ಮನೆ ಹತ್ರದ ಗ್ರೌಂಡ್​ನಲ್ಲಿ ಟೀಂ ಮಾಡಿ ಕ್ರಿಕೆಟ್​ ಆಡ್ತೀರಾ..? ಹಾಗಾದ್ರೆ ನಿಮ್ಮ ಮೇಲೆ ಕೇಸ್​​ ಬೀಳಬಹುದು ಹುಷಾರ್​​..!

ಉಡುಪಿ : ಜಿಲ್ಲೆಯಾದ್ಯಂತ ಮದುವೆ ಹಾಗೂ ಇನ್ನಿತ್ತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರಲ್ಲಿ ಕೊರೋನಾ ಸೊಂಕು ಹೆಚ್ಚಾಗಿ ಕಾಣುತ್ತಿದೆ. ಹೀಗಾಗಿ ಆದಷ್ಟು ಮದುವೆಯಂತಹಾ ಸಾರ್ವಜನಿಕರು ಒಟ್ಟಾಗುವ ಕಾರ್ಯಕ್ರಮಗಳಿಂದ ದೂರವಿರಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್​​ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


ಕೆಲವು ದಿನಗಳಿಂದ ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆ ಮತ್ತಿತ್ತರ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಕೊರೋನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಸಾಧ್ಯವಾದರೆ ಆದಷ್ಟು ಮದುವೆ ಕಾರ್ಯಕ್ರಮಗಳನ್ನು ಮುಂದೂಡುವುದು ಒಳ್ಳೆಯದು ಎಂದು ಡಿ.ಸಿ ಜಗದೀಶ್​ ಹೇಳಿದ್ದಾರೆ. ಮದುವೆ ಪಾರ್ಟಿ, ಮದುವೆ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರ ವಿರುದ್ಧ ಕ್ರಿಮಿನಲ್​​ ಮೊಕದ್ದಮೆ ಹಾಕಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್​ ಹೇಳಿದ್ದಾರೆ.

ಕೊರೋನಾ ಸಂದರ್ಭದಲ್ಲಿಯೂ ಹಲವರು ಹತ್ತಿರದ ಗ್ರೌಂಡ್​ಗಳಲ್ಲಿ ಕ್ರಿಕೆಟ್​ ಆಡುತ್ತಿರುವುದು ಕಂಡುಬರುತ್ತಿದೆ. ಹೀಗೆ ಗುಂಪುಗೂಡಿ ಆಟವಾಡಬೇಡಿ, ನಾನು ಈಗಾಗಲೇ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಈ ರೀತಿ ಗುಂಪುಗೂಡಿ ಕ್ರಿಕೇಟ್​ ಆಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಎಸ್​​.ಪಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಕ್ರಿಕೆಟ್​​ ಆಡುವ ಮೂಲಕ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಡಿ.ಸಿ ಜಗದೀಶ್​ ಮನವಿ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *