ನಿಷ್ಟಾವಂತ , ತಮ್ಮ ಖಡಕ್ ಬರವಣಿಗೆಗೆ ಖ್ಯಾತರಾಗಿರುವ, ಕಲಬುರಗಿ ಕಲರವ ಪತ್ರಿಕೆ ಸಂಪಾದಕರಾದ ಸಾ.ಸಿ ಬೆನಕನಹಳ್ಳಿಯವರಿಗೆ, ವಿಶ್ವೇಶ್ವರಯ್ಯ ರಾಷ್ರ್ಟೀಯ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ
ಸಾ. ಸಿ ಬೆನಕನಹಳ್ಳಿ ಹೆಸರು ಕೇಳಿದ್ರೆನೆ ಪತ್ರಿಕಾ ರಂಗ ಅವರನ್ನ ಗುರುತಿಸೊದು ಅವರ ಖಡರ್ ಬರವಣಿಗೆ ಮತ್ತು ಪ್ರಾಮಾಣಿಕತೆಗೆ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಕಲಬುರಗಿ ಕಲರವ ಪತ್ರಿಕೆಯ ಸಂಪಾದರು ಮತ್ತು ಕೆ ಕೆ ನ್ಯೂಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿ ಈ ಒಂದು ಮಾಧ್ಯಮದ ಮೂಲಕ ಬಡವರ ಧ್ವನಿಯಾಗಿ ಮತ್ತು ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಹಿ ಕಾರ್ಯ ನಿರ್ವಹಿಸುತ್ತಿದ್ದು , ಅವರ ಈ ಸೇವೆಯನ್ನ ಮೆಚ್ಚಿ ಹಲವು ಸಂಘ ಸಂಸ್ಥೆಗಳು ಹತ್ತಾರು ಪ್ರಶಸ್ಥಿಗಳನ್ನ ಅವರ ಮುಡಿಗೇರಿಸಿದ್ದಾರೆ, ಆ ಸಾಲಿಗೆ ಈಗ ವಿಶ್ವೇಶ್ವರಯ್ಯ ರಾಷ್ರ್ಟೀಯ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ ಕೂಡ ಸಾ.ಸಿ ಬೆನಕನಹಳ್ಳಿಯವರಿಗೆ ದೊರಕಿದ್ದು ಒಬ್ಬ ಪ್ರಾಮಾಣಿಕ ಮತ್ತು ನಿಷ್ಟಾವಂತ ಸಂಪಾದಕರಿಗೆ ಸಿಗಬೇಕಾದ ಗೌರವವನ್ನು . ವಿಶ್ವೇಶ್ವರಯ್ಯ ರಾಷ್ರ್ಟೀಯ ಸಂಸ್ಥೆ ನೀಡಿದೆ.
ತಾವು ಬೇಳೆಯುವುದರ ಜೊತೆಗೆ ತಮ್ಮ ಪತ್ರಿಕೆ ಮತ್ತು ವಾಹಿನಿಯಲ್ಲಿ ಹಲವು ಭಾವಿ ಪತ್ರಕರ್ತರನ್ನ ಕೆಲಸ ಕೊಟ್ಟು ಅವರ ಜೀವನಕ್ಕೂ ಆಸರೆ ಆಗಿದ್ದಾರೆ. ಈ ರೀತಿಯ ಹತ್ತು ಹಲವು ಕಾರ್ಯಗಳನ್ನ ಮಾಡುತ್ತ , ಪತ್ರಿಕಾ ರಂಗದ ಜೊತೆ ಸಮಾಜ ಸೇವೆಯಲ್ಲೂ ಸದಾ ತೊಡಗಿಕೊಂಡಿರುವ ಇವರು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಕೇವಲ ಕಲ್ಯಾಣ ಕರ್ನಾಟಕ ಮಾತ್ರವಲ್ಲದೆ , ಕರ್ನಾಟಕ ರಾಜ್ಯದಲ್ಲಿ ಒಂದುತ್ತಮ ಪತ್ರಕರ್ತರೆಂದು ಹೆಸರುವಾಸಿಯಾಗಿ, ವಿಶ್ವೇಶ್ವರಯ್ಯ ರಾಷ್ರ್ಟೀಯ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ ಪಡೆದುಕೊಂಡಿರುವುದು ಅವರ ಅಭಿಮಾನಿ ಬಳಗಕ್ಕೆ ತುಂಬಾ ಸಂತಸ ತಂದುಕೊಟ್ಟಿದೆ.