ಅಂತರಾಜ್ಯ ಮರಳು ಮಾಫಿಯಾ / ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಕಂಪ್ಲೀಟ್ ಸ್ಟೊರಿ ಇಲ್ಲಿದೆ ನೊಡಿ
ಗಡಿ ನಾಡು ಬೀದರ ಜಿಲ್ಲೆಯ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ನಮ್ಮ ರಾಜ್ಯದ ಯಾದಗಿರ ಜಿಲ್ಲೆಯ ಶಾಹಪೂರದ ಮರಳಿಗೆ ಅತಿಯಾದ ಬೇಡಿಕೆ ಇದ್ದ ಕಾರಣ ರಾಷ್ಟ್ರೀಯ ಹೆದ್ದಾರಿ ಯಾದ ಬೀದರ ನಿಂದ ಶ್ರಿರಂಗಪಟ್ಟಣ ಹೆದ್ದಾರಿಯ ಮೂಲಕ ಹಾದು ಜಿಲ್ಲೆಯ ಹುಮನಾಬಾದ ನಿಂದ ರಾಜ್ಯ ಹೆದ್ದಾರಿ ಹುಮನಾಬಾದ ಭಾಲ್ಕಿ ರಸ್ತೆ ಮೂಲಕ ಹಾದು ಭಾಲ್ಕಿ ಔರಾದ ರಸ್ತೆ ಮೂಲಕ ಔರಾದ ಪಟ್ಟಣಕ್ಕೆ ಬಂದು ಇಲ್ಲಿಂದ ಮಹಾರಾಷ್ಟ್ರ ರಾಜ್ಯಕ್ಕೆ ಅನುಮತಿಗಿಂತಲೂ ಎರಡು ಪಟ್ಟು ಭಾರವನ್ನು ಹೋತ್ತ ಸುಮಾರು 40 ರಿಂದ 50 ಟನ್ ಭಾರ ಉಳ್ಳ ನೂರಾರು ಭಾರತಬೆಂಜ ಟಿಪರ್ ಗಳ ಓಡಾಟ ದಿಂದ ಯಾದಗಿ ಕಲಬುರ್ಗಿ ಹಾಗೂ ಬೀದರ ಜಿಲ್ಲೆಯ ಪ್ರಮುಖ ಹೆದ್ದಾರಿ ಗಳು ಹಾಳಾಗುತಿದ್ದರು ಕಂಡು ಕಾಣದಂತೆ ನೋಡುತ ಕುಳಿತ ಈ ಮೂರು ಜಿಲ್ಲೆಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಮೇಲೆ ಹಿಡಿ ಶಾಪಕುತಿದ್ದಾರೆ ಅಲ್ಲದೆ ಸರಕು ಸಾಗಣಿಕೆ ವಾಹನಗಳು ಅನುಮತಿ ಕಿಂತಲೂ ಕೇವಲ ಒಂದು ಎರಡು ಟನ್ ಹೆಚ್ಚು ಭಾರ ಹಾಕಿದರೆ ಸಾವಿರಾರು ರೂಪಾಯಿಗಳ ದಂಡ ಹಾಕುವ ಈ ಮೂರು ಜಿಲ್ಲೆಯ RTO ಅಧಿಕಾರಿಗಳಿಗೆ ಮರಳು ಸಾಗಿಸುವ ಟಿಪರ್ ಕಾಣುತಿಲ್ಲವೇ ಅಥವಾ ರೈತನ್ನು ಹಾಗೂ ಬಡವರು ತಮ್ಮ ಮನೆ ಯನ್ನು ಕಟ್ಟಲು ಟ್ರಾಕ್ಟರ್ ಮೂಲಕ ಕಲ್ಲನ್ನು ಸಾಗಿಸುವಾಗ ರಸ್ತೆಯಲ್ಲಿ ಹಿಡಿಸು ತೊಂದರೆ ಕೊಡುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕೇವಲ ರಾಜ್ಯದಲ್ಲೆ ಮರಳು ಸಾಗಣಿಕೆ ಮಾಡುವದಾಗಿ ಹೇಳಿ ಅಕ್ರಮ ವಾಗಿ ನೇರೆ ರಾಜ್ಯವಾದ ಮಹಾರಾಷ್ಟ್ರಕ್ಕೆ ಮರಳು ಸಾಗಣಿಕೆ ಮಾಡವರು ಕಾಣುತಿಲ್ಲವೇ, ರೈತನ್ನು ತನ್ನ ಹೊಲಗಳಲ್ಲಿ ಕಬ್ಬನ್ನು ಬೆಳೆದು ಅದನ್ನು ಕಟಾವು ಮಾಡಿ ಕೊಂಡು ತನ್ನ ಎತ್ತಿನ ಚಕ್ಕಡಿಯ ಮೂಲಕ ಕಾರಖಾನೆಗೆ ಸಾಗಿಸುವಾಗ ತನ್ನ ರಸ್ತೆಯನ್ನು ಹಾಳಾಗುತದೆ ಎಂದು ಚಕ್ಕಡಿಯ ಹಳೆಯ ಚಕ್ರಗಳನ್ನು ಬದಲ್ಲಿಸಿ ಟೈರುಗಳನ್ನು ಹಾಕಿ ಕೊಳ್ಳುವಂತೆ ಹೇಳುವ ಲೊಕೊಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾದ ಅಧಿಕಾರಿಗಳಿಗೆ ಅನುಮತಿ ಕಿಂತಲು ಎರಡು ಪಟ್ಟು ಭಾರ ವಾದ ಮರಳನ್ನು ಸಾಗಿಸುವ ಟಿಪರ್ ಕಾಣುತಿಲ್ಲವೇ ಅಲ್ಲದೆ ಪ್ರತಿಯೊಂದು ವಿಷದಲ್ಲಿ ಅಧಿಕಾರಿಗಳ ಮೇಲೆ ದರ್ಪ ತೊರುವ ಜನ ಪ್ರತಿನಿಧಿಗಳಿಗೆ ಜಿಲ್ಲೆಯ ರಸ್ತೆ ಹಳ್ಳ ಹಿಡಿಯು ತಿರುವದನ್ನು ಕಾಣುತಿಲ್ಲವೆ ಎಂಬುದು ಜಿಲ್ಲೆಯ ಜನರ ಪ್ರಶ್ನೆ ಯಾಗಿದು ಅಲ್ಲದೆ ಈ ಮೂರು ಜಿಲ್ಲೆಯನ್ನು ಹಾದು ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮ ವಾಗಿ ಮರಳನ್ನು ಸಾಗಿಸಲು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿ ಗಳು ಮರಳು ಸಾಗಣಿಕೆ ದಾರನಿಂದ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿಗಳ ಲಂಚವನ್ನು ಪಡೆಯುತಿದ್ದಾರೆ ಎಂದು ಜಿಲ್ಲೆಯ ಜನರಲ್ಲಿ ಅನುಮಾನ ಉಂಟಾಗಿದು
ಈಗಲಾದರು ನಮ್ಮ ರಾಜ್ಯದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮ ವಾಗಿ ಮರಳನ್ನು ಸಾಗಣಿಕೆ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿ ಹಾಳಾಗಿ ಹಳ್ಳಹಿಡಿಯುವ ರಸ್ತೆಗಳನ್ನು ಉಳಿಸುವರೋ ಅಥವಾ ಜಿಲ್ಲೆಯ ಜನತೆ ಅನುಮಾನ ಪಡುತಿರುವದು ನಿಜ ಎಂದು ಒಪ್ಪಿಕೊಂಡು ರಸ್ತೆಗಳನ್ನು ಹಾಳಾಗಲು ಬೀಡುವರೋ ಕಾದು ನೋಡ ಬೇಕು.
ವರದಿ : ಮಹೇಶ್ ಸಜ್ಜನ್ ಬೀದರ್