7ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರಿಗೆ ವಿಡಿಎ ಹೆಚ್ಚಳದ ಸಿಹಿ ಸುದ್ದಿ

ಹೈಲೈಟ್ಸ್‌:

  • 7ನೇ ವೇತನ ಆಯೋಗದ ಶಿಫಾರಸಿನಡಿ ಕ್ರಮ
  • ಕೇಂದ್ರ ಸರ್ಕಾರಿ ನೌಕರರ ವಿಡಿಎ ಮೊತ್ತ ಹೆಚ್ಚಳ
  • ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಘೋಷಣೆ

ಹೊಸದಿಲ್ಲಿ: ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ವೇರಿಯೇಬಲ್ ಡಿಯರ್ನೆಸ್ ಅಲೋಯೆನ್ಸ್ ( ವಿಡಿಎ) ಮೊತ್ತವನ್ನು ಮಾಸಿಕ 105 ರೂಪಾಯಿಂದ 210 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಶುಕ್ರವಾರ ಘೋಷಿಸಿದೆ.

ಈ ಭತ್ಯೆ ಹೆಚ್ಚಳವು 2021ರ ಏಪ್ರಿಲ್ 1ರ ದಿನಾಂಕದಿಂದಲೇ ಅನ್ವಯವಾಗಲಿದೆ. ಇದರೊಂದಿಗೆ ಕೇಂದ್ರ ವಲಯದಲ್ಲಿನ ಉದ್ಯೋಗಿಗಳು ಹಾಗೂ ಕೆಲಸಗಾರರ ಕನಿಷ್ಠ ವೇತನದ ಮೊತ್ತವೂ ಏರಿಕೆಯಾಗಲಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ನಿರ್ದಿಷ್ಟ ಸಂಸ್ಥೆಗಳ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಈ ಭತ್ಯೆ ಅನ್ವಯವಾಗಲಿದೆ. ರೈಲ್ವೆ, ಗಣಿಗಾರಿಕೆ, ಆಡಳಿತ, ಪ್ರಮುಖ ಬಂದರು, ತೈಲ ವಲಯ ಹಾಗೂ ಕೇಂದ್ರ ಸರ್ಕಾರದಿಂದ ಸ್ಥಾಪನೆಯಾದ ನಿಗಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ವಿಡಿಎ ನಿಯಮ ಅನ್ವಯವಾಗಲಿದೆ.

ಈ ದರವು ಗುತ್ತಿಗೆ ಹಾಗೂ ಗುತ್ತಿಗೆಯೇತರ ನೌಕರರು/ಸಿಬ್ಬಂದಿಗೆ ಇಬ್ಬರಿಗೂ ಅನ್ವಯವಾಗಲಿದೆ. ಈ ವಿಡಿಎ ಹೆಚ್ಚಳದ ಮೊತ್ತವಾದ 105-210 ರೂಪಾಯಿ ದರವು ಕೇಂದ್ರದ ವಿವಿಧ ವಿಭಾಗಗಳ ಉದ್ಯೋಗಿಗಳಿಗೆ ವಿಭಿನ್ನವಾಗಿರಲಿದೆ ಎಂದು ಮುಖ್ಯ ಕಾರ್ಮಿಕ ಆಯುಕ್ತ (ಸಿಎಲ್‌ಪಿ) ಡಿಪಿಎಸ್ ನೇಗಿ ತಿಳಿಸಿದ್ದಾರೆ.

ಏಪ್ರಿಲ್ 1, 2021ರಿಂದ ಈ ವೇರಿಯೇಬಲ್ ಡಿಯರ್ನೆಸ್ ಅಲೋಯೆನ್ಸ್ (ವಿಡಿಎ) ಜಾರಿಯಾಗುವಂತೆ ಪರಿಷ್ಕರಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರದ ಈ ನಿರ್ಧಾರದಿಂದ 1.5 ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ ಸಿಬ್ಬಂದಿಗೆ ವೇತನ ಹೆಚ್ಚಳದ ಅನುಕೂಲತೆ ಸಿಗಲಿದೆ. ಕೈಗಾರಿಕಾ ಕೆಲಸಗಾರರ ಸೂಚ್ಯಂಕದ ಗ್ರಾಹಕ ದರಕ್ಕೆ (ಸಿಪಿಐ-ಐಡಬ್ಲ್ಯೂ) ಸರಾಸರಿಯ ಆಧಾರದಲ್ಲಿ ವಿಡಿಎ ಪರಿಷ್ಕರಣೆಯಾಗಲಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *