ಮಣಿಪುರದಲ್ಲಿ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲು
ಇಂಫಾಲ್: ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur) ಇಂದು ಮುಂಜಾನೆ ಭೂಕಂಪನ (Earthquake) ಸಂಭವಿಸಿದೆ. ಬೆಳಿಗ್ಗೆ 6.56ರ ಸುಮಾರಿಗೆ ಮಣಿಪುರದ ಉಕ್ರುಲ್ನಲ್ಲಿ ಭೂಮಿ ನಡುಗಿದೆ. ಭವಿಸಿದೆ. ನ್ಯಾಷನಲ್ ಸೆಕ್ಟರ್ ಫಾರ್ ಸಿಸ್ಮಾಲೋಜಿ ಈ ಮಾಹಿತಿಯನ್ನು ದೃಢಪಡಿಸಿದೆ.
ಕರೋನಾದಿಂದ (Coronavirus) ಜನ ತತತ್ತರಿಸಿರುವ ಮಧ್ಯೆ ಇದೀಗ, ಚಂಡಮಾರುತ, ಭೂಕಂಪದ ಹೊಡೆತೆಗಳು ಕೂಡಾ ಬೀಳುತ್ತಿವೆ. ಚಂಡ ಮಾರುತದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಈಶಾನ್ಯ ರಾಜ್ಯದಲ್ಲಿ ಭೂಮಿ ನಡುಗಿದೆ. ಮಣಿಪುರದಲ್ಲಿ (Manipura) ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ರಿಕ್ಟರ್ ಪ್ರಮಾಣದಲ್ಲಿ ಭೂಕಂಪನದ (Earthquake) ತೀವ್ರತೆ 4.3 ರಷ್ಟು ದಾಖಲಾಗಿದೆ. ಬೆಳಿಗ್ಗೆ ಸುಮಾರು, 6.56 ಕ್ಕೆ ಮಣಿಪುರದ ಉಕ್ರುಲ್ನಲ್ಲಿ ಭೂಕಂಪ ಸಂಭವಿಸಿದ್ದು, ನ್ಯಾಷನಲ್ ಸೆಕ್ಟರ್ ಫಾರ್ ಸಿಸ್ಮಾಲೋಜಿ ಈ ಮಾಹಿತಿಯನ್ನು ನೀಡಿತು.
ಆದರೆ, ಈವರೆಗೆ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ವರದಿಯಾಗಿಲ್ಲ. ಜನರು ತಮ್ಮ ಮನೆಗಳಲ್ಲಿ ಮಲಗಿದ್ದಾಗ ಭೂಕಂಪನ ಸಂಭವಿಸಿದೆ. ಭೂಕಂಪದ ಅನುಭವವಾದ ಜನ ಪ್ರಾಣಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಇದೀಗ ಈ ಪ್ರದೇಶದಲ್ಲಿ ಭೀತಿಯ ವಾತಾವರಣ ಮನೆ ಮಾಡಿದೆ.