ಸದ್ಗತಿಗಾಗಿ ಇಸ್ಲಾಮಿಕ್‌ ಪ್ರಾರ್ಥನೆ ಮಾಡಿದ ಹಿಂದೂ ವೈದ್ಯೆ, ಕೊನೆಯುಸಿರೆಳೆದ ಕೊರೊನಾ ಸೋಂಕಿತ ಮುಸ್ಲಿಂ ಮಹಿಳೆ!

ಹೈಲೈಟ್ಸ್‌:

  • ಕೇರಳದಲ್ಲಿ ಧರ್ಮಗಳ ನಡುವಿನ ಕಂದಕ ಒಡೆದ ಕೊರೊನಾ
  • ಮಾನವೀಯತೆಯಿಂದ ಮಾತ್ರ ಕೊರೊನಾ ಜಯಿಸಲು ಸಾಧ್ಯ
  • ಮುಸ್ಲಿಂ ಸೋಂಕಿತೆಗೆ ಇಸ್ಲಾಂನ ಕಲೀಮಾ ಪಠಿಸಿದ ಹಿಂದೂ ವೈದ್ಯೆ

ಕಲ್ಲಿಕೋಟೆ: ಕೊರೊನಾ ರೋಗಿಗಳ ಪರಿಸ್ಥಿತಿ ನಿಜಕ್ಕೂ ಯಾರಿಗೂ ಬರ ಬಾರದು ಯಾಕೆಂದರೆ ತೀವ್ರ ಸೋಂಕಿನಿಂದ ಹಾಸಿಗೆ ಹಿಡಿದರು ಯಾರು ಬಂದು ನೋಡುವ ಹಾಗಿಲ್ಲ, ಮಾತನಾಡುವ ಹಾಗಿಲ್ಲ. ಹಾಗೊಂದು ಪಕ್ಷ ಕಷ್ಟ ಎಂದು ಹೇಳಿದರು ಏನು ಮಾಡುವ ಹಾಗಿಲ್ಲ. ಇಂತಹ ಪರಿಸ್ಥಿತಿ ಪ್ರತೀ ರಾಜ್ಯಗಳಲ್ಲಿ ನಡೆಯುತ್ತಿದೆ.

ಇಂಥ ಸಂದರ್ಭದಲ್ಲಿ ಮರಣಶಯ್ಯೆಯ ಮೇಲೆ ಮಲಗಿದ್ದ ಮುಸ್ಲಿಂ ಸೋಂಕಿತೆಯೊಬ್ಬರು ಸಮಾಧಾನದಿಂದ ಚಿರನಿದ್ರೆಗೆ ಜಾರುವಂತೆ ಮಾಡುವಲ್ಲಿ ಹಿಂದೂ ವೈದ್ಯೆಯೊಬ್ಬರು ಮಾಡಿರುವ ಕೆಲಸ ಇದೀಗ ಭಾರೀ ಪ್ರಶಂಸೆಗೆ ಸಾಕ್ಷಿಯಾಗಿದೆ. ಹೌದು ಮುಸ್ಲಿಂ ವ್ಯಕ್ತಿ ಸಾಯುವ ಮುನ್ನ ಅವರ ಕಿವಿಯಲ್ಲಿ ಶಹಾದತ್ ಪಠಿಸಿ ಸಮಾಧಾನದಿಂದ ಚಿರನಿದ್ರೆಗೆ ಜಾರುವಂತೆ ಮಾಡಿದ್ದಾರೆ.

ಹೌದು ಕಲ್ಲಿಕೋಟೆಯ ಆಸ್ಪತ್ರೆಯೊಂದರಲ್ಲಿ ಸೋಂಕಿತೆಯೊಬ್ಬರು ದಾಖಲಾಗಿದ್ದರು. ಅವರ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಿಸದೇ ಮೇ 17ರಂದು ವೆಂಟಿಲೇಟರ್‌ ಕೂಡ ತೆಗೆಯಲಾಯಿತು. ವಿಷಯವನ್ನು ಕುಟುಂಬ ಸದಸ್ಯರು ಮತ್ತು ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ರೇಖಾ ಅವರಿಗೂ ತಿಳಿಸಲಾಯಿತು.

ವಿಷಯ ತಿಳಿದ ಡಾ. ರೇಖಾ ರೋಗಿಯ ಬಳಿ ತೆರಳಿದಾಗ, ಆಕೆ ಇಹಲೋಕ ತ್ಯಜಿಸಲು ಏನೋ ಅಡ್ಡಿಯಾಗಿರುವುದನ್ನು ಕಂಡುಕೊಂಡರು. ಇದನ್ನು ನೋಡಿ ಮರುಗಿದ ಡಾ| ರೇಖಾ, ಕಲೀಮಾ (ಲಾ ಇಲಾಹಾ ಇಲ್ಲಲ್ಲಾ, ಮೊಹಮ್ಮದ್‌ ಸೂಲ್‌ ರಸೂಲಲ್ಲಾ) ಎಂದು ಪಠಿಸಿದರು. ಆಗ ಸೋಂಕಿತೆಯು ಸಮಾಧಾನದಿಂದ ಪ್ರಾಣ ಬಿಟ್ಟಳು. ಇನ್ನು ಈ ಈ ಬಗ್ಗೆ ಮಾತನಾಡಿದ ಡಾ| ರೇಖಾ, ‘ದುಬೈನಲ್ಲಿ ನಾನು ಇದ್ದಾಗ ಅಲ್ಲಿಯ ಇಸ್ಲಾಮಿಕ್‌ ಸಂಸ್ಕಾರಗಳನ್ನು ಕಲಿತಿದ್ದೆ. ನಾನು ಎಲ್ಲ ಧರ್ಮಗಳಿಗೂ ಗೌರವ ನೀಡುವಂಥವಳು.

ಮಾನವೀಯ ನೆಲೆಯಿಂದ ಸೋಂಕಿತೆಯ ಕೊನೆಗಾಲದಲ್ಲಿ ನಡೆದುಕೊಂಡೆ. ಕುಟುಂಬದಿಂದ ದೂರ ಇರುವ ಕೋವಿಡ್‌ ರೋಗಿಗಳು ಏಕಾಂಗಿತನದಿಂದ ಕೊರಗುವುದು ನನಗೆ ಅರ್ಥವಾಗುತ್ತವೆ’ ಎಂದು ಹೇಳಿದರು. ಇನ್ನು ಈ ಘಟನೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕೊರೊನಾ ಎಂಬ ಮಹಾಮಾರಿ ನಮ್ಮನ್ನ ನಡುವಿನ ಧರ್ಮದ ಕಂದಕವನ್ನು ದೂರವಾಗಿಸಿದೆ. ಮಾನವೀಯತೆಗೆ ಜಾಗ ಮಾಡಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *