ಲಾಕ್‌ಡೌನ್ ವಿಸ್ತರಣೆ ಬೆನ್ನಲ್ಲೇ 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಸಿಎಂ ಬಿಎಸ್‌ವೈ

ಹೈಲೈಟ್ಸ್‌:

  • ಚಲನ ಚಿತ್ರ ಕಲಾವಿದರು, ತಂತ್ರಜ್ಞರಿಗೆ ಪರಿಹಾರ
  • ಮೀನುಗಾರರು, ಅರ್ಚಕರಿಗೂ ಸಿಕ್ತು ಪರಿಹಾರ
  • ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೂ ಪ್ಯಾಕೇಜ್‌ನಲ್ಲಿ ಸ್ಥಾನ

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಿರುವ ಜೊತೆಯಲ್ಲೇ, ಸಿಎಂ ಯಡಿಯೂರಪ್ಪಪ್ಯಾಕೇಜ್ ಕೂಡಾ ಘೋಷಣೆ ಮಾಡಿದ್ದಾರೆ. ಜೂನ್ 14ರವರೆಗೆ ಲಾಕ್‌ಡೌನ್ ಮುಂದುವರೆದಿರುವ ಹಿನ್ನೆಲೆಯಲ್ಲಿ, ಆರ್ಥಿಕ ಸಂಕಷ್ಟದಲ್ಲಿ ಇರುವ ವರ್ಗಕ್ಕೆ 500 ಕೋಟಿ ರೂ. ಮೊತ್ತದ ಪ್ಯಾಕೇಜ್ಘೋಷಿಸಲಾಗಿದೆ.

ಚಲನಚಿತ್ರ ಕಿರುತೆರೆ ಕಲಾವಿದರು, ತಂತ್ರಜ್ಞರಿಗೆ ತಲಾ ಮೂರು ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಮೀನುಗಾರಿಗೂ ತಲಾ ಮೂರು ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಮುಜರಾಯಿ ಇಲಾಖೆ ದೇವಸ್ಥಾನ ವ್ಯಾಪ್ತಿಗೆ ಬರುವ ಅರ್ಚಕರು, ಸಿಬ್ಬಂದಿಗೆ ತಲಾ ಮೂರು ಸಾವಿರ ನೀಡಲು ನಿರ್ಧರಿಸಲಾಗಿದೆ.

ಮಸೀದಿ ಇಮಾಮ್ ಹಾಗೂ ಮೌಜನ್ (ಮಸೀದಿ ನಿರ್ವಾಹಕ)ಗೆ ತಲಾ ಮೂರು ಸಾವಿರ ಪರಿಹಾರ ಘೋಷಿಸಲಾಗಿದೆ. ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರು, ಸಹಾಯಕರಿಗೆ ತಲಾ ಎರಡು ಸಾವಿರ ಪರಿಹಾರ ಘೋಷಿಸಲಾಗಿದೆ.

ಪ್ರೌಢಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ. ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿನ 56 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಹಾಲಿನ ಪುಡಿ ನೀಡಲು ನಿರ್ಧರಿಸಲಾಗಿದೆ. ಹಾಗೂ 3 ಲಕ್ಷ ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಸಲು 120 ಕೋಟಿ ರೂ. ಮೀಸಲಿಡಲು ಸರ್ಕಾರ ನಿರ್ಧರಿಸಿದೆ.

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *