ಕೊರೊನಾ ಸಾವು ನೋವು, ವ್ಯಾಕ್ಸಿನ್‌ ಇಳಿಕೆಗೆ ಡಿಕೆಶಿ-ಸಿದ್ದರಾಮಯ್ಯ ಧೋರಣೆಗಳೇ ಕಾರಣ; ಶ್ರೀರಾಮುಲು

ಹೈಲೈಟ್ಸ್‌:

  • ಕಾಂಗ್ರೆಸ್‌ನಿಂದ ಕೋವಿಡ್‌ ರಾಜಕೀಯ ನಡೆಯುತ್ತಿದೆ
  • ಕೊರೊನಾ ಸಾವು ನೋವು,ಕೋವಿಡ್‌ ಲಸಿಕೆ ಇಳಿಕೆಗೆ ಡಿಕೆಶಿ-ಸಿದ್ದರಾಮಯ್ಯ ಧೋರಣೆಗಳೇ ಕಾರಣ
  • ಬಿಜೆಪಿ ಸರಕಾರದ ವಿರುದ್ಧ ಆಧಾರರಹಿತ ಅಪಪ್ರಚಾರ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ
  • ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಬಿ.ಶ್ರೀರಾಮುಲು ಆರೋಪ

ಬಳ್ಳಾರಿ: ಕೋವಿಡ್‌ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್‌ ಮುಖಂಡರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಟೀಕಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಾವು, ನೋವು ಪ್ರಕರಣಗಳಿಗೆ ಮತ್ತು ಕೋವಿಡ್‌ ಲಸಿಕೆ ಇಳಿಕೆಗೆ ಪ್ರತಿಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಧೋರಣೆಗಳೇ ಕಾರಣ. ಅವರು ತಮ್ಮ ಹೊಣೆಗಾರಿಕೆ ಮರೆತು, ಅಧಿಕಾರ ದಾಹದಿಂದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಪಾದಿಸಿದರು.

ಕೊರೊನಾ ನಿಯಂತ್ರಣಕ್ಕಾಗಿ ಸಿಎಂ ಸೇರಿ ಸಚಿವರು, ಶಾಸಕರು ಸತತ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರಕಾರದ ವಿರುದ್ಧ ಆಧಾರರಹಿತ ಅಪಪ್ರಚಾರ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ರಾಜ್ಯ ಸರಕಾರ ಕೊರೊನಾ ಸಾವಿನ ವಿಚಾರದಲ್ಲಿ ತಪ್ಪು ಲೆಕ್ಕ ನೀಡುತ್ತದೆ ಎಂದು ಕಾಂಗ್ರೆಸ್‌ನವರು ವೃಥಾ ಆರೋಪ ಮಾಡುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ರಾಜ್ಯ, ಕೇಂದ್ರ ಸರಕಾರಗಳಿಗೆ ಸೂಕ್ತ ಸಲಹೆ, ಸೂಚನೆ ನೀಡುತ್ತಿದ್ದಾರೆ. ಇದು ಪ್ರತಿಪಕ್ಷಗಳ ಮುಖಂಡರಿಗೆ ಪ್ರೇರಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪ, ಮಾಜಿ ಶಾಸಕ ಟಿ.ಎಚ್‌.ಸುರೇಶ್‌ಕುಮಾರ್‌, ಬಿಜೆಪಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್‌, ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *