ಕಲಬುರಗಿ : 700ಕ್ಕೂ ಅಧಿಕ ಗ್ರಾಮಗಳು ಕೊರೋನಾ ಮುಕ್ತ:ಸಚಿವ ಮುರುಗೇಶ್ ನಿರಾಣಿ

ಕಲಬುರಗಿ : ಜಿಲ್ಲೆಯ 700ಕ್ಕೂ ಅಧಿಕ ಗ್ರಾಮಗಳು ಕೊರೋನಾ ಮುಕ್ತ ಗ್ರಾಮಗಳಾಗಿವೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ 20 ದಿನಗಳ ಹಿಂದೆ ಮೂರನೇ ಸ್ಥಾನದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳ ಜಿಲ್ಲೆಯ ಪಟ್ಟಿಯಲ್ಲಿ ಕಲಬುರಗಿ ಇತ್ತು. ಇದೀಗ ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತದ ಅವಿರÀತ ಶ್ರಮದಿಂದ 30ನೇ ಸ್ಥಾನಕ್ಕೆ ಜಿಲ್ಲೆ ತಲುಪಿದೆ. ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಆಕ್ಸಿಜನ್, ರೆಮಿಡಿಸಿವಿರ್ ಇಂಜಕ್ಷನ್, ಬೆಡ್ ಕೊರತೆಯಿಲ್ಲ. ಬ್ಲ್ಯಾಕ್ ಫಂಗಸ್ ಸೋಂಕಿನ ವಿರುದ್ಧ ಹೋರಾಡಲೂ ಇಂಜಕ್ಷನ್ ಅಭಾವವಿಲ್ಲ ಎಂದು ಸಚಿವರು ಹೇಳಿದರು.

ಕಳೆದ ಏಪ್ರಿಲ್ 24ರವರೆಗೆ ಒಟ್ಟು 404ಬೆಡ್ ಗಳ ಪೈಕಿ ಐ.ಸಿ.ಯು 174, ಐಸೋಲೇಷನ್ 230 ಬೆಡ್ ಇದ್ದವು. ಪ್ರಸ್ತುತ ಒಟ್ಟು 159 ಪೈಕಿ 82 ಐ.ಸಿ.ಯು ಹಾಗೂ 54 ಐಸೋಲೇಷನ್, 88 ಐ.ಸಿ.ಯು. ಬೆಡ್ ಖಾಲಿಯಿದ್ದು, ಬೆಡ್ ಗಳ ಕೊರತೆ ಇಲ್ಲ ಎಂದರು. ರೋಗಿಗಳಿಗೆ ಅನುಕೂಲವಾಗಲು ಹೆಚ್ಚುವರಿಯಾಗಿ ಜಿಮ್ಸ್ ಆಸ್ಪತ್ರೆಯಲ್ಲಿ 65 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡುತ್ತಿದ್ದು, ಎರಡು ದಿನಗಳಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದು ಸಚಿವರು ವಿವರಿಸಿದರು.

ಕೋವಿಡ್ ವಿರುದ್ಧ ಹೋರಾಡಲು ಮಾತ್ರವಲ್ಲ ಜಿಲ್ಲೆಗೆ ಬೇಕಾಗುವ ಅಗತ್ಯ ಹಣಕಾಸು ನೆರವು ಜಿಲ್ಲೆಯಲ್ಲಿ ಇದೆ. 175 ಕೋಟಿ ರೂ. ಜಿಲ್ಲಾ ಖನಿಜ ನಿಧಿಯಲ್ಲಿ ಇದೆ. ಈ ನಿಧಿಯಲ್ಲಿ ಶೇ.33ರಷ್ಟು ರೂಪಾಯಿ ಹಣ ಬಳಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಇದೆ. ಒಟ್ಟಾರೆ ಕೋವಿಡ್‍ಗಾಗಿ ಜಿಲ್ಲೆಯಲ್ಲಿ 100 ಕೋಟಿ ರೂಪಾಯಿ ಹಣ ಇದೆ ಎಂದು ತಿಳಿಸಿದರು.

ವೈದ್ಯರೇ ದೇವರು: ವೈದ್ಯಕೀಯ ಸಿಬ್ಬಂದಿಯವರು ತಮ್ಮ ಜೀವದ ಹಂಗು ತೊರೆದು ಕೊರೋನಾ ವಿರುದ್ಧ ತೊಡೆತಟ್ಟಿ ಶ್ರಮಿಸುತ್ತಿದ್ದಾರೆ. ವೈದ್ಯರೇ ನಿಜವಾದ ದೇವರು ಎಂದು ಹಾಡಿಹೊಗಳಿದ ಸಚಿವರು, ವೈದ್ಯರ ವಿರುದ್ಧ ಟೀಕೆ ಮಾಡುವುದು ಸುಲಭ. ಆದರೆ, ಇಂತಹ ಸಂದರ್ಭದಲ್ಲಿ ರೋಗಿಗಳ ಜೊತೆಯಿದ್ದು ವೈದ್ಯರು, ನರ್ಸ್, ಡಿ ಗ್ರೂಪ್ ಮುಂತಾವರು ದುಡಿಯುತ್ತಿದ್ದು, ಅವರಿಗೆ ಸಚಿವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಕನೀಜ್ ಫಾತಿಮಾ, ಎಂ.ವೈ.ಪಾಟೀಲ, ವಿಧಾನ ಪರಿಷತ್ತಿನ ಸದಸ್ಯರಾದ ಶಶಿಲ ಜಿ. ನಮೋಶಿ, ಸುನೀಲ ವಲ್ಯಾಪುರೆ, ಬಿ.ಜಿ.ಪಾಟೀಲ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀμï ಶಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ಇ.ಎಸ್.ಐ.ಸಿ. ಡೀನ್ ಡಾ. ಇವಾನೋ ಲೊಬೋ, ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕರ, ಸಹಾಯಕ ಔಷಧ ನಿಯಂತ್ರಕ ಡಾ.ಗೋಪಾಲ ಭಂಡಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *