ಸ್ಯಾಂಡಲ್ವುಡ್ ಲೀಡರ್ ಶಿವಣ್ಣ-ಯಡಿಯೂರಪ್ಪ ಭೇಟಿಗೆ ಮುಹೂರ್ತ ಫಿಕ್ಸ್.! ಯಾವೆಲ್ಲಾ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ ಹ್ಯಾಟ್ರಿಕ್ ಹೀರೋ..?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಚಂದನವನದ ನಾಯಕತ್ವ ಹೊತ್ತುಕೊಂಡಿದ್ದು, ಶಿವಣ್ಣ ಮೇಲೆ ಅತಿಯಾದ ಜವಾಬ್ದಾರಿ ಇದೆ. ಅದರಲ್ಲೂ ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಗಳು ಇನ್ನು ಜಾಸ್ತಿಯಾಗಿದೆ. ಇತ್ತೀಚೆಗಷ್ಟೆ ಚಿತ್ರರಂಗದ ಗಣ್ಯರೆಲ್ಲಾ ಸೇರಿ ಶಿವರಾಜ್ ಕುಮಾರ್ ಅವರಿಗೆ ಸಿನಿಮಾರಂಗದ ನಾಯಕತ್ವವನ್ನು ಒಕ್ಕೂರಲಿನಿಂದ ನೀಡಿ, ಈ ಮೂಲಕ ನಾವೆಲ್ಲಾ ಶಿವಣ್ಣನ ಜೊತೆಗೆ ಇದ್ದೀವಿ ಅಂತ ಹೇಳಿಕೊಂಡಿದ್ರು.
ಹಾಗೇ ಶಿವಣ್ಣ ಸಹ ನಾಯಕತ್ವ ವಹಿಸಿಕೊಂಡ ಎರಡೇ ದಿನಕ್ಕೆ ಚಿತ್ರರಂಗದ ಟಾಪ್ ನಾಯಕ ನಟರನ್ನು ಮನೆಗೆ ಕರೆಸಿಕೊಂಡಿದ್ದರು. ಆ ಸಭೆಗೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರನ್ನು ಆಹ್ವಾನಿಸಿ ಚರ್ಚಿಸಿದರು. ಇದೀಗ ಸಿಎಂ ಅವರನ್ನು ಸಹ ಭೇಟಿ ಮಾಡಲು ನಿಶ್ಚಯಿಸಿದ್ದಾರೆ
ಯಡಿಯೂರಪ್ಪ ಅವರ ಜೊತೆ ಶಿವಣ್ಣ ಹಲವು ವಿಷಯಗಳ ಬಗ್ಗೆ ಚರ್ಚೆ
ಸರ್ಕಾರದಿಂದ ಚಿತ್ರೋದ್ಯಮ ನಿರೀಕ್ಷಿಸುತ್ತಿರುವ ಸಹಾಯ, ಚಿತ್ರೋದ್ಯಮದ ಭವಿಷ್ಯ. ಸರ್ಕಾರ ಮತ್ತು ಚಿತ್ರೋದ್ಯಮದ ನಡುವೆ ಸಮನ್ವಯ ಹೀಗೆ ಹಲವು ವಿಷಯಗಳ ಬಗ್ಗೆ ಶಿವರಾಜ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಬಳಿ ಚರ್ಚಿಸಲಿದ್ದಾರೆ. ಶಿವಣ್ಣ ಅವರ ಜೊತೆಗೆ ಇನ್ನೂ ಕೆಲವು ಚಿತ್ರರಂಗದ ಪ್ರಮುಖರೊಂದಿಗೆ ಸಿಎಂ ಯಡಿಯೂರಪ್ಪ ಅವರನ್ನು ಮಂಗಳವಾರ ಅವರ ಅಧಿಕೃತ ಕಚೇರಿಯಲ್ಲಿ ಭೇಟಿ ಮಾಡಲಿದ್ದಾರೆ. ಮೊದಲಿಗೆ ಸೋಮವಾರ ನಿಗದಿಯಾಗಿದ್ದ ಈ ಸಭೆ ನಂತರ ಮಂಗಳವಾರಕ್ಕೆ ಮುಂದಕ್ಕೆ ಹೋಗಿದೆ.