ಕೋರೊನಾ ದಿಂದ ದೇಶವನ್ನ ಕಾಪಾಡು‌ ಎಂದು ಅಲ್ಲಾನ ಬಳಿ ಮಾಜಿ ಸಚಿವ ರಹೀಂ ಖಾನ್ ಪ್ರಾಥನೆ…

   ತ್ಯಾಗ ಬಲಿದಾನದ ಸಂದೇಶದ ಪ್ರತಿಕವೆ ಈದ್ ಹಬ್ಬ. ಮುಸಲ್ಮಾನ ರ ಪವಿತ್ರ ಹಬ್ಬಕ್ಕೂ ಕೋರೊನಾ ಅಡ್ಡಿಯಾಗಿದೆ. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಈದ್,ರಂಜಾನ್ ಬಕ್ರಿದ್ ಹಬ್ಬ ಬಂತೆಂದರೆ ಸಾಕು ಈಡಿ ಬೀದರ್ ಜಿಲ್ಲೆಯಲ್ಲಿ ಕಳೆ ಕಟ್ಟುತ್ತಿತ್ತು, ಆದರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೊಂಕಿತರ ಸಂಖ್ಯೆ ಎರಿಕೆಯಾಗುತ್ತಲೆ ಇರೊದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಇಂದು ಪವಿತ್ರ ಈದ್ ಹಬ್ಬದ ಮೇಲೂ ಕರೋನಾ ವಕ್ಕರಿಸಿದೆ..

ನಗರದ ಈದ್ಗಾ ಮೈದಾನದಲ್ಲಿ ಕೆವಲ ಬೆರಳೆಣಿಕೆಯಷ್ಟು ಜನ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾಮೂಹಿಕ ಪ್ರಾಥನೆ ಸಲ್ಲಿಸಿದರು.. ಮಾಜಿ ಕ್ರೀಡಾ ಸಚಿವ ರಹೀಂ ಖಾನ್ ಸೇರಿದಂತೆ ಇತರರು ಸಾಮೂಹಿಕ ಪ್ರಾಥನೆಯಲ್ಲಿ ಭಾಗಿಯಾಗಿದ್ದರು.

ದೇಶದಲ್ಲಿ ಹೆಚ್ಚುತ್ತಿರುವ ಕೋರೊನಾ ಭೀತಿ ಆದಷ್ಟು ಬೇಗ ನಿವಾರಣೆ‌ಮಾಡಲಿ ಎಂದು ಆ ಅಲ್ಲಾನ ಬಳಿ ಪ್ರಾಥನೆ‌ ಮಾಡಿದೆವೆ. ಆ ಅಲ್ಲಾನ ಕೃಪೆ ಎಲ್ಲಾರ ಮೇಲಿದೆ, ಆದಷ್ಟು ಬೇಗ ನಮ್ಮನ್ನ ಈ ಸಂಕಷ್ಟದಿಂದ ಪಾರು ಮಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ‌ ಎಂದು ಮಾಜಿ ಕ್ರೀಡಾಸಚಿವ ರಹೀಂ ಖಾನ್ ಹೇಳಿದರು.. ನಾವು ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾಥನೆ‌ಮಾಡಿದ್ದೆವೆ. ಬೀದರ್ ಜಿಲ್ಲೆಯ ಜನತೆ ಅನಾವಶ್ಯಕವಾಗಿ ಮನೆ ಬಿಟ್ಟು ಹೊರಬರಬೇಡಿ, ಎಂದು ಜನತೆಯಲ್ಲಿ‌ಮನವಿ ಮಾಡಿದರು…

 

ವರದಿ : ಮಹೇಶ್ ಸಜ್ಜನ್ ಬೀದರ್

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *