ವಾಹನ ತಡೆದು ಹಣ ವಸೂಲಿ:ಪೊಲೀಸ್ ಅಮಾನತು
ರಾಯಚೂರು ಮೇ 22:- ವಿಜಯಪುರ ಜಿಲ್ಲೆಯ ಡಿ ಎ ಆರ್ ನಲ್ಲಿ ಇರುವ ಪೊಲೀಸ್ ಸಿಬ್ಬಂದಿ ಅಥಣಿ ಹಾಗೂ ತಿಕೋಟ ಮಾರ್ಗದಲ್ಲಿ ಎ.ಆರ್. ಎಸ್ಐ ಸೇರಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದೆ.
ಅಥಣಿ ಹಾಗೂ ತಕೋಟ ಮಾರ್ಗದಲ್ಲಿ ಸಂಚರಿಸುವ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮೇ 21 ಸಂಜೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದನ್ನು ಗಮನಿಸಿದ ಉಪ ಮುಖ್ಯ ಮಂತ್ರಿ ಹಾಗೂ ಹಾಗೂ ಸಾರಿಗೆ ಮತ್ತು ರಾಯಚೂರು ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಕೂಡಲೇ ವಿಜಯಪುರ ಎಸ್ಪಿಯವರಿಗೆ ಮಾತನಾಡಿ ಈ ಬಗ್ಗೆ ಕ್ರಮ ಜರುಗಿಸುವಂತೆ ಸೂಚಿಸಿದ್ದರು.
ಸೂಚನೆ ಅನ್ವಯ ಕೂಡಲೇ ಹಣ ವಸೂಲಿ ದಂಧೆಯಲ್ಲಿ ತೊಡಗಿರುವ ತಿಕೋಟ ಠಾಣೆಯ ಎ.ಎಸ್.ಐ ಎಮ್.ಎಸ್ ವಾಲಿಕರ್ ಹಾಗೂ ಎ. ಆರ್. ಎಸ್.ಐ ಯು.ಬಿ.ಚಿಗೊರಳ್ಳಿ ಅವರನ್ನು ಅಮಾನತುಪಡಿಸಿ ಆದೇಶ ನೀಡಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ಸರಕು ಸಾಗಾಣೆ ಹೊತ್ತು ಸಂಚರಿಸುತ್ತಿರುವ ವಾಹನಗಳ ಬಳಿ ವಸೂಲಿಗೆ ನಿಂತಿದ್ದ ಅಧಿಕಾರಿಗಳ ಮೇಲೆ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.