ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ ಮುಂದುವರಿಕೆ

ಚಿತ್ರದುರ್ಗ ; ಜಿಲ್ಲೆಯಲ್ಲಿ ಮೇ 24 ರಿಂದ 29ರವರೆಗೆ ಆಯೋಜಿಸಲಾದ ಎಸ್‍ಎಸ್‍ಎಲ್‍ಸಿ ಸಹಾಯವಾಣಿಗೆ ಪ್ರತಿನಿತ್ಯವೂ ಅನೇಕ ಕರೆಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಮೂಡುವ ಸಂದೇಹಗಳಿಗೆ ಪರಿಹಾರ ಕಂಡುಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಳಳಲ್ಲಿ ಮೂಡುವ ಪರೀಕ್ಷೆ ಮತ್ತು ಪಠ್ಯವಸ್ತುವಿಗೆ ಸಂಬಂಧಿಸಿದ ಸಂದೇಹಗಳನ್ನು ಪರಿಹರಿಸುವ ಸಲುವಾಗಿ ಸಹಾಯವಾಣಿಯನ್ನು ಮುಂದುವರೆಸಿದಲ್ಲಿ ಇನ್ನೂ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಆದ್ದರಿಂದ ಜಿಲ್ಲಾ ಹಂತದಲ್ಲಿ ಸಹಾಯವಾಣಿ ಮುಂದುವರೆಸಲಾಗಿದೆ.
ಸಹಾಯವಾಣಿ ಕಾರ್ಯಕ್ರಮವನ್ನು ಮೇ 31 ರಿಂದ ಜೂನ್ 05 ರವರೆಗೆ ಮುಂದುವರೆಸಲಾಗಿದ್ದು, ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಂಪನ್ಮೂಲ ಶಿಕ್ಷಕರು ಉತ್ತರ ನೀಡಲಿದ್ದಾರೆ. ಮಕ್ಕಳು ವೇಳಾಪಟ್ಟಿಗನುಗುಣವಾಗಿ ನೀಡಲಾಗುತ್ತಿರುವ ಶಿಕ್ಷಕರ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ವಿಷಯವಾರು ಶಿಕ್ಷಕರ ಹೆಸರು, ಮೊಬೈಲ್ ಸಂಖ್ಯೆ ಹಾಗೂ ನೋಡಲ್ ಅಧಿಕಾರಿಯ ವಿವರ ಇಂತಿದೆ. ಮೇ 31ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.  ಕನ್ನಡ-ನವೀನ್ ಹೆದ್ ಎಂ-7892016373, ಇಂಗ್ಲೀಷ್-ಹೆಚ್.ಕೆ.ಮಹೇಶ್-7975695266, ಹಿಂದಿ-ಮುಜಮುಲ್ಲಾ-9945372323, ಗಣಿತ-ವಿಜಯಕುಮಾರ್-9164429028, ವಿಜ್ಞಾನ-ಮಹಂತೇಶ್-8073724166, ಸಮಾಜ ವಿಜ್ಞಾನ-ವಿಜಯ್-6363869603, ಕನ್ನಡ ವಿಷಯ ಪರಿವೀಕ್ಷಕ ಶಿವಣ್ಣ-9482005909 ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜೂನ್ 01 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.  ಕನ್ನಡ-ಸಿದ್ದೇಶ್ವರ ಎಸ್.-7899909045, ಇಂಗ್ಲೀಷ್-ಜಗನ್ನಾಥ್-9980173044, ಹಿಂದಿ-ಶಿಲ್ಪ-9620302060, ಗಣಿತ-ಶಿವಕುಮಾರ್-8660155848, ವಿಜ್ಞಾನ-ಸಯ್ಯದ್ ಸಾಧಿಕ್ ಭಾಷಾ-9164354511, ಸಮಾಜ ವಿಜ್ಞಾನ-ಟಿ.ಎಂ.ಮಲ್ಲಿಕಾರ್ಜುನ್-9901382595 , ಇಂಗ್ಲಿಷ್ ವಿಷಯ ಪರಿವೀಕ್ಷಕ ಚಂದ್ರಣ್ಣ-9945713933 ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜೂನ್ 02 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.  ಕನ್ನಡ-ಕೇಶವಮೂರ್ತಿ ಕೆ-9964627738, ಇಂಗ್ಲೀಷ್-ರಾಘವೇಂದ್ರಚಾರಿ-9972604606, ಹಿಂದಿ-ಸಿಲಾರ್ ಸಾಬ್-9916647399, ಗಣಿತ-ರುದ್ರಮುನಿ-779506472, ವಿಜ್ಞಾನ-ಶೋಭಾ ಎಂ.ಆರ್-9480640901, ಸಮಾಜ ವಿಜ್ಞಾನ-ನಾಗರಾಜ್-9481866670 , ಗಣಿತ ವಿಷಯ ಪರಿವೀಕ್ಷಕರಾದ ಸವಿತಾ-9448339134 ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜೂನ್ 03 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.  ಕನ್ನಡ-ಆಶಾರಾಣಿ-9742281288, ಇಂಗ್ಲೀಷ್-ಶೋಭಾ-9980708083, ಹಿಂದಿ-ದ್ಯಾಮೇಶ-8105237474, ಗಣಿತ-ಶ್ರೀನಿವಾಸ್ ಮೂರ್ತಿ-8762218785, ವಿಜ್ಞಾನ-ಭಾಗ್ಯಲಕ್ಷ್ಮಿ-9743488485, ಸಮಾಜ ವಿಜ್ಞಾನ-ಶ್ರೀನಿವಾಸ್-9964295532 , ವಿಜ್ಞಾನ ವಿಷಯ ಪರಿವೀಕ್ಷಕರಾದ ಗೋವಿಂದಪ್ಪ-9448694592 ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜೂನ್ 04 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.  ಕನ್ನಡ-ಮಂಜುನಾಥ್.ಬಿ.ಟಿ-9886611582, ಇಂಗ್ಲೀಷ್-ಸಿದ್ದೇಶ್-6362311799, ಹಿಂದಿ-ಮಮತ-9448168483, ಗಣಿತ-ಅನ್ನಪೂರ್ಣ-9113626466, ವಿಜ್ಞಾನ-ಗೋವಿಂದರಾಜ್-7975471596, ಸಮಾಜ ವಿಜ್ಞಾನ-ಹಾಲೇಶಪ್ಪ-9902592199, ಕ್ರಾಪ್ಟ್ ವಿಷಯ ಪರಿವೀಕ್ಷಕರಾದ ಬಸವರಾಜ್ ಓಲೇಕಾರ್-9060329693 ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜೂನ್ 05 ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.  ಕನ್ನಡ-ಮಹಂತೇಶ್-6680169389, ಇಂಗ್ಲೀಷ್-ಸೋಮಶೇಖರ್-9901519548, ಹಿಂದಿ-ಮಂಜುನಾಥ್ ಅರಳಿಗುಪ್ಪಿ-9980457592, ಗಣಿತ-ಗೌರೀಶ್-9964490411, ವಿಜ್ಞಾನ-ಜ್ಯೋತಿ-9686872504, ಸಮಾಜ ವಿಜ್ಞಾನ-ರೂಪಾದೇವಿ-9481042046, ಹಿಂದಿ ವಿಷಯ ಪರಿವೀಕ್ಷಕರಾದ ಮಹಲಿಂಗಪ್ಪ-8496817389 ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ವೇಳಾಪಟ್ಟಿಗೆ ಅನುಗುಣವಾಗಿ ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ಶಿಕ್ಷಕರು ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ಸಹಾಯವಾಣಿಯಲ್ಲಿ ಮನೆಯಿಂದಲೇ ಭಾಗವಹಿಸುವುದು. ಸಹಾಯವಾಣಿಗೆ ಬರುವ ವಿಷಯವಾರು ಪ್ರಶ್ನೆಗಳಿಗೆ ಉತ್ತರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಷಯವಾರು ಪ್ರಶ್ನೆಗಳನ್ನು ಮತ್ತು ಕೇಳುವ ವಿದ್ಯಾರ್ಥಿಯ ಪೂರ್ಣ ವಿಳಾಸದೊಂದಿಗೆ ಪ್ರತ್ಯೇಕ ದಾಖಲೆ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *