ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಸಿಪಿಎಂ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ ಸರಕಾರಕ್ಕೆ ಆಗ್ರಹ

ಮೇಲ್ಕಂಡ ವಿಷಯಕ್ಕೆ ಸಂಬಂದಿಸಿ ನಮ್ಮ ಎಲ್ಲಾ ಏಳು ಪಕ್ಷಗಳು ಉಲ್ಲೇಖದ ಪತ್ರದಂತೆ ರಾಜ್ಯದಲ್ಲಿ ಕೋವಿಡ್ ದುಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ್ದೆವು. ಆದರೇ ತಮ್ಮ ಸರಕಾರ, ನಮ್ಮ ಹಾಗೂ ಜನತೆಯ ಒತ್ತಾಯಗಳನ್ನು ಈಗಲೂ ಗಂಭೀರವಾಗಿ ಪರಿಗಣಿಸದೇ ಇರುವುದು ಮತ್ತು ಅಗತ್ಯ ಕ್ರಮ ವಹಿಸುವಲ್ಲಿ ಉದಾಸೀನದಿಂದಿರುವುದು ಮತ್ತು ಜನತೆ ಸಂಕಷ್ಠದಲ್ಲಿರುವಾಗಲೇ, ಜನತೆಯ ತೀವ್ರ ವಿರೋಧದ ನಡುವೆ, ಮರೆ ಮೋಸದ ಮೂಲಕ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಿರುವುದು ತೀವ್ರ ಖಂಡನೀಯವಾಗಿದೆ.
ತಾವು ಪ್ರಕಟಿಸಿದ ಕೋವಿಡ್ ಪರಿಹಾರವು ಸಂಕಷ್ಟದಲ್ಲಿರುವ ಜನತೆಯನ್ನು ಅಣಕಿಸಿದಂತೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷಗಳು, ಸರಕಾರದ ಕೊಲೆಪಾತಕ ನಿರ್ಲಕ್ಷ್ಯವನ್ನು ಮತ್ತು ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳನ್ನು ಪ್ರತಿರೋಧಿಸಿ ರಾಜ್ಯದಾದ್ಯಂತ ಈ ದಿನ ಊರೂರುಗಳಲ್ಲಿ ಮತ್ತು ಮನೆ ಮನೆಗಳಲ್ಲಿ ಅಗತ್ಯ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರತಿಭಟನೆ ನಡೆಸಿ, ಉಲ್ಲೇಖಿತ ಪತ್ರದ ಹಕ್ಕೊತ್ತಾಯಗಳು ಮತ್ತು ಈ ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಮರಳಿ ಒತ್ತಾಯಿಸುವೆವು.
ಹಕ್ಕೊತ್ತಾಯಗಳು :
1) ರಾಜ್ಯದ ಎಲ್ಲಾ 18 ವರ್ಷ ಮೇಲ್ಪಟ್ಟ ಜನತೆಗೆ ಉಚಿತ ಸಾರ್ವತ್ರಿಕ ಲಸಿಕೀಕರಣಕ್ಕೆ ವಿಳಂಬಿಸದೇ ತಕ್ಷಣವೇ ಕ್ರಮವಹಿಸಬೇಕು.
2) ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೇಜಿ ಸಮಗ್ರ ಆಹಾರಧಾನ್ಯಗಳ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳಿರುವ ಪೊಟ್ಟಣವನ್ನು ಮತ್ತು 10 ಸಾವಿರ ರೂಪಾಯಿಗಳ ನೆರವನ್ನು ಕೋವಿಡ್ ಸಮಸ್ಯೆ ನಿಯಂತ್ರಣಕ್ಕೆ ಬಂದು ಯಥಾ ಸ್ಥಿತಿ ಮುಂದುವರೆಯುವವರೆಗೆ ನೀಡಬೇಕು. ಪ್ರತಿ ಗ್ರಾಮ/ ನಗರಗಳ ದಲಿತರು ಮತ್ತು ಬಡವರು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ವಿಸ್ಥರಿಸಬೇಕು ಮತ್ತು ಅವುಗಳನ್ನು ಬಲಗೊಳಿಸಬೇಕು.
3) ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ವಿವಿಧ ತರಕಾರಿ ಬೆಳೆಗಳಿಗೆ ತಲಾ ಎಕರೆಗೆ ಕನಿಷ್ಠ 25,000 ರೂಗಳನ್ನು ಒದಗಿಸಬೇಕು ಮತ್ತು ರಾಜ್ಯದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಒಂದು ಬಾರಿ ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.
4) ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ – 2020, ವಿದ್ಯುತ್ ತಿದ್ದುಪಡಿ ಮಸೂದೆ- 2020 ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ – 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಇವುಗಳನ್ನು ತಕ್ಷಣವೇ ವಾಪಾಸು ಪಡೆಯಬೇಕು. ಅದೇ ರೀತಿ ಸಾರ್ವಜನಕ ರಂಗದ ಉದ್ದಿಮೆಗಳು ಮತ್ತು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕು.
5) ಕನಿಷ್ಟ ಬೆಂಬಲ ಬೆಲೆಯ ಖಾತ್ರಿ ಪಡಿಸಲು ಬೆಂಬಲ ಬೆಲೆ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಂದ ರೈತರ ಸಂರಕ್ಷಣೆಗೆ ಋಣ ಮುಕ್ತ ಕಾಯ್ದೆ ಗಳನ್ನು ಜಾರಿಗೊಳಿಸಬೇಕು.
6) ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ಹಾಗೂ 200 ದಿನಗಳಿಗೆ ವಿಸ್ಥರಿಸಬೇಕು. ಕೂಲಿಯನ್ನು ವೇತನದಂತೆ ಈ ಕೂಡಲೇ 424 ರೂಗಳಿಗೆ ಹೆಚ್ಚಿಸಬೇಕು.
7) ಕೋವಿಡ್ ಮುಂಚೂಣಿಯ ಎಲ್ಲಾ ಕಾರ್ಯಕರ್ತರಿಗೆ ವಿಮೆ ಸೌಲಭ್ಯಗಳೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಸಣ ಕೆಲಸಗಾರರು, ಮುನಿಸಿಪಲ್ ಕೆಲಸಗಾರರು ಮುಂತಾದ ಶುಚಿ ಕಾರ್ಯದಲ್ಲಿತೊಡಗಿದವರಿಗೂ ಸೌಲಭ್ಯಗಳನ್ನು ವಿಸ್ಥರಿಸಬೇಕು.

ಶರಣಬಸಪ್ಪಾ ಮಮಶೆಟ್ಟಿ ಜಿಲ್ಲಾ ಕಾರ್ಯದರ್ಶಿ CPIM

ಜಾಫರ್ ಖಾನ್ ಸಾಬ್

ಸಿದ್ದಲಿಂಗಯ್ಯ ಸ್ವಾಮಿ
ಯಂಪಳ್ಳಿ ತಾಲೂಕು ಕಾರ್ಯದರ್ಶಿ

ಪ್ರದೀಪ ಕುಮಾರ್

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *