ಕ್ಷಮೆ ಕೇಳದಿದ್ದರೆ ಬಾಬಾ ರಾಮ್ದೇವ್ ವಿರುದ್ಧ 1000 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ
ಡೆಹ್ರಾಡೂನ್ಅ : ಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ಯೋಗ ಗುರು ರಾಮ್ದೇವ್ ನೀಡಿರುವ ತಪ್ಪು ಹೇಳಿಕೆಗೆ 15 ದಿನಗಳ ಒಳಗೆ ಕ್ಷಮೆ ಕೋರಬೇಕು ಇಲ್ಲದಿದ್ದರೆ 1000 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಒಕ್ಕೂಟ ಎಚ್ಚರಿಸಿದೆ.
ಒಕ್ಕೂಟದ 2000ಕ್ಕೂ ಹೆಚ್ಚು ವೈದ್ಯರು ಅಲೋಪತಿ ವೈದ್ಯರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ವೈದ್ಯರ ವಿರುದ್ಧ ರಾಮ್ದೇವ್ ನೀಡಿರುವ ಹೇಳಿಕೆ ಅವರ ಘನತೆಗೆ ಧಕ್ಕೆ ತಂದಿದೆ. ಹೀಗಾಗಿ ಐಎಂಎ ಪರವಾಗಿ ರಾಮ್ದೇವ್ ಅವರಿಗೆ ಆರು ಪುಟಗಳ ನೋಟಿಸ್ ಜಾರಿ ಮಾಡಲಾಗಿದೆ.
ರಾಮ್ದೇವ್ ನೀಡಿರುವ ಹೇಳಿಕೆ ಭಾರತೀಯ ದಂಡ ಸಂಹಿತೆ 499 ರ ಕಲಂ ಪ್ರಕಾರ ಕ್ರಿಮಿನಲ್ ಆರೋಪಕ್ಕೆ ಒಳಗಾಗುತ್ತದೆ. ಹೀಗಾಗಿ ನೋಟಿಸ್ ತಲುಪಿದ 15 ದಿನಗಳ ಒಳಗೆ ಅವರು ಲಿಖಿತ ಕ್ಷಮಾಪಣೆ ಕೇಳಬೇಕು ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಐಎಂಎ ವಕೀಲ ನೀರಜ್ ಪಾಂಡೆ ತಿಳಿಸಿದ್ದಾರೆ.
ತಾವು ಮಾಡಿದ ಆರೋಪದ ವಿಡಿಯೋ ತುಣುಕುಗಳನ್ನು ಹರಿದುಬಿಟ್ಟ ಸಾಮಾಜಿಕ ಜಾಲತಾಣಗಳಲ್ಲೇ ರಾಮ್ ದೇವ್ ಅವರು ಕ್ಷಮಾಪಣೆ ಕೋರುವ ವಿಡಯೋ ಬಿಡುಗಡೆ ಮಾಡಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.
ಇದರ ಜತೆಗೆ ತಾವು ಉತ್ಪಾದಿಸಿರುವ ಕೊರೊನಿಲ್ ಕಿಟ್ ಕೊರೊನಾ ಸೋಂಕಿಗೆ ರಾಮಬಾಣ ಎಂದು ನೀಡಿರುವ ಜಾಹೀರಾತನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಮ್ದೇವ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಐಎಂಎ ಎಚ್ಚರಿಕೆ ನೀಡಿದೆ.