ಪ್ರತಿ ಗ್ರಾಮ ಪಂಚಾಯತಿಗೆ ಸೊಡಿಯಂ ಉಚಿತ ಹೈಪೋ ಕ್ಲೋರೈಡ್: ಮುರುಗೇಶ ನಿರಾಣಿ
ವಿಜಯಪುರ, ಮೇ.22-ಕೊರೊನಾ ಸೊಂಕು ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರುಡುತ್ತಿದ್ದು, ಸ್ವಚ್ಚತೆ ನಮ್ಮ ಮೊದಲ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತಿಗೆ ಸೊಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಉಚಿತ ವಿತರಿಸಲು ನಿರ್ಧರಿಸಲಾಗಿದೆ ಎಂದು ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಮಾತನಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಸೊಡಿಯಂ ಹೈಪೊಕ್ಲೋರೈಡ್ ಇದು ಸೊಂಕು ನಿವಾರಕ ದ್ರಾವಣವಾಗಿದ್ದು, ಕೊರೊನಾ ಸೇರದಂತೆ ಯಾವುದೇ ರೀತಿಯ ವೈರಾಣುವಿನ ವಿರುದ್ದ ಹೋರಾಡಲು ಇದನ್ನು ಬಳಸಬಹುದು ಎಂದು ತಿಳಿಸಿದ್ದಾರೆ.
ಕೊರೊನಾ ಹಳ್ಳಿಗಳಲ್ಲಿ ತನ್ನ ಕಬಂದ ಬಾಹುಗಳನ್ನು ಚಾಚಿರುವ ಈ ಸಂದರ್ಭದಲ್ಲಿ ಕೊರೊನಾ ಸಮುದಾಯ ಹರಡುವಿಕೆಯನ್ನು ತಪ್ಪಿಸಲು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಸಂತೆ ಕಟ್ಟೆಗಳು ಇಲ್ಲ ಕಡೆಯು ಸ್ಯಾನಿಟೈಸ್ ಮಾಡುವುದು ಅಗತ್ಯವಾಗಿದೆ. ಈ ಕಾರಣದಿಂದ ನಿರಾಣಿ ಫೌಂಡೇಶನ್ ವತಿಯಿಂದ ಬಾಗಲಕೋಟ, ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಪ್ರತಿ ಪಟ್ಟಣ ಹಾಗೂ ಗ್ರಾಮ ಪಂಚಾಯತಿಗೆ ಸೊಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸೌಲಭ್ಯವನ್ನು ಪಡೆದುಕೊಳ್ಳುವವರು ಮುಧೋಳದ ನಿರಾಣಿ ಶುಗರ್ಸ್ ಆವರಣದಲ್ಲಿರುವ ನಿರಾಣಿ ಫೌಂಡೇಶನ್ ಕಚೇರಿಗೆ ಭೇಟ್ಟಿ ನೀಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಪೌಂಡೇಶನ್ ಸಿಬ್ಬಂದಿಗಳಾದ ಗಿರೀಶ ಆನಿಖಿಂಡಿ ಹಾಗೂ ಬಸವರಾಜ ಮಾಸಗತ್ತಿ ಅವರನ್ನು ಸಂಪರ್ಕಿಸಬಹುದು ಎಂದು ಮುರುಗೇಶ ನಿರಾಣಿ ತಿಳಿಸಿದ್ದಾರೆ.