ಬೆಳಗಾವಿ, ಕಲಬುರಗಿ ಸೇರಿ ದೇಶದ 8 ಕಡೆ ವಿಮಾನ ತರಬೇತಿ ಅಕಾಡೆಮಿ ಸ್ಥಾಪನೆ
ನವದೆಹಲಿ : ಕರ್ನಾಟಕದ ಕಲಬುರಗಿ ಸೇರಿ ದೇಶದ ಎಂಟು ಕಡೆಗಳಲ್ಲಿ ವಿಮಾನ ತರಬೇತಿ ಅಕಾಡೆಮಿ ಸ್ಥಾಪನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅನುಮತಿ ನೀಡಿದೆ.
ಬೆಳಗಾವಿ ಕಲಬುರ್ಗಿ ಅಲ್ಲದೆ ಜಲಗಾವ್, ಲಿಲಾಬರಿ, ಕಜುರಾವೋ ,ಸೇರಿದಂತೆ ದೇಶದ ಎಂಟು ಕಡೆಗಳಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಅನುಮಾನ ತರಬೇತಿ ಅಕಾಡೆಮಿ ಸ್ಥಾಪನೆ ನೀಡಲು ಸಮ್ಮತಿ ನೀಡಿದೆ.
ವಿದೇಶಗಳಲ್ಲಿರುವ ವಿಮಾನ ತರಬೇತಿ ಸಂಸ್ಥೆಗಳ ಮಾದರಿಯಲ್ಲೇ ಭಾರತದಲ್ಲಿ ಅತ್ಯುತ್ತಮ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ.
ವಿಮಾನ ತರಬೇತಿ ಅಕಾಡೆಮಿಗಳಲ್ಲಿ ನಾಗರಿಕ ವಾಣಿಜ್ಯ ಚಟುವಟಿಕೆಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಆತ್ಮನಿರ್ಬರ ಭಾರತ ಯೊಜನೆಯಡಿ ದೇಶದ ಎಂಟು ಕಡೆ ನಿಮಾನ ತರಬೇತಿ ಅಕಾಡೆಮಿ ಸ್ಥಾಪನೆ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ನೀಡಿದೆ ಮುಂದಿನ ದಿನಗಳಲ್ಲಿ ವಾಯುಯಾನ ಕ್ಷೇತ್ರದಲ್ಲಿ ಮತ್ತಷ್ಟು ಜನರನ್ನು ತರಬೇತಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ.