BSNL Prepaid Plan: ಬಿಎಸ್ಎನ್ಎಲ್ನ ಅಗ್ಗದ 365 ದಿನಗಳ ಯೋಜನೆಯಲ್ಲಿ Unlimited calls ಜೊತೆಗೆ ಇಷ್ಟು Data ಫ್ರೀ
ನವದೆಹಲಿ: ಬಿಎಸ್ಎನ್ಎಲ್ ಪ್ರಿಪೇಯ್ಡ್ ಯೋಜನೆ: ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಾಗುತ್ತಿದೆ. ಎಲ್ಲಾ ಕಂಪನಿಗಳು ಮುಂಬರುವ ದಿನಗಳಲ್ಲಿ ಅಗ್ಗದ ಯೋಜನೆಗಳೊಂದಿಗೆ ಬರಲಿವೆ. ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 365 ದಿನಗಳ ಯೋಜನೆಯನ್ನು ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ 24 ಜಿಬಿ ಡೇಟಾ ಸಿಗಲಿದೆ. ಬಿಎಸ್ಎನ್ಎಲ್ನ ಈ ಯೋಜನೆಯ ಹೆಸರು ಪಿವಿ 1,499 (PV 1,499). ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಎಸ್ಎಂಎಸ್ ಸೌಲಭ್ಯಅವನ್ನು ಸಹ ನೀಡಲಾಗುತ್ತದೆ.
ಬಿಎಸ್ಎನ್ಎಲ್ 1499 ರೂ. ಯೋಜನೆ :
ಕಂಪನಿಯ ಈ ಯೋಜನೆ ಇತರ ಖಾಸಗಿ ಕಂಪನಿಗಳಾದ ಜಿಯೋ (Jio) ಮತ್ತು VI ಗಿಂತ ಅಗ್ಗವಾಗಿದೆ. ಕಡಿಮೆ ಡೇಟಾವನ್ನು ಬಳಸುವ ಗ್ರಾಹಕರಿಗೆ ಬಿಎಸ್ಎನ್ಎಲ್ನ (BSNL) ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯಲ್ಲಿ, ಗ್ರಾಹಕರು 365 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಅಲ್ಲದೆ, ಅನಿಯಮಿತ ಕರೆಗಳೊಂದಿಗೆ ಪ್ರತಿದಿನ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಕಂಪನಿಯ 1,499 ರೂ.ಗಳ ಈ ಯೋಜನೆಯಲ್ಲಿ, ಇಡೀ ವರ್ಷಕ್ಕೆ 24 ಜಿಬಿ ಡೇಟಾವನ್ನು ಒದಗಿಸಲಾಗುತ್ತಿದೆ.