ಉಚಿತ ಪಡಿತರ, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ, ಮಾಸಾಶನ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌

ಹೈಲೈಟ್ಸ್‌:

  • ಕೊರೊನಾ ಸಂತ್ರಸ್ತರಿಗಾಗಿ ಹಲವು ಪರಿಹಾರ ಕ್ರಮಗಳನ್ನು ಪ್ರಕಟಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌
  • ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ಅವರ 25ನೇ ವರ್ಷದವರೆಗೆ ಪ್ರತಿ ತಿಂಗಳು 2,500 ರೂ. ಮಾಸಾಶನ
  • ಈ ಹಿಂದೆ ಘೋಷಿಸಿದ್ದ ಏಕಕಂತಿನ 50,000 ರೂ. ಪರಿಹಾರದ ಜತೆಗೆ ಈ ಸೌಲಭ್ಯ
  • ಬಡ ಕುಟುಂಬಗಳು ಈ ತಿಂಗಳು 10 ಕೆಜಿ ಪಡಿತರ, ಇದರಲ್ಲಿ ಅರ್ಧ ಪಾಲನ್ನು ಕೇಂದ್ರ ನೀಡಲಿದೆ.

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕೊರೊನಾ ಸಂತ್ರಸ್ತರಿಗಾಗಿ ಹಲವು ಪರಿಹಾರ ಕ್ರಮಗಳನ್ನು ಮಂಗಳವಾರ ಪ್ರಕಟಿಸಿದ್ದಾರೆ. ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಅವರ 25ನೇ ವರ್ಷದವರೆಗೆ ಪ್ರತಿ ತಿಂಗಳು 2,500 ರೂ. ಮಾಸಾಶನದ ಜತೆಗೆ ಉಚಿತ ಶಿಕ್ಷಣ ನೀಡುವುದಾಗಿ ಸಿಎಂ ಪ್ರಕಟಿಸಿದ್ದಾರೆ. ಈ ಹಿಂದೆ ಘೋಷಿಸಿದ್ದ ಏಕಕಂತಿನ 50,000 ರೂ. ಪರಿಹಾರದ ಜತೆಗೆ ಈ ಸೌಲಭ್ಯ ಸಿಗಲಿದೆ.

ಬಡ ಕುಟುಂಬಗಳು ಈ ತಿಂಗಳು 10 ಕೆಜಿ ಪಡಿತರ ಪಡೆಯಲಿದ್ದು, ಅದರಲ್ಲಿಅರ್ಧ ಪಾಲನ್ನು ಕೇಂದ್ರ ಸರಕಾರ ಭರಿಸಲಿದೆ. ಪಡಿತರ ಚೀಟಿ ಇಲ್ಲದಿದ್ದರೂ, ಬಡವರೆಂದು ಹೇಳಿಕೊಂಡು ಬಂದವರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ಕೇಜ್ರಿವಾಲ್‌ ಸ್ಪಷ್ಟಪಡಿಸಿದ್ದಾರೆ.

“ಸಿಂಗಾಪುರದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ವೈರಸ್‌ ಮೂರನೇ ಅಲೆ ರೂಪದಲ್ಲಿ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರಕಾರವು ಸಿಂಗಾಪುರಕ್ಕೆ ವಿಮಾನ ಸೇವೆ ಸ್ಥಗಿತಗೊಳಿಸಬೇಕು ಮತ್ತು ಮಕ್ಕಳಿಗೆ ಲಸಿಕೆ ನೀಡುವತ್ತ ಗಮನ ಹರಿಸಬೇಕು,” ಎಂದು ಅವರು ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *