ಮಗಳನ್ನೇ ಮದುವೆಯಾಗುವ ಅಪ್ಪಂದಿರು; ಇದು ಇಲ್ಲಿನ ವಿಚಿತ್ರ ಸಂಪ್ರದಾಯ

ಜೀವನದ ಅತ್ಯದ್ಭುತ ಘಟ್ಟದಲ್ಲಿ ಮದುವೆ ಕೂಡ ಒಂದು. ಮದುವೆ ಬಗ್ಗೆ ಹೆಣ್ಣು ಮಕ್ಕಳಲ್ಲಿ ತಮ್ಮದೇ ಆದ ಕನಸಿರುತ್ತದೆ. ಮದುವೆಯಾಗಲಿರುವ ಹುಡುಗ, ಮುಂದಿನದ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಆದರೆ, ಈ ಹಳ್ಳಿಯಲ್ಲಿ ಈ ಎಲ್ಲಾ ಕನಸುಗಳಿಂದ ಹೆಣ್ಣು ಮಕ್ಕಳು ವಂಚಿತರಾಗಿದ್ದಾರೆ. ಕಾರಣ ಇಲ್ಲಿನ ಹೆಣ್ಣು ಮಕ್ಕಳು ತಮ್ಮ ತಂದೆಯನ್ನೇ ಮದುವೆಯಾಗಬೇಕು ಎಂಬ ಅನಿಷ್ಠ ಸಂಪ್ರದಾಯ ಈ ಊರಲ್ಲಿ ನಡೆದುಕೊಂಡು ಬಂದಿದೆ. ಇಲ್ಲಿ ಇದು ಅಪರಾಧ ಕೂಡ ಅಲ್ಲ. ಸೂರ್ಯೋದಯ, ಸೂರ್ಯಸ್ತದ ಜೀವನದ ಲೆಕ್ಕಾಚಾರದಲ್ಲಿ ಈ ಸಂಪ್ರದಾಯವನ್ನು ಈ ಗ್ರಾಮಸ್ಥರು ನಡೆಸಿದ್ದಾರೆ. ಅಂದರೆ, ಮದುವೆಯಾಗುವ ಪುರಷನ ಆರಂಭದ ದಿನಗಳಲ್ಲಿ ಹೆಂಡತಿ ಜೊತೆಯಾದರೆ, ಇಳಿ ವಯಸ್ಸಿನಲ್ಲಿ ಮಗಳು ಜೊತೆಯಾಗಬೇಕೆಂಬ ನಿಯಮ ಇಲ್ಲಿನ ಗ್ರಾಮಸ್ಥರದ್ದು.

ಭಾರತ ಮತ್ತು ಬಾಂಗ್ಲಾದೇಶದ ಬುಡಕಟ್ಟು ಜನರಲ್ಲಿ ಈ ರೀತಿಯ ಸಂಪ್ರದಾಯವೊಂದು ತಲೆ ತಲಾಂತರಗಳಿಂದ ನಡೆದು ಬಂದಿದೆ. ಬಾಂಗ್ಲಾದ  ಮಂಡಿ ಎಂಬ ಬುಡಕಟ್ಟ ಸಮುದಾಯದಲ್ಲಿ ಇಂದಿಗೂ ಈ ಅನಿಷ್ಠ ಪದ್ಧತಿ ಆಚರಣೆ ನಡೆಯುತ್ತಿದೆ. ಇದೇ ಹಿನ್ನಲೆ ಇಲ್ಲಿನ ಹೆಣ್ಣು ಮಕ್ಕಳು ಬೇರೆ ಹುಡುಗಿಯರಂತೆ ತಮ್ಮ ಮದುವೆಯ ಕನಸುಗಳನ್ನು ಕಾಣುವುದಿಲ್ಲ. ತನ್ನ ಹುಡುಗ ಹೀಗಿರಬೇಕು. ಹೀಗೇ ತನ್ನ ಮುಂದಿನ ಭವಿಷ್ಯ ಇರಬೇಕು ಎಂಬ ಯಾವ ಆಪೇಕ್ಷೆಯನ್ನು ಹೊಂದಿರುವುದಿಲ್ಲ. ಕಾರಣತಮ್ಮ ಅಪ್ಪನೇ  ಗಂಡನಾಗುವಾಗ ಅವರಿಂದ ಯಾವ ನಿರೀಕ್ಷೆಯೂ ಇರಲಾರದು ಎಂಬುದು ತಿಳಿದಿರುತ್ತಾರೆ. ಅದೇ ರೀತಿ ಅಮ್ಮನೇ ತಮ್ಮ ಸವತಿ, ಅತ್ತೆ ಎಲ್ಲಾ ಆಗುತ್ತಾಳೆ ಎಂದು ಅರಿತಿರುತ್ತಾರೆ. ತಾಯಂದಿರು ಕೂಡ ಯಾವುದೇ ಅಳುಕಿಲ್ಲದೇ ಹೆತ್ತ ಮಗಳನ್ನು ಗಂಡನೊಟ್ಟಿಗೆ ಬಿಡುತ್ತಾರೆ.

ಬುಡಕಟ್ಟಿನಲ್ಲಿನ ಈ ಆಚರಣೆ ಕುರಿತು ಮಾತನಾಡಿರುವ ಆರೋಲಾ ಎಂಬುವವರು, ಬುಡಕಟ್ಟಿನಲ್ಲಿ ಒಂದು ವೇಳೆ ಮಹಿಳೆಗೆ ಚಿಕ್ಕ ವಯಸ್ಸಿನಲ್ಲಿಯೇ ಗಂಡ ತೀರು ಹೋದರೆ ಆಕೆ ಎರಡನೇ ಮದುವೆಯಾಗಿ ಆತನ ಜೊತೆ ಮಗಳ ಮದುವೆ ಮಾಡುವ ಸಂಪ್ರದಾಯ ಕೂಡ ಇದೆ ಎನ್ನುತ್ತಾರೆ.

ಅಷ್ಟೇ ಅಲ್ಲ, ಮಗಳು ಕೂಡ ಚಿಕ್ಕ ವಯಸ್ಸಿನಲ್ಲಿ ವಿಧವೆಯಾದರೆ, ಆಕೆ ಗಂಡನ ಮನೆಯಲ್ಲಿ ತನಗಿಷ್ಟ ಬಂದ ಪುರುಷನ ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾಳೆ ಎನ್ನುತ್ತಾರೆ. ಅಪ್ಪನನ್ನೇ ಮದುವೆಯಾಗಿರುವ ಆರೋಲಾಗೆ ಸದ್ಯ ಮೂವರು ಮಕ್ಕಳಿದ್ದು, ಅಮ್ಮನಿಗೆ ನಾನು ಸೇರಿದಂತೆ  ಇಬ್ಬರು ಮಕ್ಕಳಿದ್ದೇವೆ ಎನ್ನುತ್ತಾರೆ.

ಭಾರತ ಮತ್ತು ಬಾಂಗ್ಲಾದೇಶದಲ್ಲಿ ಈ ಬುಡಕಟ್ಟು ಜನರಿದ್ದು, ಇಲ್ಲಿ ಈ ಆಚರಣೆಯನ್ನು ಇಂದಿಗೂ ನಡೆಸಿಕೊಂಡು ಕೂಡ ಬರಲಾಗಿದೆ. ಸುಮಾರು 20 ಲಕ್ಷ ಜನರು ಈ ಬುಡಕಟ್ಟಿನಲ್ಲಿದ್ದಾರೆ.  ಭಾರತದಲ್ಲಿ ಈ ಬುಡಕಟ್ಟ ಜನಾಂಗವನ್ನು ಗಾರೊ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಆಧುನಿಕ ಕಾಲಘಟ್ಟದಲ್ಲಿಯೂ ಕೂಡ ಈ ರೀತಿ ವಿಚಿತ್ರ ಆಚರಣೆಗಳನ್ನು ಆಚರಿಸಿಕೊಂಡು ಬರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಇಲ್ಲಿನ ಜನರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *