ಖಾಸಗಿ ಆಂಬ್ಯುಲೆನ್ಸ್‌ ದರ ನಿಗದಿಪಡಿಸಿದ ಸರಕಾರ: ಇಲ್ಲಿದೆ ಸಾಮಾನ್ಯ, ಆಕ್ಸಿಜನ್‌ ಇರುವ ವಾಹನದ ದರ!

ಹೈಲೈಟ್ಸ್‌:

  • ಖಾಸಗಿ ಆಂಬ್ಯುಲೆನ್ಸ್‌ಗಳು ಬೇಕಾಬಿಟ್ಟಿ ಸುಲಿಗೆ ಮಾಡುವಂತಿಲ್ಲ
  • ಆಂಬ್ಯುಲೆನ್ಸ್‌ಗಳಿಗೆ ದರ ನಿಗದಿಪಡಿಸಿದ ಕೇಂದ್ರ ಸರಕಾರ
  • ಆಂಬ್ಯುಲೆನ್ಸ್‌ಗೆ 10 ಕಿ.ಮೀ.ವರೆಗೆ 2000 ರೂ. ನಿಗದಿ

ಬೆಂಗಳೂರು: ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವ ಸಂದರ್ಭದಲ್ಲಿ ಖಾಸಗಿ ಆಂಬ್ಯುಲೆನ್ಸ್‌ ಪೂರೈಕೆದಾರರು ಮನಬಂದತೆ ದರ ಪಡೆಯುತ್ತಿರುವ ದೂರುಗಳ ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಆಂಬ್ಯುಲೆನ್ಸ್‌ ದರ ನಿಗದಿಪಡಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಪಿಪಿಇ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌, ಗ್ಲೌಸ್‌, ಡ್ರೈವರ್‌ ಒಳಗೊಂಡಂತೆ ಕೋವಿಡ್‌ ಚಿಕಿತ್ಸಕ ಉಪಕರಣ ಹೊಂದಿರುವ ಸುಸಜ್ಜಿತ ಆಂಬ್ಯುಲೆನ್ಸ್‌ಗೆ 10 ಕಿ.ಮೀ.ವರೆಗೆ 1500 ರೂ. ಹಾಗೂ ಹೆಚ್ಚುವರಿ ತಲಾ 1 ಕಿ.ಮೀ.ಗೆ 120 ರೂ. ಹಾಗೂ ತಲಾ 1 ಗಂಟೆ ಕಾಯುವಿಕೆಗೆ 120 ರೂ. ನಿಗದಿಪಡಿಸಲಾಗಿದೆ.

ಇನ್ನು ಲೈಫ್ ಸಪೋರ್ಟ್ ಇರುವ ಆಂಬುಲೆನ್ಸ್ ಪ್ರತಿ 10 ಕಿಲೋ ಮೀಟರ್‌ಗೆ 2000 ರು. ದರ ನಿಗದಿ ಮಾಡಲಾಗಿದೆ. ನಂತರದ ಕಿಲೋ ಮೀಟರ್ ಗಳಿಗೆ 120 ರು. ದರ ಪಡೆಯಬೇಕೆಂದು ಸೂಚಿಸಿದೆ. ವೈಯ್ಟಿಂಗ್ ಚಾರ್ಜ್ 250 ರು.ಪಡೆಯಬೇಕೆಂದು ಸೂಚನೆ ನೀಡಲಾಗಿದೆ.

ಸರಕಾರದ ಉನ್ನತ ಮಟ್ಟದ ಸಭೆ ಜರುಗಿದ ನಂತರ ದರ ನಿಗದಿಪಡಿಸಿ ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ಈ ಮೊದಲು ಸೂಚಿಸಲಾಗಿತ್ತು. ಆಯುಕ್ತರು ಸಲ್ಲಿಸಿದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *