One Nation One Ration Card : ಪಡಿತರ ಚೀಟಿದಾರರಿಗೊಂದು ಸಿಹಿ ಸುದ್ದಿ..!

ಬೆಂಗಳೂರು : ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಒಂದು ರಾಷ್ಟ್ರ, ಒಂದು ಪಡಿತರ(One Nation One Ration Card) ಯೋಜನೆಯಡಿ ರಾಜ್ಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಬಂದಿರುವವರು ರಾಜ್ಯದ ಯಾವುದೇ ಸ್ಥಳದಲ್ಲಿ ಪಡಿತರ ಪಡೆಯಬಹುದು ಎಂದು ಆಹಾರ ಇಲಾಖೆ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ(Department of Food and Civil Supplies), ಅಂತ್ಯೋದಯ ಅಥವಾ ಪಡಿತರ ಚೀಟಿ ಹೊಂದಿರುವವರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪಡಿತರ ಪಡೆಯಬಹುದು. ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಅಗತ್ಯವಿದ್ದರೆ ಬಯೋ ಮೆಟ್ರಿಕ್ ನೀಡಬೇಕಾಗುತ್ತದೆ. ಪಡಿತರಕ್ಕಾಗಿ 14445 ಸಹಾಯವಾಣಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

ಒಂದು ರಾಷ್ಟ್ರ, ಒಂದು ಪಡಿತರ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿ(Ration Shop)ಗಳಲ್ಲಿ ವಲಸೆ ಕಾರ್ಮಿಕರು ರೇಷನ್ ಪಡೆದುಕೊಳ್ಳಲು ಅವಕಾಶವಿದ್ದು, ಮೇರಾ ರೇಷನ್ ಆ್ಯಪ್ ಮೂಲಕ ಅಥವಾ 14445 ಸಹಾಯವಾಣಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.

ಅಂತ್ಯೋದಯ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ(Rice) ನೀಡಲಾಗುವುದು. ನ್ಯಾಯಬೆಲೆ ಅಂಗಡಿಗಳು ಯಾರಿಗೂ ಪಡಿತರ ನಿರಾಕರಿಸುವಂತಿಲ್ಲ. ತಿರಸ್ಕರಿಸಿದರೆ ಸಹಾಯವಾಣಿ ಸಂಖ್ಯೆ 1967 ಗೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *