ಸೋಂಕು ತಡೆಗೆ ಕಠಿಣ ನಿಯಮ ಪಾಲನೆಗೆ ಬಿಎಸ್ ವೈ ಸೂಚನೆ

ಬೆಂಗಳೂರು -ನಗರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯ ಲ್ಲಿ‌ ಇಳಿಕೆ ಕಂಡು ಬರುತ್ತಿದ್ದು ಇದೇ ರೀತಿ ಕಠಿಣ ನಿಯಮಗಳನ್ನು ತಪ್ಪದೆ ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಸಚಿವರು ಹಾಗು ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಚರ್ಚೆ ನಡೆಸಿದ ವೇಳೆ ಈ ನಿರ್ದೇಶನ ನೀಡಿದರು.
ಹಳ್ಳಿಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವುದು ಹಳ್ಳಿಗಳ ಮೇಲೆ ತೀವ್ರ ನಿಗಾ ವಹಿಸಲು ಸೂಚಿಸಲಾಯಿತು.ಕೆಲ ಗ್ರಾಮಗಳ ಜನ ಕರೋನ‌ ಪರೀಕ್ಷೆಗೆ ಹಿಂದೇಟಾಕುತ್ತಿರುವುದು ಕೇಳಿ ಬರುತ್ತಿದ್ದು ಅವರ ಮನವೊಲಿಸಿ ಟೆಸ್ಟಿಂಗ್ ಮಾಡಬೇಕು ಎಂದು ಹೇಳಿದರು.

ಗ್ರಾಮಗಳಲ್ಲಿ ಹೋಮ್ ಐಸೋಲೇಷನ್ ಗೆ ಅವಕಾಶ ನೀಡದೆ ಸೊಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು ಬ್ಲ್ಯಾಕ್ ಫಂಗಸ್ ಗೆ ಈಗಾಗಲೇ ‌ಎಲ್ಲಾ‌ ಜಿಲ್ಲಾ ಆಸ್ಪತ್ರೆ ಗಳಲ್ಲಿ‌ ಉಚಿತ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದು ಅದಕ್ಕೆ ಬೇಕಾಗುವ ಲಸಿಕೆ‌ಯನ್ನು‌ ಕೊಂಡುಕೊಳ್ಳಬೇಕೆಂದು ಸೂಚಿಸಲಾಯಿತು .ಇನ್ನು‌ ಮುಂದೆ ಹೊಸ ಡಿಸ್ಚಾರ್ಜ್ ಪ್ರೋಟಕಾಲ್ ಪಾಲನೆ‌ ಮಾಡಲು ಆಸ್ಪತ್ರೆ ಗಳಿಗೆ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.

ಬ್ಲಾಕ್ ಫಂಗಸ್ ಯಾವ ರೀತಿ ಬರುತ್ತದೆ ಎಂಬ ಅನುಭವದ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟಲು ಸೋಂಕಿತನ ಡಿಸ್ಚಾರ್ಜ್ ಮಾಡುವ ಮೊದಲೆ ರೋಗ ಬರುವುದನ್ನು ತಡೆಗಟ್ಟಲು ಡಿಸ್ಚಾರ್ಜ್ ಪ್ರೋಟೋಕಾಲ್ ಮಾಡಿ ಅದರಂತೆ ಕ್ರಮವಹಿಸಲು ತೀರ್ಮಾನಿಸಲಾಯಿತು

ಇಎನ್ ಟಿ ತಜ್ನರ ಅಭಿಪ್ರಾಯದ ಜೊತೆ ಸೇರಿ ಡಿಸ್ಚಾರ್ಜ್ ಪ್ರೋಟೋಕಾಲ್ ಪಾಲನೆ‌
ಮಾಡುವಂತಯೂ ಸಿಎಂ ಸೂಚಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *