ಕೊರೊನಾ ಸೋಂಕಿಗೆ ಬಂದಿದೆ ಮತ್ತೆರಡು ಔಷಧಿ
ನವದೆಹಲಿ,ಮೇ.26-ಕೊರೊನಾ ಸೋಂಕು ಬಾರದಂತೆ ನೋಡಿಕೊಳ್ಳುವ ಹಾಗೂ ಸೋಂಕು ತಗುಲಿದ ನಂತರ ಚಿಕಿತ್ಸೆ ನೀಡಲು ಸಹಕಾರಿಯಾಗುವ ಮತ್ತೆರಡು ಔಷಧಿಗಳನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾದ ಬರ್ಗೋಫರ್ ವೈದ್ಯಕೀಯ ಸಂಶೋಧನಾ ಸಂಸ್ಥೆ ಅಭಿವೃದ್ದಿಪಡಿಸಿರುವ ಪೆಪ್ಟೈಡ್ ಆಧಾರಿತ ಔಷಧಿಗಳನ್ನು ಫ್ರಾನ್ಸ್‍ನಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಈಗ ಕಂಡುಹಿಡಿಯಲಾಗಿರುವ ಔಷಧಿಗಳು ವಿಷಕಾರಿಯಲ್ಲ ಅದರೆ, ಕೆಲ ಅಡ್ಡಪರಿಣಾಮಗಳನ್ನು ಹೊಂದಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಹೊಸ ಔಷಧಿಗಳನ್ನು ರೂಮ್ ಟೆಂಪರೇಚರ್‍ನಲ್ಲಿ ಸಂಗ್ರಹಿಸಿಡಬಹುದಾಗಿದೆ ಇದರಿಂದ ಸಾರ್ವಜನಿಕ ವಿತರಣೆಗೆ ಇದು ಸಹಕಾರಿಯಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.