ಬೆಂಗಳೂರಿನಲ್ಲಿ ನಿರ್ಭಯಾ ರೀತಿ ಅತ್ಯಾಚಾರ: ಖಾಸಗಿ ಭಾಗಕ್ಕೆ ಒದ್ದು ವಿಡಿಯೋ ಮಾಡಿದ ಕ್ರೂರಿಗಳು!

ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ಇಡೀ ದೇಶವೇ ಬೆಚ್ಚಿಬೀಳಿಸುವಂತಹ ರೇಪ್‌ ಪ್ರಕರಣ
  • ತನ್ನ ಗೆಳತಿಯನ್ನೇ ಅತ್ಯಾಚಾರಗೈದ ನಾಲ್ವರು ಕ್ರೂರಿಗಳು
  • ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿದ್ದವರಿಂದ ಕುಕೃತ್ಯ

ಬೆಂಗಳೂರು: ವೇಶ್ಯಾವಾಟಿಕೆಗೆ ತಳ್ಳಲು ಬಾಂಗ್ಲಾದೇಶದಿಂದ ನಗರಕ್ಕೆ ಕರೆತರಲಾಗಿದ್ದ 22 ವರ್ಷದ ಯುವತಿ ಮೇಲೆ, ಬಾಂಗ್ಲಾ ಮೂಲದವರೇ ಸಾಮೂಹಿಕ

ಅತ್ಯಾಚಾರ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದಾರೆ. ದಿಲ್ಲಿ ನಿರ್ಭಯಾ ಮಾದರಿಯ ಈ ಘಟನೆ ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಸಂಚಲನ ಸೃಷ್ಟಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆ ಮೇಲೆ ನಡೆಸಿದ ಪೈಶಾಚಿಕ ಕೃತ್ಯವನ್ನು ವಿಡಿಯೋ ಮಾಡಿ ಜಾಲತಾಣಗಳಿಗೆ ಹರಿಬಿಡಲಾಗಿದೆ. 8-10 ದಿನಗಳ ಹಿಂದೆಯೇ ಘಟನೆ ನಡೆದಿದ್ದು, ವಿಡಿಯೊ ವೈರಲ್‌ ಆದ ಬಳಿಕ ಘಟನೆ ಬೆಂಗಳೂರು ನಗರದಲ್ಲಿ ನಡೆದಿರುವುದು ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ!
ಕೆಲ ದಿನಗಳ ಹಿಂದೆ ಬಾಂಗ್ಲಾ ಮೂಲದ ಸಂತಸ್ತೆ ಸೇರಿದಂತೆ ಇನ್ನಿತರ ಕೆಲವರು ನಕಲಿ ದಾಖಲೆಗಳ ಮೇಲೆ ಪಡೆದುಕೊಂಡಿದ್ದ ಆಧಾರ್‌ ಕಾರ್ಡ್‌ ಸಹಿತ ಇನ್ನಿತರ ಭಾರತೀಯ ಗುರುತಿನ ಚೀಟಿ ಆಧಾರದ ಮೇಲೆ ದೇಶ ಪ್ರವೇಶಿಸಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬಂದು ಅವಲಹಳ್ಳಿ ಬಳಿಯ ಎನ್‌ಆರ್‌ಐ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಗುಂಪಿನಲ್ಲೇ ಸಂತ್ರಸ್ತೆ ಕೂಡ ಇದ್ದಳು. ಇವರ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಮೇಲೆ ಮಹಿಳೆ ಸೇರಿ ಐವರು ಅಮಾನವೀಯವಾಗಿ ದೌರ್ಜನ್ಯ ಎಸಗಿದ್ದಾರೆ. ಗುಂಪಿನಲ್ಲಿರುವವರೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಕೆಲ ದಿನಗಳ ಹಿಂದೆ ಘಟನೆ ನಡೆದಿದೆ. ಆದರೆ, ಒಂದೆರಡು ದಿನಗಳ ಹಿಂದೆ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕೃತ್ಯದ ವಿಡಿಯೋ ವೈರಲ್‌ ಆಗಿತ್ತು. ಕೃತ್ಯ ಎಸಗಿದ ಗುಂಪಿನಲ್ಲಿದ್ದ ಆರೋಪಿ ವಿಡಿಯೋವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದ.

ಈ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಪರಿಶೀಲಿಸಿದಾಗ, ಭಾಷೆ ಆಧಾರದ ಮೇಲೆ ಆರೋಪಿಗಳು ಮತ್ತು ಸಂತ್ರಸ್ತೆ ಬಾಂಗ್ಲಾದೇಶ ಮೂಲದವರು ಎಂದು ಗೊತ್ತಾಗಿದೆ. ನಂತರ ಅವರ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಬೆಂಗಳೂರಿನಲ್ಲಿದ್ದ ಆರೋಪಿಗಳು, ಬಾಂಗ್ಲಾದೇಶದಲ್ಲಿನ ಕುಟುಂಬದ ಜತೆ ಸಂಪರ್ಕದಲ್ಲಿದ್ದರು. ಹೀಗಾಗಿ, ಅಲ್ಲಿನ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *