ಕಲಬುರಗಿ : ನಾಳೆಯಿಂದ ಕಲಬುರಗಿ ಕಂಪ್ಲೀಟ್ ಲಾಕ್: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು
ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಖರೀದಿಯಲ್ಲಿ ಜನ ತೊಡಗಿದ್ದಾರೆ. ನಾಳೆಯಿಂದ ಕಿರಾಣಿ ಅಂಗಡಿ, ತರಕಾರಿ, ಹಣ್ಣು, ಮಾಂಸದ ಅಂಗಡಿಗಳು ಸಂಪೂರ್ಣ ಬಂದ್ ಹಿನ್ನೆಲೆ ತಮಗೆ ಬೇಕಾದ ವಸ್ತುಗಳ ಖರೀದಿಗೆ ಜನರು ಇಂದೇ ಮುಗಿಬಿದ್ದಿದ್ದು, ಎಲ್ಲಡೆ ಜನಜಂಗುಳಿ ಕಂಡುಬರುತ್ತಿದೆ.
ಕಲಬುರಗಿ: ನಗರದಲ್ಲಿಂದು ಲಾಕ್ಡೌನ್ ನಿಯಮ ಪಾಲನೆ ಆಗುತ್ತಿಲ್ಲ. ನಾಳೆಯಿಂದ ಮೂರು ದಿನ ಕಲಬುರಗಿ ಜಿಲ್ಲೆ ಕಂಪ್ಲೀಟ್ ಲಾಕ್ಡೌನ್ ಆಗುತ್ತಿರುವ ಹಿನ್ನೆಲೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ.
ಕಂಪ್ಲೀಟ್ ಲಾಕ್ಡೌನ್ ಆದೇಶ ಜಾರಿ ಮಾಡಲಾಗಿದ್ದು, ಮೂರು ದಿನಗಳ ಕಾಲ ತುರ್ತು ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದಿನಸಿ, ತರಕಾರಿ ಅಂಗಡಿಗಳಿಗೂ ಅವಕಾಶ ಕೊಡಲಾಗುತ್ತಿಲ್ಲ. ಹೀಗಾಗಿ ಕಲಬುರಗಿ ನಗರದ ಸೂಪರ್ ಮಾರ್ಕೆಟ್, ಕಿರಾಣ ಬಜಾರ್ನಲ್ಲಿ ಜನ ಜಾತ್ರೆ ಸೇರಿದೆ.