿಗರಿಗೆ ಬಹಿರಂಗ ಪತ್ರ

* ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ – ಎಂದೆಂದೂ ನಾನು ಉಪೇಂದ್ರ
* ಆತಂಕ ಪಡಬೇಡಿ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದು – ನಾನೆಂದೂ ನಾಯಕನಾಗುವುದಿಲ್ಲ.
* ಭಯ ಪಡಬೇಡಿ ನಿಮ್ಮ ಪಕ್ಷ, ನಾಯಕನಿಗೆ ಸಿಗುವ ಮತ ವಿಭಜನೆ ಆಗುತ್ತದೆ ಎಂದು – ನಾಯಕನಾಗಬೇಕೆಂದು ದೃಢ ಮನಸ್ಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂ ಇನ್ನು ಮುಂದೆ ಮತ ನೀಡುವುದಿಲ್ಲ.
* ನಿಮಗೆ ನಿಮ್ಮ ಪಕ್ಷ, ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ ರಾಜಕೀಯ ಭದ್ರತೆ ಮತ್ತು ಆರ್ಥಿಕ ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆಂಬ ಆತಂಕ ಬೇಡ, ಅದು ಕಡಿಮೆಯಾಗಬಾರದು. ಇಮ್ಮಡಿ ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ.

* 20% ನಾಯಕತ್ವದ, ಚಾಣಾಕ್ಷ ಜಾಣತನದ, ಹಣ, ತೋಳ್ಬಲದ ಪ್ರಬಲ ಗುಂಪಿನಲ್ಲಿದ್ದೇನೆಂದು ಹೆಮ್ಮೆ ಪಡಬೇಡಿ. 80% ಸಾಮಾನ್ಯರು, ದೀನ ದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಲ ಮುಗಿದಿದೆ.
* ನಾನು ಎಲೆಕ್ಷನ್‌ನಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ, ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನು ಬಾವಿಗೆ ತಳ್ಳಿ ಆಳ ನೋಡ್ತೀರಾ ಎಂದಿರಿ! ಇರಲಿ ಒಂದು ಸತ್ಯ ತಿಳಿಯಿರಿ. 20% ‘ನಾನು’ ಎನ್ನುವವರ ಜೊತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ. ನೀನು ಎನ್ನುವ 80% ಜನರ ಜೊತೆ ಅವನೇ ಇರುತ್ತಾನೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *