ಕಾರು ಅಪಘಾತದಲ್ಲಿ ಗಾಯಗೊಂಡು ನಟಿ ರಿಷಿಕಾ ಸಿಂಗ್ ಆಸ್ಪತ್ರೆಗೆ ದಾಖಲು​

ಬೆಂಗಳೂರು: ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಮಗಳು ರಿಷಿಕಾ ಸಿಂಗ್​ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ರಾಜಾನುಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯ ಮಾವಳ್ಳಿ ಬಳಿ ನಡೆದಿದೆ.

ಅಪಘಾತಕ್ಕೀಡಾದ ಕಾರಿನಲ್ಲಿ ಸ್ಯಾಂಡಲ್​ವುಡ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್, ನಟ ಜೈ ಜಗದೀಶ್ ಪುತ್ರಿ ಅರ್ಪಿತಾ ಮತ್ತು ಮತ್ತೊರ್ವ ಸ್ನೇಹಿತ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.

ನಿಯಂತ್ರಣ ತಪ್ಪಿ ಕಾರು ಮರವೊಂದಕ್ಕೆ ಗುದ್ದಿದ್ದು, ಈ ವೇಳೆ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಆ ಬಳಿಕ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂದಹಾಗೆ ರಿಷಿಕಾ ಸಿಂಗ್​ ಅವರು ಕಳ್ಳ ಮಳ್ಳ ಸುಳ್ಳ ಹಾಗೂ ಕಂಠೀರವ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *