ತೆಲುಗು ಬಿಗ್ಬಾಸ್ ಕೆಲಸಗಳು ಶುರು; ಪ್ರೋಮೋ ಶೂಟ್ನಲ್ಲಿ ನಾಗಾರ್ಜುನ್ ಬಿಜಿ
ಕಳೆದ ನಾಲ್ಕು ತಿಂಗಳಿಂದ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ತಾನೇ ಕೊಂಚ ಸಡಿಲಗೊಂಡಿದೆ. ಈ ನಡುವೆ ಸಾಕಷ್ಟು ನಿರ್ದೇಶಕರು ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗಳನ್ನು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಮುಖ ಮಾಡಿದ್ದಾರೆ. ಈ ನಡುವೆ ಒಂದಷ್ಟು ಸಿನಿಮಾ ತಂಡಗಳು ಧೈರ್ಯ ಮಾಡಿ ಶೂಟಿಂಗ್ ಸಹ ಆರಂಭಿಸಿವೆ.
ಟಾಲಿವುಡ್ನಲ್ಲಿ ಸಿನಿಮಾ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಇದೀಗ ನಟ ನಾಗಾರ್ಜುನ್ ಸಹ ಚಿತ್ರೀಕರಣಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪ್ರೋಮೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಕೆಲಸಗಳಿಗೂ ಈಗಾಗಲೇ ಚಾಲನೆ ಸಹ ನೀಡಲಾಗಿದೆ.
ಈಗಾಗಲೇ ಕನ್ನಡ, ಹಿಂದಿ, ತೆಲುಗು ಸೇರಿ ಹಲವು ಭಾಷೆಗಳ ಬಿಗ್ಬಾಸ್ ಬಗ್ಗೆ ಚರ್ಚೆ ಶುರುವಾಗಿದೆ. ಯಾವಾಗ ಶುರು ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ. ಹಿಂದಿಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ. ಇದೀಗ ತೆಲುಗು ಬಿಗ್ಬಾಸ್ಗೆ ದಿನಗಣನೆ ಆರಂಭವಾಗಿದೆ. ಪ್ರೋಮೋ ಶೂಟಿಂಗ್ ಶುರುವಾಗಿದ್ದು, ನಾಗಾರ್ಜುನ್ ಬಹುದಿನಗಳ ಬಳಿಕ ಮತ್ತೆ ಕ್ಯಾಮರಾ ಎದುರಿಸಿದ್ದಾರೆ.
ಸೀಮಿತ ಜನರಷ್ಟೇ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇರಲಿದ್ದು, ಸರ್ಕಾರ ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಚಿತ್ರೀಕರಣ ಮಾಡಿಕೊಳ್ಳಲು ತಂಡ ಯೋಜನೆ ರೂಪಿಸಿದೆ. ಈಗಾಗಲೇ ಪ್ರೋಮೋ ಶೂಟ್ ನಡೆಯುತ್ತಿದ್ದು, ಅದಾದ ಬಳಿಕ ಯಾವಾಗಿನಿಂದ ಶೋ ಎಂಬುದನ್ನು ಸ್ಟಾರ್ ಮಾ ವಾಹಿನಿ ಬಹಿರಂಗಪಡಿಸಲಿದೆ.
ಇನ್ನು ಲಾಕ್ಡೌನ್ಗೂ ಮುನ್ನ ಘೋಷಣೆ ಆಗಿದ್ದ ವೈಲ್ಡ್ ಡಾಗ್ ಸಿನಿಮಾದ ಶೂಟಿಂಗ್ನಲ್ಲಿಯೂ ನಾಗಾರ್ಜುನ್ ಪಾಲ್ಗೊಳ್ಳಲಿದ್ದಾರೆ