WTC Final: ‘ವಿಶ್ವದ ಎಲ್ಲಾ ಪಿಚ್‌ಗಳು ನಮಗೆ ಒಂದೆ’ ವಿಮಾನ ಹತ್ತುವ ಮುನ್ನ ಕೊಹ್ಲಿ ಬೆಂಕಿ ಮಾತು!
ಹೈಲೈಟ್ಸ್:
- ಬುಧವಾರ ತಡರಾತ್ರಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ಭಾರತ ಟೆಸ್ಟ್ ತಂಡ.
- ಜೂ.18 ರಿಂದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸೆಣಸಲಿರುವ ಭಾರತ-ನ್ಯೂಜಿಲೆಂಡ್.
- ಇಂಗ್ಲೆಂಡ್‌ಗೆ ತೆರಳುವ ಮುನ್ನ ವಿಶ್ವಾಸದ ಮಾತುಗಳನ್ನಾಡಿದ ವಿರಾಟ್ ಕೊಹ್ಲಿ.
ಹೊಸದಿಲ್ಲಿ: ಜೂನ್ 18 ರಿಂದ 22ರವರೆಗೆ ನಡೆಯುವ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ನಡುವಿನ ಮಹತ್ವದ ಕಾದಾಟಕ್ಕೆ ಸೌತಾಮ್ಟನ್‌ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗುತ್ತಿದೆ.
2019ರ ಆಗಸ್ಟ್ 1 ರಿಂದ ಆರಂಭವಾಗಿದ್ದ ಡಬ್ಲ್ಯುಟಿಸಿ ಪಂದ್ಯಗಳು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಎರಡು ವರ್ಷಗಳಿಗೂ ಅಧಿಕ ಅವಧಿಯವರೆಗೂ ನೆಡೆದಿದ್ದ ಸ್ಪರ್ಧೆಯಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ಅತ್ಯುತ್ತಮ ಪ್ರದರ್ಶನ ತೋರಿ ಫೈನಲ್‌ಗೆ ಅರ್ಹತೆ ಪಡೆದಿವೆ. ಅದ್ಭುತ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಚಾಂಪಿಯನ್‌ಷಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತ್ತು ಹಾಗೂ ನ್ಯೂಜಿಲೆಂಡ್ ಎರಡನೇ ಸ್ಥಾನ ಪಡೆದಿದೆ.
ಡಬ್ಲ್ಯುಟಿಸಿ ಸ್ಪರ್ಧೆಯಲ್ಲಿ ಭಾರತ ತಂಡ ಒಟ್ಟು ಆರು ಟೆಸ್ಟ್ ಸರಣಿಗಳನ್ನು ಆಡಿತ್ತು. ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಅವರದೇ ನೆಲದಲ್ಲಿ ಮಣಿಸಿತ್ತು. ನಂತರ ತವರು ಟೆಸ್ಟ್ ಸರಣಿಗಳಲ್ಲಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ಗೆಲುವು ಪಡೆದಿತ್ತು, ಇನ್ನು ನ್ಯೂಜಿಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಸೋಲು ಅನುಭವಿಸಿತ್ತು.
ಇಂಗ್ಲೆಂಡ್ ವಾತಾವರಣ ಹೆಚ್ಚು ಕಡಿಮೆ ನ್ಯೂಜಿಲೆಂಡ್‌ಗೆ ಹೋಲಿಕೆಯಾಗಲಿದ್ದು, ಇದು ಖಂಡಿತಾ ಕೇನ್ ವಿಲಿಯಮ್ಸನ್ ಪಡೆಗೆ ಲಾಭದಾಯಕವಾಗಲಿದೆ. ಚೆಂಡಿನ ಚಲನೆ ವಿರುದ್ಧ ಆಡುವಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ದೌರ್ಬಲ್ಯವನ್ನು ಹೊಂದಿದ್ದಾರೆ. ಇದು ಫೈನಲ್ ಹಣಾಹಣಿಗೆ ಟೀಮ್ ಇಂಡಿಯಾಗೆ ವಿಕ್‌ನೆಸ್ ಎಂತಲೇ ಹೇಳಬಹುದು. ಇದು ಕಿವೀಸ್ ವೇಗಿಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಇಂಗ್ಲೆಂಡ್‌ಗೆ ಪ್ರಯಾಣ ಆರಂಭಿಸುವ ಮುನ್ನ ಸುದ್ದಿಗೋಷ್ಠಿಯಲ್ಲಿ ಇದೇ ಪ್ರಶ್ನೆಯನ್ನು ನಾಯಕ ವಿರಾಟ್ ಕೊಹ್ಲಿ ಮುಂದಿಡಲಾಯಿತು. ಈ ಪ್ರಶ್ನೆಗೆ ಕೊಹ್ಲಿ ನೀಡಿದ ಉತ್ತರ ಟೀಮ್ ಇಂಡಿಯಾ ಕ್ಯಾಂಪ್‌ನ ಆಟಗಾರರ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಇಂಗ್ಲೆಂಡ್ ಪರಿಸ್ಥಿತಿಗಳು ನಮಗೆ ದೊಡ್ಡ ವಿಷಯವಲ್ಲ ಹಾಗೂ ಎದುರಾಳಿ ತಂಡಕ್ಕಿಂತ ಅತ್ಯುತ್ತಮ ಕ್ರಿಕೆಟ್ ಆಡುವ ಕಡೆ ನಮ್ಮ ತಂಡ ಗಮನ ಹರಿಸುತ್ತಿದೆ ಎಂದು ಹೇಳಿದರು.
“ನ್ಯೂಜಿಲೆಂಡ್ ಸೇರಿದಂತೆ ಯಾವುದೇ ಪರಿಸ್ಥಿತಿಗಳು ನಮಗೆ ಒಂದೇ ರೀತಿ ಇವೆ. ಹಾಗಾಗಿ, ಅತ್ಯುತ್ತಮ ಕ್ರಿಕೆಟ್ ಆಡುವುದು ನಮ್ಮ ಗುರಿ,” ಎಂದು ಕೊಹ್ಲಿ ಹೇಳಿದರು.
“ಆಸ್ಟ್ರೇಲಿಯಾ ಪರಿಸ್ಥಿತಿಗಳು ಅವರಿಗೆ ನೆಚ್ಚಿನದಾಗಿರುತ್ತದೆ, ಆದರೆ, ನಾವು ಅಲ್ಲಿ ಗೆಲುವು ಸಾಧಿಸಿದ್ದೇವೆ. ನೀವು ಸನ್ನಿವೇಶಗಳನ್ನು ಹೇಗೆ ನೋಡುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ನೀವು ವಿಮಾನ ಹತ್ತುವಾಗ, ನ್ಯೂಜಿಲೆಂಡ್ ಪರ ಯೋಚಿಸಿದಾಗ, ನೀವು ವಿಮಾನ ಏರುವುದರಲ್ಲಿ ಯಾವುದೇ ಅರ್ಥವಿಲ್ಲ,” ಎಂದು ತಿಳಿಸಿದರು.
“ನಾವು ಸಮಾನವಾಗಿದ್ದೇವೆಂಬ ಭಾವನೆಯೊಂದಿಗೆ ವಿಮಾನವನ್ನು ಹತ್ತಿದ್ದೇವೆ. ಸೆಷನ್‌ನಿಂದ ಸೆಷನ್‌ಗೆ ಹಾಗೂ ಗಂಟೆಯಿಂದ ಗಂಟೆಗೆ ಉತ್ತಮ ಪ್ರದರ್ಶನ ತೋರುವ ತಂಡ ಚಾಂಪಿಯನ್‌ಷಿಪ್ ಗೆಲ್ಲಲಿದೆ,” ಎಂದು ವಿರಾಟ್ ಕೊಹ್ಲಿ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತ್ಯದ ವೇಳೆಗೆ, ಆಟಗಾರರು ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಮತ್ತು ನಂತರ ಟಿ 20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾನಸಿಕ ಆರೋಗ್ಯವು ಗಂಭೀರ ವಿಷಯ ಎಂದು ಒಪ್ಪಿಕೊಂಡ ವಿರಾಟ್ ಕೊಹ್ಲಿ ಈ ರೀತಿ ಹೇಳಿದರು..
“ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ದೀರ್ಘಕಾಲದವರೆಗೆ ಆಟಗಾರರು ಪ್ರೇರೇಪಿತರಾಗಿ ಉಳಿಯುವುದು ಮತ್ತು ಸರಿಯಾದ ರೀತಿಯ ಮಾನಸಿಕ ಸ್ಥಳವನ್ನು ಕಂಡುಕೊಳ್ಳುವುದು, ಕೇವಲ ಇದು ಒಂದು ಪ್ರದೇಶದಲ್ಲಿ ಸೀಮಿತವಾಗಿರುವುದು ಬಹಳಾ ಕಷ್ಟ. ಅದರಲ್ಲೂ ದಿನ ಮತ್ತು ದಿನವಿಡೀ ಸಂಗತಿಗಳಿಗೆ ಒಳಗಾಗುವುದು ಮತ್ತು ಅಧಿಕ-ಒತ್ತಡದ ಸಂದರ್ಭಗಳೊಂದಿಗೆ ವ್ಯವಹರಿಸುವುದು ತುಂಬಾನೇ ಕಷ್ಟ,” ಎಂದು ತಿಳಿಸಿದರು.