ದಿಲ್ಲಿಗೆ ತೆರಳುವ ಮುನ್ನ ಕಾಡಿನಲ್ಲಿ 3 ದಿನಗಳ ರಹಸ್ಯ ಪೂಜೆ ನಡೆಸಿದ್ದ ಸಚಿವ ಸಿಪಿ ಯೋಗೇಶ್ವರ್‌!

ಹೈಲೈಟ್ಸ್‌:

  • ದಿಲ್ಲಿಗೆ ತೆರಳುವ ಮುನ್ನ ಯೋಗೇಶ್ವರ್‌ 3 ದಿನಗಳ ರಹಸ್ಯ ಪೂಜೆ
  • ಈ ಪೂಜೆ ಹಿಂದಿರುವ ಪ್ರಮುಖ ಕಾರಣವೇನು ಗೊತ್ತಾ..?
  • ತಿಪಟೂರಿನ ಬಳಿಯ ನೊಣವಿನಕೆರೆಯ ಕಾಡಿನಲ್ಲಿ ಪೂಜೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಲು ದಿಲ್ಲಿಗೆ ತೆರಳಿದ್ದ ಸಚಿವ ಸಿ.ಪಿ.ಯೋಗೇಶ್ವರ್‌ ಈ ಪ್ರವಾಸಕ್ಕೂ ಮುನ್ನ ಇಷ್ಟಾರ್ಥ ಪ್ರಾಪ್ತಿಗಾಗಿ ರಹಸ್ಯ ಪೂಜೆ ನಡೆಸಿರುವ ಅಂಶ ಬೆಳಕಿಗೆ ಬಂದಿದೆ. ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಲು ದಿಲ್ಲಿಗೆ ತೆರಳಿದ್ದ ಯೋಗೇಶ್ವರ್‌ ಬರಿಗೈಲಿ ವಾಪಸ್‌ ಬಂದದ್ದು ಗೊತ್ತಿರುವ ವಿಚಾರ.

ಆದರೆ, ಅವರು ದಿಲ್ಲಿಗೆ ಹೊರಡುವ ಮುನ್ನ ‘ದಂಡಕಾರಣ್ಯ’ ಪ್ರವೇಶಿಸಿದ್ದ ಸಂಗತಿ ಬಹಳ ಕುತೂಹಲಕಾರಿಯಾಗಿದೆ. ತಿಪಟೂರಿನ ಬಳಿಯ ನೊಣವಿನಕೆರೆಯ ಕಾಡಿನಲ್ಲಿರುವ ದೇವಸ್ಥಾನದಲ್ಲಿ ಯೋಗೇಶ್ವರ್‌ ಪೂಜೆ ಮಾಡಿಸಿದ್ದರು. ಈ ಸಂಬಂಧವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಈಗ ಪೋಟೊಗಳು ಹರಿದಾಡುತ್ತಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್‌ ಸೋತಿದ್ದರು. ನಂತರ ಅವರಿಗೆ ಎಂಎಲ್ಸಿ ಸ್ಥಾನ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಇನ್ನೂ ಉನ್ನತ ಹುದ್ದೆಯ ಬಯಕೆಯಲ್ಲಿರುವ ಯೋಗೇಶ್ವರ್‌ ಕಾಡಿನಲ್ಲಿರುವ ದೇವರ ಮೊರೆ ಹೋದರು.

ನೊಣವಿನಕೆರೆಯ ಕಾಡಿನ ದೇಗುಲದಲ್ಲಿ 3 ದಿವಸ ಪೂಜೆ ಮಾಡಿಸಿದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಬಿಜೆಪಿಯಲ್ಲಿ ಯೋಗೇಶ್ವರ್‌ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪೂಜೆ ವಿಚಾರ ತಿಳಿದು ಸ್ವಪಕ್ಷದಲ್ಲೇ ಯೋಗೇಶ್ವರ್‌ ವಿರೋಧಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *