ಕನ್ನಿಕಾ ಪರಮೇಶ್ವರಿಯ ಜಯಂಣತೋತ್ಸವ: ಅನ್ನದಾನ
ಬೀದರ:ಮೇ.23: ಕೊವಿಡ್-19 ಎರಡನೇ ಅಲೆಯ ಸೋಂಕು ತಡೆಯಲು ರಾಜ್ಯ ಸರ್ಕಾರ ಮೇ 10 ರಿಂದ ಜೂನ್ 7ರ ವರೆಗೆ ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕರ್ನಾಟಕ ಆರ್ಯ ವೈಶ್ಯ ಸಂಘ ಮಹಾಸಭೆ ಜಿಲ್ಲಾ ಘಟಕದಿಂದ ನಗರದ ಚೌಬಾರಾ ಸಮೀಪದ ಪಾಂಡುರಂಗ ಮಂದಿರದಲ್ಲಿ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಯ 4639ನೇ ವರ್ಷದ ಜಯಂತಿ ಉತ್ಸವ ಅಂಗವಾಗಿ ಮೊನ್ನೆ ಕೂಲಿ ಕಾರ್ಮಿಕರು, ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ, ನಗರದ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ ಮತ್ತು ಡಿ ಗ್ರೂಪ್ ನೌಕರರು ಹಾಗೂ ಪೌರ ಕಾರ್ಮಿಕರಿಗೆ ಊಟದ ಪೊಟ್ಟಣಗಳು, ಮಾಸ್ಕ, ಸ್ಯಾನಿಟೈಸರ್ ಬಾಟಲ್‍ಗಳು ವಿತರಣೆ ಮಾಡಲಾಡಲಾಯಿತು.
ಜಯಂತಿ ಅಂಗವಾಗಿ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿಯ ಮೂರ್ತಿಯನ್ನು ಸಹ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಆರ್ಯ ವೈಶ್ಯ ಸಮಾಜದ ಮಹಿಳೆಯರು ವಿಶೇಷ ಪೂಜೆ ಆರತಿ, ಭಜನೆ ಮಾಡಿದರು. ಕನ್ನಿಕಾ ಪರಮೇಶ್ವರಿಯ ತೋಟ್ಟಿಲು ಸಹ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಆರ್ಯವೈಶ್ಯ ಸಮಾಜದ ಮಹಿಳೆಯರು ತೋಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆರ್ಯ ವೈಶ್ಯ ಸಂಘ ಮಹಾಸಭೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ಸಂಗಯ್ಯಾ ರೇಜಂತಲ್, ಅಧ್ಯಕ್ಷ ದತ್ತಾತ್ರೇಯ ವಿ. ಸಿಂಧೋಲ, ಉಪಾಧ್ಯಕ್ಷ ದಿಗಂಬರ ಆರ್. ಪೋಲಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ. ಗಾದಾ, ಕಾರ್ಯದರ್ಶಿಗಳಾದ ಶ್ರೀನಿವಾಸ ಕೆ. ಪೋಲಾ, ವೆಂಕಟೇಶ ಎಸ್, ಬೋರಾಳಕರ್, ಕೋಶಾಧ್ಯಕ್ಷ ಸುನೀಲಕುಮಾರ ಎಂ. ವಾಗನಪಲ್ಲಿ, ಕಾರ್ಯಕಾರಣಿ ಸದಸ್ಯರಾದ ಅಶೋಕ ಎಸ್. ರೇಜಂತಲ್, ಅನೀಲ ಎಸ್. ಪೋಲಾ, ಬಸವರಾಜ ಜಿ. ಗಾದಾ, ನಾಗರಾಜ ವಿ. ಕಲ್ವೇಟ್ಟಿ, ಸಂಗಯ್ಯಾ ಎಲ್. ಕಟಕಮ್, ಶ್ರೀನಿವಾಸ ಡಿ. ಗಾದಗಿ, ವೆಂಕಟೇಶ ಪಿ. ಗಾದಾ, ವೆಂಕಟೇಶ ಆರ್. ಉದಗೀರ, ವಿಜಯಕುಮಾರ ಆರ್. ಬಚ್ಚಾ, ಅವಿನಾಶ ಪೋಲಾ ಅವರು ಸೇರಿದಂತೆ ಆರ್ಯ ವೈಶ್ಯ ಸಮಾಜದ ಮಹಿಳೆಯರು, ಮಕ್ಕಳು, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಪೂಜಾರಿ ಮುಂತಾದವರು ಇದ್ದರು.