ಚಿನ್ನ ಮುಟ್ಟಂಗಿಲ್ಲ, ಬೆಳ್ಳಿ ಕೊಳ್ಳೋ ಹಾಗಿಲ್ಲ! ಮತ್ತೆ ಗಗನಕ್ಕೇರಿತು ಚಿನ್ನಾಭರಣ ಬೆಲೆ! ಇಂದಿನ ದರ ವಿವರ ಇಲ್ಲಿದೆ

ಹೈಲೈಟ್ಸ್‌:

  • ಚಿನ್ನಾಭರಣ ಪ್ರಿಯರಿಗೆ ಗಾಯದ ಮೇಲೆ ಬರೆ
  • ಮತ್ತೆ ಗಗನಕ್ಕೇರಿದ ಚಿನ್ನ ಬೆಳ್ಳಿಯ ದರ
  • 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,780
  • ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿ ಗ್ರಾಹಕರಿಗೆ ನಿರಾಸೆ

ಬೆಂಗಳೂರು: ಕಳೆದ ಕೆಲ ವಾರಗಳಿಂದ ಹಂತಹಂತವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣಪ್ರಿಯರಿಗೆ ನಿರಂತರವಾಗಿ ನಿರಾಸೆ ಮೂಡಿಸಿತ್ತು. ಈ ವಾರ ಆಭರಣ ಪ್ರಿಯರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದರೆ ಚಿನ್ನ ಬೆಳ್ಳಿಯ ಬೆಲೆ ಭಾರೀ ಏರಿಕೆ ಕಂಡು ಬಂದಿದೆ. ಇಂದು ಬುಧವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,780 ದಾಖಲಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಬುಧವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹46,100 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹50,300 ರೂಪಾಯಿ ದಾಖಲಾಗಿದೆ.

ಬೆಳ್ಳಿ ದರ:
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹72,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹72,700 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹77,300 ರೂ ನಿಗದಿಯಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹46,100 (22 ಕ್ಯಾರಟ್‌) ₹50,300 (24 ಕ್ಯಾರಟ್‌)
ಚೆನ್ನೈ: ₹46,500 (22 ಕ್ಯಾರಟ್‌) ₹50,700 (24 ಕ್ಯಾರಟ್‌)
ದಿಲ್ಲಿ: ₹47,100 (22 ಕ್ಯಾರಟ್‌), ₹51,000 (24 ಕ್ಯಾರಟ್‌)
ಹೈದರಾಬಾದ್‌: ₹46,100 (22 ಕ್ಯಾರಟ್‌) ₹50,300 (24 ಕ್ಯಾರಟ್‌)
ಕೋಲ್ಕತಾ: ₹47,880 (22 ಕ್ಯಾರಟ್‌), ₹50,650 (24 ಕ್ಯಾರಟ್‌)
ಮಂಗಳೂರು: ₹46,100 (22 ಕ್ಯಾರಟ್‌) ₹50,300 (24 ಕ್ಯಾರಟ್‌)
ಮುಂಬಯಿ: ₹46,800(22 ಕ್ಯಾರಟ್‌), ₹47,800 (24 ಕ್ಯಾರಟ್‌)
ಮೈಸೂರು: ₹46,100 (22 ಕ್ಯಾರಟ್‌) ₹50,300 (24 ಕ್ಯಾರಟ್‌)

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದು ಬೆಳಗ್ಗಿನ ವೇಳೆಗೆ ಹಳದಿ ಲೋಹದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲೂ ಕೆಲವೆಡೆ ಏರಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *