ದಲಿತ ಸೇನೆಯಾ ರಾಜ್ಯ ಅಧ್ಯಕ್ಷರ ಹುಟ್ಟುಹಬ್ಬದ ನಿಮಿತ್ಯ ಇಂದು ಕಾಳಗಿ ತಾಲೂಕು ದಲಿತ ಸೇನೆಯ ಕಾರ್ಯಕರ್ತರು ರೋಗಿಗಳಿಗೆ, ನಿರ್ಗತಿಕರಿಗೆ ಹಣ್ಣು ಹಂಚಿದರು
ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಇಂದು ದಲಿತ ಸೇನೆಯ ರಾಜ್ಯ ಅಧ್ಯಕ್ಷರಾದ ಹಣಮಂತ ಮಳಸಂಗಿ ಅವರ 58ನೇ ಹುಟ್ಟುಹಬ್ಬದ ಪ್ರಯುಕ್ತ ಕಾಳಗಿ ತಾಲ್ಲೂಕಿನ ದಲಿತ ಸೇನೆಯ ಕಾರ್ಯಕರ್ತರು ಸ್ಥಳೀಯ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ, ನಿರ್ಗತಿಕರಿಗೆ, ಹಣ್ಣು ವಿತರಿಸಿ ಮಾನವಿಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಖತಲಪ್ಪಾ ಅಂಕನ, ನಾಗರಾಜ್ ಬೇವಿನಕರ್, ಮೋಹನ ಚಿನ್ನ, ನಾಗರಾಜ್ ಮಲಕೇರಿ, ಕಪಿಲಕುಮಾರ್ ದೊಡ್ಡಮನಿ, ಮಹಾದೇವ ದಂಡಿನ, ಆನಂದ ಪಾಳೆ , ಶಿವಕುಮಾರ್ ಮದನ್ಕುಮಾರ್ ಶಿವಕುಮಾರ್ ಪಾಚಿಮನಿ ಸೇರಿದಂತೆ ಅನೇಕ ದಲಿತ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಶಿವರಾಜ್ ಕಟ್ಟಿಮನಿ